ಪ್ರಧಾನಿ ನರೇಂದ್ರ ಮೋದಿ(Narendra Modi) ಒಡಿಶಾದಲ್ಲಿ ನಡೆಸಿದ ಲೋಕಸಭಾ ಚುನಾವಣಾ(Lok Sabha Election) ಪ್ರಚಾರದ ಸಂದರ್ಭದಲ್ಲಿ ವೇದಿಕೆ ಮೇಲೆ ಮಹಿಳೆಯೊಬ್ಬರಿಗೆ ಮಂಡಿಯೂರಿ ನಮಸ್ಕರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದೀಗ ಆ ಮಹಿಳೆ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಆ ಮಹಿಳೆ ಹೆಸರು ಕಮಲಾ ಮಹಾರಾಣಾ. ಕಮಲಾ ಅವರು ತ್ಯಾಜ್ಯದಿಂದ ವಿವಿಧ ವಿಶಿಷ್ಟ ವಸ್ತುಗಳನ್ನು ತಯಾರಿಸುವಲ್ಲಿ ಪ್ರಸಿದ್ಧರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿನ್ನೆ ಚುನಾವಣಾ ರ್ಯಾಲಿ ನಡೆಸಲು ಕೇಂದ್ರಪಾರಕ್ಕೆ ತೆರಳಿದ್ದರು. ಇಲ್ಲಿ ಅವರು ಕಮಲಾ ಮಹಾರಾಣಾ ಅವರನ್ನು ಭೇಟಿಯಾದರು. ಕಮಲಾ ಅವರು ಸ್ವ-ಸಹಾಯ ಗುಂಪಿನ ಭಾಗವಾಗಿದ್ದಾರೆ. ಮತ್ತು ‘ವೇಸ್ಟ್ ಟು ವೆಲ್ತ್’ ಜೊತೆಗೆ ಮಹಿಳಾ ಸಬಲೀಕರಣದಲ್ಲಿ ಕೆಲಸ ಮಾಡುತ್ತಾರೆ.
ಕಳೆದ ವರ್ಷ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಅವರನ್ನು ಉಲ್ಲೇಖಿಸಲಾಗಿತ್ತು. ಇತ್ತೀಚೆಗೆ ಕಮಲಾ ಅವರು ಪ್ರಧಾನಿ ಮೋದಿಯವರಿಗೆ ವಸ್ತ್ರದಿಂದ ತಯಾರಿಸಿದ ರಾಖಿಯನ್ನೂ ಕಳುಹಿಸಿದ್ದರು.
ಮತ್ತಷ್ಟು ಓದಿ: Lok Sabha Election: ಪ್ರಧಾನಿ ಮೋದಿ ಸೇರಿ ಏಳನೇ ಹಂತದ ಚುನಾವಣಾ ಕಣದಲ್ಲಿರುವ ದಿಗ್ಗಜರು ಯಾರ್ಯಾರು?
ಕಮಲಾ ಮಹಾರಾಣಾ ಒಡಿಶಾದ ಕೇಂದ್ರಪಾರಾ ಮೂಲದ 63 ವರ್ಷದ ಮಹಿಳೆ. ಅವರು ಪ್ರದೇಶದ ಗುಲ್ನಗರ ಪ್ರದೇಶದಲ್ಲಿ ಕಮಲಾ ಆಂಟಿ ಎಂದು ಪ್ರಸಿದ್ಧರಾಗಿದ್ದಾರೆ. ಕಮಲಾ ಅವರು ಮಹಿಳಾ ಸ್ವ-ಸಹಾಯ ಗುಂಪು (SHG) ನಡೆಸುತ್ತಿದ್ದಾರೆ. ಈ ಗುಂಪು ತ್ಯಾಜ್ಯ ಹಾಲಿನ ಚೀಲಗಳು ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತದೆ.
ಸಹೋದರಿ ಎಂದು ಪ್ರಧಾನಿ ಮೋದಿ ಹೇಳಿದ್ದರು
ಕಳೆದ ವರ್ಷ ಫೆಬ್ರವರಿ 26 ರಂದು, ಪ್ರಧಾನಿ ಮೋದಿ ಅವರು 98 ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಮಲಾ ಅವರ ತ್ಯಾಜ್ಯದಿಂದ ಹಣ ಮಾಡುವ ಉಪಕ್ರಮವನ್ನು ಪ್ರಸ್ತಾಪಿಸಿದ್ದರು. ಕಾರ್ಯಕ್ರಮದ ವೇಳೆ ಕಮಲಾ ಅವರನ್ನು ತಮ್ಮ ಸಹೋದರಿ ಎಂದೂ ಮೋದಿ ಕರೆದಿದ್ದರು. ಒಡಿಶಾದಲ್ಲಿ ಕಮಲಾ ಮೋದಿಯವರನ್ನು ಭೇಟಿಯಾಗಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಆ ಮಹಿಳೆ ಕಾಲಿಗೆ ನಮಸ್ಕರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ