ಲಕ್ನೋ: ಏರ್​ಪೋರ್ಟ್​ನಲ್ಲಿ ತಪಾಸಣೆ ವೇಳೆ ವ್ಯಕ್ತಿಯ ಬಳಿ ಸಜೀವ ಗುಂಡುಗಳು ಪತ್ತೆ, ಬಂಧನ

|

Updated on: Feb 09, 2024 | 2:56 PM

ಲಕ್ನೋನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್​ನಲ್ಲಿ ಸಜೀವ ಗುಂಡುಗಳು ಪತ್ತೆಯಾಗಿವೆ. ನೌಶಾದ್ ಅಲಿ ಎಂಬುವವರು ಓಮನ್​ ಏರ್​ಫ್ಲೈಟ್​ ಡಬ್ಲ್ಯೂವೈ-0266 ಮೂಲಕ ಮಸ್ಕತ್​ಗೆ ಹೋಗಲು ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ಲಕ್ನೋ: ಏರ್​ಪೋರ್ಟ್​ನಲ್ಲಿ ತಪಾಸಣೆ ವೇಳೆ ವ್ಯಕ್ತಿಯ ಬಳಿ ಸಜೀವ ಗುಂಡುಗಳು ಪತ್ತೆ, ಬಂಧನ
ಏರ್​ಪೋರ್ಟ್​
Follow us on

ವಿಮಾನ ನಿಲ್ದಾಣ(Airport)ಕ್ಕೆ ಹೋಗುವ ಮುನ್ನ ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮೊಂದಿಗೆ ತೆಗೆದುಕೊಂಡು ಹೋಗುವ ಸಾಮಾನುಗಳನ್ನು ನೀವು ಸಂಪೂರ್ಣವಾಗಿ ಪರಿಶೀಲಿಸಬೇಕು. ಮನೆಯಿಂದ ಹೊರಡುವ ಮೊದಲು ನಿಮ್ಮ ಚೀಲದಲ್ಲಿ ನಿಮಗೆ ಸಮಸ್ಯೆಯನ್ನು ಉಂಟು ಮಾಡಬಲ್ಲ ಯಾವುದೇ ವಸ್ತು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಒಂದೊಮ್ಮೆ ಅಂತಹ ಯಾವುದೇ ವಸ್ತುಗಳು ಬ್ಯಾಗ್​ನಲ್ಲಿದ್ದರೆ ಅದು ನಿಮ್ಮನ್ನು ಜೈಲು ಕಂಬಿಗಳನ್ನು ಎಣಿಸುವಂತೆ ಮಾಡಬಹುದು ಎಚ್ಚರ.

ಇತ್ತೀಚೆಗಷ್ಟೇ ಲಕ್ನೋ ವಿಮಾನದಲ್ಲಿ ಅಂಥದ್ದೇ ಘಟನೆಯೊಂದು ನಡೆದಿದೆ, ಭದ್ರತಾ ತಪಾಸಣೆ ವೇಳೆ ವ್ಯಕ್ತಿಯ ಬ್ಯಾಗ್​ನಲ್ಲಿ ಸಜೀವ ಗುಂಡುಗಳು ಪತ್ತೆಯಾಗಿವೆ. ಇದು ಲಕ್ನೋದ ಚೌಧರಿ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ನೌಶಾದ್ ಅಲಿ ಎಂಬುವವರು ಓಮನ್​ ಏರ್​ಫ್ಲೈಟ್​ ಡಬ್ಲ್ಯೂವೈ-0266 ಮೂಲಕ ಮಸ್ಕತ್​ಗೆ ಹೋಗಲು ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ವಿಮಾನ ನಿಲ್ದಾಣದ ಪ್ರಕಾರ ಬ್ಯಾಗೇಜ್​ ಚೆನ್​-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಭದ್ರತಾ ತಪಾಸಣೆಗೆ ಮುಂದಾದರು. ಭದ್ರತಾ ಸ್ಕ್ರೀನಿಂದ ಸಮಯದಲ್ಲಿ ಸಿಐಎಸ್​ಎಫ್ ಸ್ಕ್ರೀನರ್​ ನೌಶಾದ್ ಅವರ ಹ್ಯಾಂಡ್ ಬ್ಯಾಗ್​ ಅನ್ನು ಪರಿಶೀಲಿಸಲಾಯಿತು. ಇದರಿಂದ ಸಿಐಎಸ್​ಎಫ್ 8 ಎಂಎಂ ಕ್ಯಾಲಿಬರ್​ನ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ಓದಿ: ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 20 ಕೋಟಿ ರೂ. ಮೌಲ್ಯದ ಕೊಕೇನ್​ ಜಪ್ತಿ

ವಿಚಾರಣೆ ಸಮಯದಲ್ಲಿ ನೌಶಾದ್ ತೃಪ್ತಿದಾಯಕ ಉತ್ತರವನ್ನು ನೀಡಲು ಸಾಧ್ಯವಾಗಿಲ್ಲ. ಅಥವಾ ಅದಕ್ಕೆ ಬೇಕಾದ ದಾಖಲೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಿಲ್ಲ. ಸಿಐಎಸ್‌ಎಫ್ ಆರೋಪಿ ನೌಶಾದ್ ಅಲಿಯನ್ನು ಬ್ಯಾಗ್‌ನಲ್ಲಿ ಪತ್ತೆಯಾದ ಕಾಟ್ರಿಡ್ಜ್‌ಗಳೊಂದಿಗೆ ಸರೋಜಿನಿ ನಗರ ಠಾಣೆಗೆ ಹಸ್ತಾಂತರಿಸಿದೆ. ಅಲ್ಲದೆ, ವಿಮಾನಯಾನ ಸಂಸ್ಥೆಗಳು ನೌಶಾದ್ ಚೆಕ್-ಇನ್ ಮಾಡಿದ ಬ್ಯಾಗೇಜ್ ಅನ್ನು ಡಿಬೋರ್ಡ್ ಮಾಡಿ ಅವರಿಗೆ ಹಸ್ತಾಂತರಿಸಿದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ