ಪ್ರೇಯಸಿಯ ಪತಿ, ತಂದೆಯನ್ನು ಕೊಲ್ಲಲು ಸುಪಾರಿ, ಕೊಲೆಯಾದವರೇ ಬೇರೆ

|

Updated on: Jan 13, 2025 | 2:58 PM

ಲಕ್ನೋದಲ್ಲಿ ಒಬ್ಬ ವ್ಯಕ್ತಿ ತನ್ನ ಪ್ರೇಯಸಿಯ ಪತಿ ಮತ್ತು ತಂದೆಯನ್ನು ಕೊಲ್ಲಲು ಕೊಲೆಗಾರರನ್ನು ನೇಮಿಸಿದ್ದ. ಆದರೆ ಅವರು ತಪ್ಪಾಗಿ ಕ್ಯಾಬ್​ ಡ್ರೈವರ್​ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ದೇಶ ನಿರ್ಮಿತ ಬಂದೂಕು, 14 ಜೀವಂತ ಗುಂಡುಗಳು, ಮೂರು ಸೆಲ್‌ಫೋನ್‌ಗಳು ಮತ್ತು ಹತ್ಯೆಗೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.ಹತ್ಯೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿ ಅಫ್ತಾಬ್ ಅಹ್ಮದ್ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರೇಯಸಿಯ ಪತಿ, ತಂದೆಯನ್ನು ಕೊಲ್ಲಲು ಸುಪಾರಿ, ಕೊಲೆಯಾದವರೇ ಬೇರೆ
ಆರೋಪಿಗಳು
Image Credit source: NDTV
Follow us on

ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಪತಿ ಹಾಗೂ ತಂದೆಯನ್ನು ಕೊಲ್ಲಲು ಸುಪಾರಿಕೊಟ್ಟಿದ್ದ, ಆದರೆ ಕೊಲೆಯಾದವರೇ ಬೇರೆ.
ಲಕ್ನೋದಲ್ಲಿ ನಡೆದ ಘಟನೆ ಇದು. ಪ್ರೇಯಸಿಯ ಪತಿ ಬದಲು ಯಾವುದೇ ಟ್ಯಾಕ್ಸಿ ಚಾಲಕನನ್ನು ಗುಂಪು ಹತ್ಯೆ ಮಾಡಿತ್ತು. ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಪ್ರಕರಣದಲ್ಲಿ ಪೊಲೀಸರು ನಡೆಸಿದ್ದು, ಮೂವರು ಯುವಕರನ್ನು ಬಂಧಿಸಲಾಗಿದೆ.

ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಹಿಂದಿನ ಉದ್ದೇಶ ಸ್ಪಷ್ಟವಾಯಿತು. ಡಿಸೆಂಬರ್ 30ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಮೊಹಮ್ಮದ್ ರಿಜ್ವಾನ್ ಮೃತದೇಹ ಪತ್ತೆಯಾಗಿತ್ತು. ಆರಂಭಿಕ ತನಿಖೆಯಲ್ಲಿ ಏನಾಯಿತು ಎಂದು ಅರ್ಥವಾಗದೇ ಪ್ರಕರಣದಲ್ಲಿ ಪೊಲೀಸರು ತನಿಖೆಗೆ ಮುಂದಾಗಿರುವಾಗಲೇ ಮೂವರನ್ನು ಬಂಧಿಸಲಾಗಿತ್ತು.

ಅಫ್ತಾಬ್ ಅಹ್ಮದ್, ಯಾಸಿರ್ ಹಾಗೂ ಕೃಷ್ಣಕಾಂತ್ ಬಂಧಿತರು. ಅಫ್ತಾಬ್ ಕೊಲೆಯ ಮಾಸ್ಟರ್​ಮೈಂಡ್ ಎಂದು ಪೊಲೀಸರು ಹೇಳಿದ್ದಾರೆ. ಆತ ಯಾಸಿರ್​ಗೆ ಅಫ್ತಾಬ್​ ಗೆಳತಿಯ ತಂದೆ ಹಾಗೂ ಗಂಡನನ್ನು ಕೊಲ್ಲುವಂತೆ ಹೇಳಿದ್ದ, ಯಾಸಿರ್ ಸಹಾಯಕ್ಕಾಗಿ ಕೃಷ್ಣಕಾಂತ್​ಗೂ ಕರೆ ಮಾಡಿದ್ದ. ಡಿಸೆಂಬರ್ 30ರಂದು ಕೊಲೆ ಮಾಡಲು ಹೋಗಿದ್ದರು, ಆದರೆ ಅವರ ಬದಲಿಗೆ ಮೊಹಮ್ಮದ್ ರಿಜ್ವಾನ್​​ನನ್ನು ಕೊಂದಿದ್ದರು. ನಂತರ ಪರಾರಿಯಾಗಿದ್ದರು.

ಮತ್ತಷ್ಟು ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ: ಜಾತ್ರೆಯಲ್ಲಿ ಹುಟ್ಟಿದ ಲವ್ ಜಾತ್ರೆಯಲ್ಲೇ ಅಂತ್ಯ

ದೇಶಿ ಬಂದೂಕು, 14 ಬುಲೆಟ್​ಗಳು, ಮೂರು ಮೊಬೈಲ್ ಫೋನ್​ಗಳು ಹಾಗೂ ಹತ್ಯೆಗೆ ಬಳಸಿದ್ದ ಬೈಕ್​ನನ್ನ ವಶಪಡಿಸಿಕೊಳ್ಳಲಾಗಿದೆ. ಯಾವುದೇ ಸಾಕ್ಷ್ಯಾಧಾರಗಳನ್ನು ಬಿಡದ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ