ಲೋಕಸಭಾ ಚುನಾವಣೆ(Lok Sabha Election: ಯ ಮೊದಲ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತದ ಮತದಾನಕ್ಕೆ ರಾಜ್ಯಗಳು ಸಿದ್ಧವಾಗುತ್ತಿವೆ. ಅಮೇಥಿಯಲ್ಲಿ ಮೇ 20ರಂದು ಮತದಾನ ನಡೆಯಲಿದ್ದು ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡದೆ ಕುತೂಹಲ ಮುಂದುವರೆಸಿದೆ. ಆದರೆ ಈಗಾಗಲೇ ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿವೆ. ಅದರಲ್ಲಿ ಈ ಬಾರಿ ರಾಬರ್ಟ್ ವಾದ್ರಾ ಎನ್ನುವ ಅರ್ಥವನ್ನು ಕೊಡುವ ವಾಖ್ಯವನ್ನು ಬರೆಯಲಾಗಿದೆ.
ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ಮೇ 20 ರಂದು ಅಮೇಥಿ ಮತದಾನ ನಡೆಯಲಿದ್ದು, ಮೇ 3 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿ ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಕಾಂಗ್ರೆಸ್ ತನ್ನ ಆಯ್ಕೆಯನ್ನು ಇನ್ನೂ ಹೆಸರಿಸಿಲ್ಲ.
ಅಮೇಥಿಯಿಂದ ರಾಬರ್ಟ್ ವಾದ್ರಾ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಗಳು ಎದ್ದಿದ್ದವು. ಇದಕ್ಕೂ ಮುನ್ನ ರಾಬರ್ಟ್ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇರುವ ಬಗ್ಗೆ ಸುಳಿವು ನೀಡಿದ್ದರು.
ಮತ್ತಷ್ಟು ಓದಿ: ಬಸ್ನಲ್ಲಿ ಕರ್ಚೀಫ್ ಹಾಕಿ ಸೀಟು ಹಿಡಿದಂತಲ್ಲ ರಾಜಕಾರಣ: ಸ್ಮೃತಿ ಇರಾನಿ
ಅಮೇಥಿಯು ಗಾಂಧಿಯವರ ಕುಟುಂಬದ ಸ್ಥಾನವಾಗಿದ್ದು, ಹಿಂದೆ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರತಿನಿಧಿಸಿದ್ದರು. 2019 ರ ಚುನಾವಣೆಯಲ್ಲಿ, ಕೇರಳದ ವಯನಾಡಿನಲ್ಲಿ ಗೆಲುವು ಸಾಧಿಸಲು ಯಶಸ್ವಿಯಾದ ರಾಹುಲ್ ಗಾಂಧಿ ಸ್ಮೃತಿ ಇರಾನಿ ವಿರುದ್ಧ ಪರಾಭವಗೊಂಡಿದ್ದರು. ನಿನ್ನೆಯಷ್ಟೇ ರಾಜಕೀಯ ಎಂಬುದು ಬಸ್ನಲ್ಲಿ ಕರ್ಚೀಫ್ ಹಾಕಿ ಸೀಟು ಹಿಡಿದಂತಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ