ನನ್ನ ರಾಜ್ಯದಲ್ಲಿ ಲವ್ ಜಿಹಾದ್​ಗೆ ಅವಕಾಶ ನೀಡುವುದಿಲ್ಲ: ಶಿವರಾಜ್ ಸಿಂಗ್ ಚೌಹಾಣ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2022 | 11:26 AM

ದೆಹಲಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅಗತ್ಯವಿದ್ದರೆ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನನ್ನು ತರುತ್ತೇವೆ ಎಂದು ಹೇಳಿದರು.

ನನ್ನ ರಾಜ್ಯದಲ್ಲಿ ಲವ್ ಜಿಹಾದ್​ಗೆ ಅವಕಾಶ ನೀಡುವುದಿಲ್ಲ: ಶಿವರಾಜ್ ಸಿಂಗ್ ಚೌಹಾಣ್
Shivraj Singh Chauhan
Follow us on

ಮಧ್ಯಪ್ರದೇಶ: ದೆಹಲಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನಮ್ಮ ರಾಜ್ಯದಲ್ಲಿ ಅಗತ್ಯವಿದ್ದರೆ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನನ್ನು ತರುತ್ತೇವೆ ಎಂದು ಹೇಳಿದರು. ಶ್ರದ್ಧಾ ವಾಕರ್ ಎಂಬ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಗ್ಗೆ ಅವರು ಮಾತನಾಡುವಾಗ ಹೇಳಿದರು. ಅಗತ್ಯವಿದ್ದರೆ ಲವ್ ಜಿಹಾದ್ ವಿರುದ್ಧ ಹೊಸ ಕಾನೂನನ್ನು ರಾಜ್ಯದಲ್ಲಿ ತರಲಾಗುವುದು ಎಂದರು.

ಬುಡಕಟ್ಟು ಜನಾಂಗದ ಐಕಾನ್ ತಾಂತಿಯಾ ಭಿಲ್ ಅವರ ಹುತಾತ್ಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ನನ್ನ ರಾಜ್ಯದ ಹೆಣ್ಣು ಮಕ್ಕಳನ್ನು ಲವ್ ಜಿಹಾದ್​​ನಂತಹ ಮೋಸ ಹೋಗಲು ಮತ್ತು ಅವರನ್ನು 35 ತುಂಡುಗಳಾಗಿ ಕತ್ತರಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಬುಡಕಟ್ಟು ಜನಾಂಗದ ಮಹಿಳೆಯರ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಅನ್ಯ ಧರ್ಮದ ವ್ಯಕ್ತಿಗಳು ಮದುವೆಯಾಗಿ ಲವ್ ಜಿಹಾದ್ ಮಾಡುತ್ತಿದ್ದಾರೆ. ಇದರ ವಿರುದ್ಧದ ಕಾನೂನನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಅವರು ಹೇಳಿದರು. ಇದು ಪ್ರೀತಿಯಲ್ಲ, ಇದು ಪ್ರೀತಿಯ ಹೆಸರಲ್ಲಿ ನಡೆಯುವ ಜಿಹಾದ್. ಈ ಲವ್ ಜಿಹಾದ್ ಆಟವನ್ನು ನಾನು ಮಧ್ಯಪ್ರದೇಶದ ನೆಲದಲ್ಲಿ ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಇದನ್ನು ಓದಿ: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್​ಗೆ ಬಿತ್ತು ಕಡಿವಾಣ.. ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಯೋಗಿ ಸಂಪುಟ ಅಸ್ತು

ಈ ಹಿಂದೆ ಮಧ್ಯಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚಿಸುವುದಾಗಿ ಹೇಳಿದ್ದರು. ಈಗ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ಸೇರಿಸಿದರು. ಬದ್ವಾನಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ಸಮಯ ಬಂದಿದೆ. ಮಧ್ಯಪ್ರದೇಶದಲ್ಲಿ ನಾನು ಸಮಿತಿಯನ್ನು ರಚಿಸುತ್ತಿದ್ದೇನೆ (ಯುಸಿಸಿ ಅನುಷ್ಠಾನಗೊಳಿಸಲು).

ಭಾರತದ ಸಂವಿಧಾನದ 44ನೇ ವಿಧಿಯ ಅಡಿಯಲ್ಲಿ ಬರುವ ಏಕರೂಪ ನಾಗರಿಕ ಸಂಹಿತೆ, ಅವರ ಧರ್ಮ, ಲಿಂಗ, ಜಾತಿ ಇತ್ಯಾದಿಗಳನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯಿಸುವ ವೈಯಕ್ತಿಕ ಕಾನೂನುಗಳನ್ನು ಪರಿಚಯಿಸಲು ಪ್ರಸ್ತಾಪಿಸುತ್ತದೆ.