Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಒತ್ತಾಯ

ಕೇಂದ್ರವು ಕಳೆದ ನವೆಂಬರ್‌ನಲ್ಲಿ ಇಂಧನ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತು ಮತ್ತು ತೆರಿಗೆಯನ್ನು ಕಡಿಮೆ ಮಾಡಲು ರಾಜ್ಯಗಳಿಗೆ ಮನವಿ ಮಾಡಿತು. ನಾನು ಯಾರನ್ನೂ ಟೀಕಿಸುವುದಿಲ್ಲ ಆದರೆ...

ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಒತ್ತಾಯ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 27, 2022 | 2:39 PM

ದೆಹಲಿ:  ದೇಶದ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ಅನುಗುಣವಾಗಿ  ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ (VAT) ಅನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ರಾಜ್ಯಗಳಿಗೆ ಮನವಿ ಮಾಡಿದರು. ದೇಶಾದ್ಯಂತದ ನಗರಗಳಲ್ಲಿ ಇಂಧನ ಬೆಲೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ವ್ಯಾಟ್ ಅನ್ನು ಕಡಿಮೆ ಮಾಡಿದ ರಾಜ್ಯಗಳು ಕಡಿಮೆ ಇಂಧನ ಬೆಲೆಗಳನ್ನು ಹೊಂದಿವೆ ಎಂದು ಸೂಚಿಸಿದರು. ಕೇಂದ್ರವು ಕಳೆದ ನವೆಂಬರ್‌ನಲ್ಲಿ ಇಂಧನ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು(excise duty) ಕಡಿಮೆ ಮಾಡಿತು ಮತ್ತು ತೆರಿಗೆಯನ್ನು ಕಡಿಮೆ ಮಾಡಲು ರಾಜ್ಯಗಳಿಗೆ ಮನವಿ ಮಾಡಿತು  “ನಾನು ಯಾರನ್ನೂ ಟೀಕಿಸುವುದಿಲ್ಲ, ಕೇವಲ ಚರ್ಚಿಸುತ್ತಿದ್ದೇನೆ” ಎಂದು ಬೆಲೆ ಏರಿಕೆ ಸಮಯದಲ್ಲಿ ಇಂಧನದ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡದ ರಾಜ್ಯಗಳನ್ನು ಪಟ್ಟಿ ಮಾಡುವಾಗ ಪ್ರಧಾನಿ ಹೇಳಿದರು. “ಯಾವುದೋ ಕಾರಣಕ್ಕಾಗಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಲು ಒಪ್ಪಲಿಲ್ಲ. ಹೆಚ್ಚಿನ ಬೆಲೆಗಳ ಹೊರೆ ನಾಗರಿಕರ ಮೇಲೆ ಉಳಿಯಿತು” ಎಂದು ಅವರು ಹೇಳಿದರು.ತಮ್ಮ ತೆರಿಗೆಯನ್ನು ಕಡಿಮೆ ಮಾಡುವ ರಾಜ್ಯಗಳು ಆದಾಯದಲ್ಲಿ ನಷ್ಟವನ್ನು ಅನುಭವಿಸುವುದು ಸಹಜ ಆದರೆ ಹಲವಾರು ರಾಜ್ಯಗಳು ಆ “ಸಕಾರಾತ್ಮಕ ಹೆಜ್ಜೆ” ತೆಗೆದುಕೊಂಡಿವೆ ಎಂದು ಪ್ರಧಾನಿ ಹೇಳಿದರು.

ಕರ್ನಾಟಕ ತೆರಿಗೆ ಕಡಿತ ಮಾಡದೇ ಇದ್ದಿದ್ದರೆ ಕಳೆದ ಆರು ತಿಂಗಳ ಅವಧಿಯಲ್ಲಿ ₹ 5,000 ಕೋಟಿಗೂ ಅಧಿಕ ಆದಾಯ ಸಂಗ್ರಹಿಸುತ್ತಿತ್ತು. ಗುಜರಾತ್ ಕೂಡ ₹ 3,500-4,000 ಕೋಟಿ ಹೆಚ್ಚು ಸಂಗ್ರಹಿಸುತ್ತಿತ್ತು ಎಂದು ಅವರು ಹೇಳಿದರು. ವ್ಯಾಟ್ ಅನ್ನು ಕಡಿಮೆ ಮಾಡದ ರಾಜ್ಯಗಳು ಸಾವಿರಾರು ಕೋಟಿಗಳಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸಿದವು.

ರಾಜ್ಯ ಇಂಧನ ತೆರಿಗೆಯನ್ನು ಕಡಿಮೆ ಮಾಡಿ ಅದರ ಲಾಭವನ್ನು ನಾಗರಿಕರಿಗೆ ವರ್ಗಾಯಿಸುವಂತೆ ಮೋದಿ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಕೇಂದ್ರದ ಆದಾಯದ 42 ಪ್ರತಿಶತ ರಾಜ್ಯಗಳಿಗೆ ಹೋಗುತ್ತದೆ ಎಂದಿದ್ದಾರೆ. “ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ, ನಾವು ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಅನುಸರಿಸಬೇಕು ಮತ್ತು ತಂಡವಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಎಲ್ಲಾ ರಾಜ್ಯಗಳಿಗೆ ವಿನಂತಿಸುತ್ತೇನೆ” ಎಂದು ಅವರು ಹೇಳಿದರು.

ಉಷ್ಣ ಗಾಳಿಯ ನಡುವೆ ಹೆಚ್ಚುತ್ತಿರುವ ಅಗ್ನಿ ಅವಘಡಗಳನ್ನು ತಡೆಗಟ್ಟಲು ಎಲ್ಲಾ ಆಸ್ಪತ್ರೆಗಳ ಸುರಕ್ಷತಾ  ಲೆಕ್ಕಪರಿಶೋಧನೆಗಳನ್ನು ಆದ್ಯತೆಯ ಆಧಾರದ ಮೇಲೆ ಮಾಡುವಂತೆ ನಾನು ಎಲ್ಲಾ ರಾಜ್ಯಗಳನ್ನು ಕೋರುತ್ತೇನೆ. ನಮ್ಮ ಪ್ರತಿಕ್ರಿಯೆ ಸಮಯವೂ ಕನಿಷ್ಠವಾಗಿರಬೇಕು ಎಂದು ದೇಶದಲ್ಲಿನ ಕೊವಿಡ್ ಪರಿಸ್ಥಿತಿಯ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯ ಮತ್ತು ಕೇಂದ್ರದ ನಡುವೆ ಸಮನ್ವಯ ಬಹಳ ಮುಖ್ಯವಾಗಿದೆ. ಉಕ್ರೇನ್ ಯುದ್ಧವು ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ, ಇದು ಅನೇಕ ಸವಾಲುಗಳನ್ನು ಒಡ್ಡಿದೆ. ಆದ್ದರಿಂದ ಒಕ್ಕೂಟ ವ್ಯವಸ್ಥೆಯ ಆಶಯಗಳು ಮುಖ್ಯವಾಗಿದೆ. ಮಾನವಶಕ್ತಿ ಮತ್ತು ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸುವುದರ ಬಗ್ಗೆ ಇಂದಿನ ಕೊವಿಡ್ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಯಿತು.

ಇತರ ದೇಶಗಳಿಗೆ ಹೋಲಿಸಿದರೆ ದೇಶ ಕೊವಿಡ್  ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರೂ, ನಾವು ಈಗ ರಾಜ್ಯಗಳಲ್ಲಿ ಪ್ರಕರಣಗಳ ಏರಿಕೆಯನ್ನು ನೋಡಬಹುದು. ನಾವು ಎಚ್ಚರದಿಂದ ಇರಬೇಕು. ಕೊವಿಡ್ ಸವಾಲನ್ನು ಇನ್ನೂ ಮೀರಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ

ನಮ್ಮ ವಯಸ್ಕ ಜನಸಂಖ್ಯೆಯ ಶೇ 96ರಷ್ಟು ಜವರು ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ ಜನಸಂಖ್ಯೆಯ ಶೇ 85 ಜನರು ಲಸಿಕೆಯ ಎರಡನೇ ಡೋಸ್‌ ಪಡೆದಿದ್ದಾರೆ ಎಂಬುದು ಪ್ರತಿಯೊಬ್ಬ ನಾಗರಿಕರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಶಾಂತ್ ಕಿಶೋರ್​​ನ್ನು ಪಕ್ಷಕ್ಕೆ ಸೇರಿಲು ಕಾಂಗ್ರೆಸ್ ವಿಫಲ​​; ಮಾರಾಟಗಾರ ಎಷ್ಟೇ ಉತ್ತಮವಾಗಿರಲಿ ಉತ್ಪನ್ನ ಕೆಟ್ಟದಾಗಿದ್ದರೆ ಮಾರಾಟ ಮಾಡಲು ಸಾಧ್ಯವಿಲ್ಲ: ಬಿಜೆಪಿ ಲೇವಡಿ

Published On - 1:53 pm, Wed, 27 April 22

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್