ಹುಬ್ಬಳ್ಳಿಯಲ್ಲಿ ನಡೆದ ಮತಾಂತರದ ಹಿಂದೆ ಲವ್ ಜಿಹಾದ್​? 12 ಜನರ ವಿರುದ್ಧ ಕೇಸ್ ಬುಕ್

ಹುಬ್ಬಳ್ಳಿಯಲ್ಲಿ ಮತಾಂತರ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಮತಾಂತರದ ಹಿಂದೆ ಲವ್ ಜಿಹಾದ್​ ವಾಸನೆ ಬಂದಿದೆ.

ಹುಬ್ಬಳ್ಳಿಯಲ್ಲಿ ನಡೆದ ಮತಾಂತರದ ಹಿಂದೆ ಲವ್ ಜಿಹಾದ್​? 12 ಜನರ ವಿರುದ್ಧ ಕೇಸ್ ಬುಕ್
ಸಾಂಧರ್ಬಿಕ ಚಿತ್ರ
TV9kannada Web Team

| Edited By: TV9 SEO

Sep 25, 2022 | 1:45 PM

ಹುಬ್ಬಳ್ಳಿ: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತವಾಗಿ ಜಾರಿಯಾಗಿದೆ. ಆದರೂ ಸಹ ಕಾನೂನಿ ಭಯವಿಲ್ಲದೇ ಹುಬ್ಬಳ್ಳಿಯಲ್ಲಿ (Hubballi) ಮತಾಂತರ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಮತಾಂತರದ ಹಿಂದೆ ಲವ್ ಜಿಹಾದ್ (Love Jihad)​ ವಾಸನೆ ಬಂದಿದೆ.

ಮುಸ್ಲಿಂ ಧರ್ಮಕ್ಕೆ (Hindu Muslim)ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ 12 ಜನರು ವಿರುದ್ಧ ನಿನ್ನೆ(ಸೆ.24) ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೆಹಮಾನ್,ಅಜೀಸಾಬ್,ನಯಾಜ್ ಪಾಷಾ,ನದೀಮ್ ಖಾನ್,ಅನ್ಸಾರ್ ಪಾಷಾ,ಸಯ್ಯದ್ ದಸ್ತಗಿರ್,ಮಹಮ್ಮದ್ ಇಕ್ಬಾಲ್,ರಫೀಕ್,ಶಬ್ಬೀರ್,ಖಾಲಿದ್,ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಪೊಲೀಸರು ಎಫ್‍ಐಆರ್ (FIR)ದಾಖಲಿಸಿದ್ದಾರೆ.

ಈಗಾಗಲೇ ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗಿರುವ ಶ್ರೀಧರ್ ಅಲಿಯಾಸ್ ಸಲ್ಮಾನ್, ಸಾಮಾಜಿಕ ಜಾಲತಾಣದ ಮೂಲಕ‌ ಪರಿಚಯವಾದ ಹುಬ್ಬಳ್ಳಿಯ ಭೈರಿದೇವರಕೊಪ್ಪದ ಹುಡಗಿಯನ್ನ ಸೆ.17 ರಂದು ಭೇಟಿ ಮಾಡಲು‌ ಬಂದಿದ್ದ. ಆ ವೇಳೆ ಅನುಮಾನ ಬಂದು ಶ್ರೀಧರ್ ಅಲಿಯಾಸ್ ಸಲ್ಮಾನ್ ಗೆ ಸ್ಥಳೀಯರು. ಹೊಡೆದಿದ್ದರು. ಇದರಿಂದ ಗಾಯಗೊಂಡಿದ್ದ ಸಲ್ಮಾನ್ ಹಲ್ಲೆ ನಡೆಸಿದ 12 ಜನರ ವಿರುದ್ಧ ​​ ದೂರು ನೀಡಿದ್ದ. ಬಳಿಕ ಪೊಲೀಸರು ಈ ಪ್ರಕರಣವನ್ನು ವಿಚಾರಣೆ ಮಾಡುವಾಗ ಸಲ್ಮಾನ ಮತಾಂತರ ಉದ್ದೇಶ ಬಟಾಬಯಲಾಗಿದೆ.

ಪ್ರೀತಿಸಿದ ಹುಡಗಿ ಬಳಿ ಹಣ, ಬಂಗಾರ ವಸೂಲಿ‌ ಮಾಡಿದ್ದಾನೆ. ಅಲ್ಲದೇ ಬ್ಲಾಕ್ ಮೇಲ್ ಮಾಡಿ ಇಸ್ಲಾಂ‌ ಮತಾಂತರಕ್ಕೆ ಕನ್ವರ್ಟ್ ಆಗುವಂತೆ ಒತ್ತಾಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮತಾಂತರ ಹಿಂದೆ ಲವ್ ಜಿಹಾದ್ ವಾಸನೆ ಹೌದು…ಮತಾಂತರ ಹಿಂದೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಜಾಲತಾಣದಲ್ಲಿ ಪರಿಚಯವಾಗಿದ್ದ ಹುಬ್ಬಳ್ಳಿ ಯುವತಿಯನ್ನು ಪ್ರೀತಿಸುತ್ತಿದ್ದ. ಪ್ರೀತಿಸಿದ ಯುವತಿ ಬಳಿ ಹಣ, ಚಿನ್ನಾಭರಣ ಪಡೆದು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಯುವತಿಯನ್ನು ಬ್ಲ್ಯಾಕ್​​ಮೇಲ್ ಮಾಡ್ತಿದ್ದ ಶ್ರೀಧರ್ ಅಲಿಯಾಸ್​ ಸಲ್ಮಾನ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada