Lok Sabha Election: ಪ್ರಧಾನಿ ಮೋದಿ ಸೇರಿ ಏಳನೇ ಹಂತದ ಚುನಾವಣಾ ಕಣದಲ್ಲಿರುವ ದಿಗ್ಗಜರು ಯಾರ್ಯಾರು?

|

Updated on: May 30, 2024 | 10:44 AM

Lok Sabha Election 2024 Phase 7 Key Candidates: 2024 ರ ಲೋಕಸಭಾ ಚುನಾವಣೆಯ ಕೊನೆಯ ಮತ್ತು ಏಳನೇ ಹಂತದ ಮತದಾನ ಜೂನ್ 1 ರಂದು ನಡೆಯಲಿದೆ. ಕೊನೆಯ ಹಂತದಲ್ಲಿ ಎಂಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಬಿಹಾರ, ಹಿಮಾಚಲ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢದಲ್ಲಿ ಮತದಾನ ನಡೆಯಲಿದೆ. ಈ ಹಂತದಲ್ಲಿ ಪ್ರಧಾನಿ ಮೋದಿ ಸೇರಿ ಯಾವ್ಯಾವ ದಿಗ್ಗಜರು ಕಣದಲ್ಲಿದ್ದಾರೆ ಎಂಬುದನ್ನು ತಿಳಿಯೋಣ.

Lok Sabha Election: ಪ್ರಧಾನಿ ಮೋದಿ ಸೇರಿ ಏಳನೇ ಹಂತದ ಚುನಾವಣಾ ಕಣದಲ್ಲಿರುವ ದಿಗ್ಗಜರು ಯಾರ್ಯಾರು?
ನರೇಂದ್ರ ಮೋದಿ
Follow us on

2024ರ ಲೋಕಸಭಾ ಚುನಾವಣೆ(Lok Sabha Election)ಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಜೂನ್​ 1ರಂದು ನಡೆಯಲಿದೆ. ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅದೇ ದಿನ ಪಂಜಾಬ್​ ಹಾಗೂ ಹಿಮಾಚಲಪ್ರದೇಶದ ಎಲ್ಲಾ ಸ್ಥಾನಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಈ ಹಂತದಲ್ಲಿ ಬಿಹಾರದ ಎಂಟು, ಚಂಡೀಗಢದ 1, ಹಿಮಾಚಲಪ್ರದೇಶದ 4, ಜಾರ್ಖಂಡ್​ನ 3, ಒಡಿಶಾಲದ 6, ಪಂಜಾಬ್​ನ 13, ಉತ್ತರ ಪ್ರದೇಶದ 13 ಮತ್ತು ಪಶ್ಚಿಮ ಬಂಗಾಳದ 9 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ದೊಡ್ಡ ದೊಡ್ಡ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ವಾರಾಣಸಿಯಿಂದ ಚುನಾವಣೆಗೆ ಸ್ಪರ್ಧಿಸತ್ತಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ನ ಅಜಯ್​ ರೈ ಕಣದಲ್ಲಿದ್ದಾರೆ, ಹಿಮಾಚಲ ಪ್ರದೇಶದಿಂದ ಸ್ಪರ್ಧಿಸುತ್ತಿರುವ ನಟಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್​ನ ವಿಕ್ರಮಾದಿತ್ಯ ಸಿಂಗ್ ಕಣದಲ್ಲಿದ್ದಾರೆ. ಗೋರಖ್​ಪುರದಿಂದ ರವಿ ಕಿಶನ್ ಸ್ಪರ್ಧಿಸುತ್ತಿದ್ದಾರೆ ಅವರ ವಿರುದ್ಧ ಎಸ್​ಪಿಯ ಕಾಜಲ್ ನಿಶಾದ್ ಇದ್ದಾರೆ.

ಮತ್ತಷ್ಟು ಓದಿ: Lok Sabha Elections 2024: ಇಂದು ಏಳನೇ ಹಂತದ ಮತದಾನ ಪ್ರಚಾರ, ಅಂತಿಮ ಕಸರತ್ತು, ಮೋದಿ, ರಾಹುಲ್​ ಪ್ರಚಾರ ಎಲ್ಲೆಲ್ಲಿ?

ಹಮೀಪುರದಲ್ಲಿ ಅನುರಾಗ್​ ಠಾಕೂರ್ ಸ್ಫರ್ಧಿಸುತ್ತಿದ್ದು ಅವರ ವಿರುದ್ಧ ಕಾಂಗ್ರೆಸ್​ನ ಸತ್ಪಾಲ್ ಸಿಂಗ್ ಕಣದಲ್ಲಿದ್ದಾರೆ. ಡೈಮಂಡ್ ಹಾರ್ಬರ್​ನಿಂದ ಅಭಿಷೇಕ್ ಬ್ಯಾನರ್ಜಿ ಕಣದಲ್ಲಿದ್ದಾರೆ. ಇದುವರೆಗೆ ಮೊದಲ ಹಂತದ ಚುನಾವಣೆಯಲ್ಲಿ 102 ಲೋಕಸಭಾ ಕ್ಷೇತ್ರಗಳಲ್ಲಿ ಶೇ.66.14ರಷ್ಟು ಮತದಾನವಾಗಿದೆ. ಎರಡನೇ ಹಂತದಲ್ಲಿ 88 ಲೋಕಸಭಾ ಕ್ಷೇತ್ರಗಳಲ್ಲಿ ಶೇ.66.71ರಷ್ಟಿತ್ತು.

ಮೂರನೇ ಹಂತದಲ್ಲಿ 94 ಲೋಕಸಭಾ ಕ್ಷೇತ್ರಗಳಲ್ಲಿ ಶೇ.65.68 ಮತದಾನ ನಡೆದಿದ್ದರೆ, ನಾಲ್ಕನೇ ಹಂತದಲ್ಲಿ 96 ಕ್ಷೇತ್ರಗಳಲ್ಲಿ ಒಟ್ಟು ಶೇ.69.16ರಷ್ಟು ಮತದಾನವಾಗಿದೆ. ಐದನೇ ಹಂತದಲ್ಲಿ 49 ಕ್ಷೇತ್ರಗಳಲ್ಲಿ ಶೇ.62.2ರಷ್ಟು ಮತದಾನ ನಡೆದಿದ್ದರೆ, ಆರನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಶೇ.61.98 ರಷ್ಟು ಮತದಾನವಾಗಿದೆ.

ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಜೂನ್ 1ರಂದು ಶನಿವಾರ ನಡೆಯಲಿದೆ. ಲೋಸಕಭಾ ಚುನಾವಣೆಯ ಏಳನೇ ಹಂತದ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಲೋಕಸಭಾ ಚುನಾವಣೆಯ ಏಳನೇ ಹಂತದಲ್ಲಿ 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ