ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದಂತೆ, ರಾಜ್ಯಾದ್ಯಂತ ಧಾರ್ಮಿಕ ಪ್ರದೇಶಗಳಲ್ಲಿ ಹಾಕಲಾಗಿದ್ದ ನೂರಾರು ಧ್ವನಿವರ್ಧಕಗಳನ್ನು ತೆಗೆಯಲಾಗಿದೆ ಮತ್ತು ಸಾವಿರಾರು ಲೌಡ್ಸ್ಪೀಕರ್ಗಳ ಶಬ್ದಗಳನ್ನು ನಿಯಂತ್ರಿಸಲಾಗಿದೆ ಎಂದು ಆ ರಾಜ್ಯದ ಪೊಲೀಸರು ತಿಳಿಸಿದ್ದಾರೆ. ಈಗಂತೂ ಬಹುತೇಕ ರಾಜ್ಯಗಳಲ್ಲಿ ಹನುಮಾನ್ ಚಾಲೀಸಾ-ಆಜಾನ್, ಧ್ವನಿವರ್ಧಕ ಗಲಾಟೆಯೇ ಹೆಚ್ಚಾಗಿದೆ. ಅದರಲ್ಲೂ ದೆಹಲಿಯ ಜಹಾಂಗೀರ್ಪುರಿಯಲ್ಲಿ ಹನುಮಜಯಂತಿ ಮೆರವಣಿಗೆಯಂದು ಗಲಭೆ ನಡೆದ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಸಭೆ ನಡೆಸಿ ಹೀಗೊಂದು ಖಡಕ್ ಆದೇಶ ನೀಡಿಬಿಟ್ಟಿದ್ದರು. ಕೆಲವು ಧಾರ್ಮಿಕ ಪ್ರದೇಶಗಲ್ಲಿ ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಲಾಗಿದೆ. ಹಾಗೇ, ಇನ್ನೂ ಕೆಲವು ಕಡೆಗಳಲ್ಲಿ ಅನುಮತಿ ಪಡೆದು ಹಾಕಿದ್ದರೂ ನಿಗದಿತ ಡೆಸಿಬಲ್ಗಿಂತ ಜಾಸ್ತಿ ಶಬ್ದ ಬರುವಂತೆ ಇಡಲಾಗಿದೆ. ಅಕ್ರಮವಾಗಿ ಹಾಕಿರುವ ಲೌಡ್ಸ್ಪೀಕರ್ ತೆಗೆದು ಹಾಕಬೇಕು ಮತ್ತು ಉಳಿದ ಧ್ವನಿವರ್ಧಕಗಳ ಶಬ್ದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಮತ್ತು, ಇನ್ಯಾರಿಗೂ ಮೈಕ್ ಅಳವಡಿಸಿಕೊಳ್ಳಲು ಹೊಸದಾಗಿ ಅವಕಾಶ ನೀಡಬಾರದು ಎಂದೂ ಹೇಳಿದ್ದರು.
ಬರುವ ತಿಂಗಳು ಮುಸ್ಲಿಮರ ಈದ್ ಮತ್ತು ಹಿಂದುಗಳ ಅಕ್ಷಯ ತೃತೀಯಾ ಹಬ್ಬಗಳು ಬಹುತೇಕ ಒಟ್ಟಿಗೇ ನಡೆಯುತ್ತವೆ. ಈ ಹೊತ್ತಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ಕೊಡಬಾರದು ಎಂದು ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಇನ್ನು ಧ್ವನಿವರ್ಧಕಗಳನ್ನು ಧಾರ್ಮಿಕ ಪ್ರದೇಶಗಳಿಂದ ತೆಗೆದು ಹಾಕುವ ಬಗ್ಗೆ, ವಿವಿಧ ಧಾರ್ಮಿಕ ಮುಖಂಡರ ಬಳಿ ಚರ್ಚಿಸಲಾಗಿದ್ದು, ಈಗ ಪೊಲೀಸರು ಅವುಗಳನ್ನು ತೆಗೆದು ಹಾಕುವ ಮತ್ತು ಶಬ್ದ ನಿಯಂತ್ರಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ವಿವಿಧ ಠಾಣೆಗಳ ಪೊಲೀಸರು ಟ್ವಿಟರ್ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ದೇಗುಲ, ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನು ಖುದ್ದಾಗಿ ಪೊಲೀಸರೇ ತೆಗೆದು ಹಾಕುತ್ತಿರುವುದನ್ನು ನೋಡಬಹುದು. ಯುಪಿ ಪೊಲೀಸರ ಈ ಕ್ರಮವನ್ನು ಹಲವು ಧಾರ್ಮಿಕ ಮುಖಂಡರು ಹೊಗಳಿದ್ದಾರೆ. ಇನ್ನು ಮದುವೆ ಮನೆಗಳಲ್ಲಿ, ಧಾರ್ಮಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ಇಡುವವರು ಶಬ್ದದ ಪ್ರಮಾಣ ಎಷ್ಟಿಡಬೇಕು ಎಂಬುದನ್ನೂ ಪೊಲೀಸರು ನಿಗದಿಪಡಿಸಿ, ಆ ಸಂಬಂಧ ಕರಪತ್ರಗಳನ್ನು ನೀಡುತ್ತಿದ್ದಾರೆ.
मा0 उच्चतम न्यायालय द्वारा जारी आदेश के अनुपालन में थाना खरगूपुर क्षेत्र के मंदिर/मस्जिद के धर्मगुरुओं द्वारा आपसी सहमति से अपने-अपने धार्मिक प्रांगण में लगे लाउड स्पीकरों को स्वेच्छा से हटावाया गया एवं अन्य की गति धीमी की गई। pic.twitter.com/o4Pzt82kJ0
— Gonda Police (@gondapolice) April 27, 2022
ಇದನ್ನೂ ಓದಿ: IPL 2022: ಈ ಐಪಿಎಲ್ನಲ್ಲಿ ಮುಂಬೈ- ಚೆನ್ನೈ ಕಳಪೆ ಪ್ರದರ್ಶನ ನೀಡಲು ಕಾರಣವೇನು ಗೊತ್ತಾ?