ಸಿಎಂ ಯೋಗಿ ಆದಿತ್ಯನಾಥ್ ಆದೇಶ; ದೇಗುಲ, ಮಸೀದಿಗಳಲ್ಲಿ ಹಾಕಲಾಗಿದ್ದ ಧ್ವನಿವರ್ಧಕಗಳನ್ನೆಲ್ಲ ತೆಗೆಯುತ್ತಿರುವ ಪೊಲೀಸರು

ಸಿಎಂ ಯೋಗಿ ಆದಿತ್ಯನಾಥ್ ಆದೇಶ; ದೇಗುಲ, ಮಸೀದಿಗಳಲ್ಲಿ ಹಾಕಲಾಗಿದ್ದ ಧ್ವನಿವರ್ಧಕಗಳನ್ನೆಲ್ಲ ತೆಗೆಯುತ್ತಿರುವ ಪೊಲೀಸರು
ಉತ್ತರ ಪ್ರದೇಶದಲ್ಲಿ ಧ್ವನಿವರ್ಧಕ ತೆರವು ಅಭಿಯಾನ

ಕಳೆದ ಕೆಲವು ದಿನಗಳಿಂದಲೂ ವಿವಿಧ ಠಾಣೆಗಳ ಪೊಲೀಸರು ಟ್ವಿಟರ್​​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ದೇಗುಲ, ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನು ಖುದ್ದಾಗಿ ಪೊಲೀಸರೇ ತೆಗೆದು ಹಾಕುತ್ತಿರುವುದನ್ನು ನೋಡಬಹುದು.

TV9kannada Web Team

| Edited By: Lakshmi Hegde

Apr 27, 2022 | 4:16 PM

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆದೇಶದಂತೆ, ರಾಜ್ಯಾದ್ಯಂತ ಧಾರ್ಮಿಕ ಪ್ರದೇಶಗಳಲ್ಲಿ ಹಾಕಲಾಗಿದ್ದ ನೂರಾರು ಧ್ವನಿವರ್ಧಕಗಳನ್ನು ತೆಗೆಯಲಾಗಿದೆ ಮತ್ತು ಸಾವಿರಾರು ಲೌಡ್​ಸ್ಪೀಕರ್​​ಗಳ ಶಬ್ದಗಳನ್ನು ನಿಯಂತ್ರಿಸಲಾಗಿದೆ ಎಂದು ಆ ರಾಜ್ಯದ ಪೊಲೀಸರು ತಿಳಿಸಿದ್ದಾರೆ. ಈಗಂತೂ ಬಹುತೇಕ ರಾಜ್ಯಗಳಲ್ಲಿ ಹನುಮಾನ್ ಚಾಲೀಸಾ-ಆಜಾನ್​, ಧ್ವನಿವರ್ಧಕ ಗಲಾಟೆಯೇ ಹೆಚ್ಚಾಗಿದೆ. ಅದರಲ್ಲೂ ದೆಹಲಿಯ ಜಹಾಂಗೀರ್​ಪುರಿಯಲ್ಲಿ ಹನುಮಜಯಂತಿ ಮೆರವಣಿಗೆಯಂದು ಗಲಭೆ ನಡೆದ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಸಭೆ ನಡೆಸಿ ಹೀಗೊಂದು ಖಡಕ್​ ಆದೇಶ ನೀಡಿಬಿಟ್ಟಿದ್ದರು. ಕೆಲವು ಧಾರ್ಮಿಕ ಪ್ರದೇಶಗಲ್ಲಿ ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಲಾಗಿದೆ. ಹಾಗೇ, ಇನ್ನೂ ಕೆಲವು ಕಡೆಗಳಲ್ಲಿ ಅನುಮತಿ ಪಡೆದು ಹಾಕಿದ್ದರೂ ನಿಗದಿತ ಡೆಸಿಬಲ್​ಗಿಂತ ಜಾಸ್ತಿ ಶಬ್ದ ಬರುವಂತೆ ಇಡಲಾಗಿದೆ. ಅಕ್ರಮವಾಗಿ ಹಾಕಿರುವ ಲೌಡ್​ಸ್ಪೀಕರ್​ ತೆಗೆದು ಹಾಕಬೇಕು ಮತ್ತು ಉಳಿದ ಧ್ವನಿವರ್ಧಕಗಳ ಶಬ್ದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಮತ್ತು, ಇನ್ಯಾರಿಗೂ ಮೈಕ್​ ಅಳವಡಿಸಿಕೊಳ್ಳಲು ಹೊಸದಾಗಿ ಅವಕಾಶ ನೀಡಬಾರದು ಎಂದೂ ಹೇಳಿದ್ದರು.

ಬರುವ ತಿಂಗಳು ಮುಸ್ಲಿಮರ ಈದ್​ ಮತ್ತು ಹಿಂದುಗಳ ಅಕ್ಷಯ ತೃತೀಯಾ ಹಬ್ಬಗಳು ಬಹುತೇಕ ಒಟ್ಟಿಗೇ ನಡೆಯುತ್ತವೆ. ಈ ಹೊತ್ತಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ಕೊಡಬಾರದು ಎಂದು ಯೋಗಿ ಆದಿತ್ಯನಾಥ್​ ಸೂಚಿಸಿದ್ದಾರೆ. ಇನ್ನು ಧ್ವನಿವರ್ಧಕಗಳನ್ನು ಧಾರ್ಮಿಕ ಪ್ರದೇಶಗಳಿಂದ ತೆಗೆದು ಹಾಕುವ ಬಗ್ಗೆ, ವಿವಿಧ ಧಾರ್ಮಿಕ ಮುಖಂಡರ ಬಳಿ ಚರ್ಚಿಸಲಾಗಿದ್ದು, ಈಗ ಪೊಲೀಸರು ಅವುಗಳನ್ನು ತೆಗೆದು ಹಾಕುವ ಮತ್ತು ಶಬ್ದ ನಿಯಂತ್ರಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ವಿವಿಧ ಠಾಣೆಗಳ ಪೊಲೀಸರು ಟ್ವಿಟರ್​​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ದೇಗುಲ, ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನು ಖುದ್ದಾಗಿ ಪೊಲೀಸರೇ ತೆಗೆದು ಹಾಕುತ್ತಿರುವುದನ್ನು ನೋಡಬಹುದು. ಯುಪಿ ಪೊಲೀಸರ ಈ ಕ್ರಮವನ್ನು ಹಲವು ಧಾರ್ಮಿಕ ಮುಖಂಡರು ಹೊಗಳಿದ್ದಾರೆ. ಇನ್ನು ಮದುವೆ ಮನೆಗಳಲ್ಲಿ, ಧಾರ್ಮಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ಇಡುವವರು ಶಬ್ದದ ಪ್ರಮಾಣ ಎಷ್ಟಿಡಬೇಕು ಎಂಬುದನ್ನೂ ಪೊಲೀಸರು ನಿಗದಿಪಡಿಸಿ, ಆ ಸಂಬಂಧ ಕರಪತ್ರಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: IPL 2022: ಈ ಐಪಿಎಲ್​ನಲ್ಲಿ ಮುಂಬೈ- ಚೆನ್ನೈ ಕಳಪೆ ಪ್ರದರ್ಶನ ನೀಡಲು ಕಾರಣವೇನು ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada