Haryana: ಬಿಜೆಪಿಯೊಂದಿಗಿಲ್ಲ ಮೈತ್ರಿ, 10 ಲೋಕಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಸ್ವತಂತ್ರ ಸ್ಪರ್ಧೆ

|

Updated on: Mar 28, 2024 | 8:11 AM

ಮುಂಬರುವ ಲೋಕಸಭಾ ಚುನಾವಣೆಯಲ್ಲಿ  ಹರ್ಯಾಣದ ಎಲ್ಲಾ 10 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಪ್ರಕಟಿಸಿದೆ. ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ಕೆಲವು ದಿನಗಳ ನಂತರ ಪಕ್ಷದಿಂದ ಈ ಘೋಷಣೆ ಮಾಡಲಾಗಿದೆ.

Haryana: ಬಿಜೆಪಿಯೊಂದಿಗಿಲ್ಲ ಮೈತ್ರಿ, 10 ಲೋಕಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಸ್ವತಂತ್ರ ಸ್ಪರ್ಧೆ
ಅಜಯ್​ ಸಿಂಗ್
Follow us on

ಮುಂಬರುವ ಲೋಕಸಭಾ ಚುನಾವಣೆ(Lok Sabha Election)ಯಲ್ಲಿ  ಹರ್ಯಾಣದ ಎಲ್ಲಾ 10 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಪ್ರಕಟಿಸಿದೆ. ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ಕೆಲವು ದಿನಗಳ ನಂತರ ಪಕ್ಷದಿಂದ ಈ ಘೋಷಣೆ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಅಜಯ್ ಸಿಂಗ್ ಚೌಟಾಲಾ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹರ್ಯಾಣದ ಎಲ್ಲಾ 10 ಲೋಕಸಭಾ ಸ್ಥಾನಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಆಡಳಿತಾರೂಢ ಬಿಜೆಪಿ ಎಲ್ಲಾ 10 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮೇ 25 ರಂದು ರಾಜ್ಯದಲ್ಲಿ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಜೆಜೆಪಿಯ ಈ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಿಶಾನ್ ಸಿಂಗ್ ಕೂಡ ಉಪಸ್ಥಿತರಿದ್ದರು.
ಕೆಲವು

ದಿನಗಳ ಹಿಂದೆ ಹರಿಯಾಣದಲ್ಲಿ ಸಿಎಂ ಮುಖವನ್ನೇ ಬದಲಿಸಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನೈಬ್ ಸಿಂಗ್ ಸೈನಿ ಅವರಿಗೆ ಕಮಾಂಡ್ ನೀಡಲಾಗಿದ್ದು, ಇದರೊಂದಿಗೆ ಬಿಜೆಪಿ-ಜೆಜೆಪಿ ಮೈತ್ರಿಯೂ ಅಂತ್ಯಗೊಂಡಿದೆ. ಇದರ ನಂತರ, ಜೆಜೆಪಿ ಮುಖ್ಯಸ್ಥ ಅಜಯ್ ಸಿಂಗ್ ಚೌಟಾಲಾ ಅವರು ತಮ್ಮ ಪಕ್ಷವು ಬಿಜೆಪಿಯಿಂದ ಎರಡು ಸ್ಥಾನಗಳನ್ನು ಕೇಳಿದೆ ಆದರೆ ಬಿಜೆಪಿ ನಿರಾಕರಿಸಿದೆ ಎಂದು ಹೇಳಿದ್ದರು.

ಮತ್ತಷ್ಟು ಓದಿ: Varun Gandhi: ಊಹಾಪೋಹಗಳಿಗೆ ತೆರೆ, ಪಿಲಿಭಿತ್​​ನಿಂದ ಸ್ಪರ್ಧಿಸುತ್ತಿಲ್ಲ ವರುಣ್ ಗಾಂಧಿ

ಹರ್ಯಾಣದಲ್ಲಿ 2019 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದು, ಅದರಲ್ಲಿ ದುಶ್ಯಂತ್ ಚೌಟಾಲಾ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಹರಿಯಾಣದ ಎಲ್ಲಾ 10 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆ ಮೇ 25 ರಂದು ನಡೆಯಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ