ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಮಾತೃ ವಿಯೋಗ
Madhavi Raje Scindia passes away: ಮಾಧವಿ ರಾಜೇ ಸಿಂಧಿಯಾ ಅವರು ಸಂಸತ್ತಿನ ಸದಸ್ಯರಾಗಿ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಪ್ರಮುಖ ರಾಜಕಾರಣಿ ಮಾಧವರಾವ್ ಸಿಂಧಿಯಾ ಅವರ ಪತ್ನಿ. ರಾಜಮನೆತನಕ್ಕೆ ಸೇರಿದ ಇವರು ಗ್ವಾಲಿಯರ್ ರಾಜಮನೆತನದ ರಾಜಮಾತೆ ಎಂದು ಕರೆಯಲ್ಪಡುತ್ತಿದ್ದರು. ಇವರು ಗ್ವಾಲಿಯರ್‌ನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ
ದೆಹಲಿ ಮೇ 15: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರ ತಾಯಿ ಮಾಧವಿ ರಾಜೇ ಸಿಂಧಿಯಾ (Madhavi Raje Scindia) ಅವರು ಬುಧವಾರ ಬೆಳಿಗ್ಗೆ 9.28 ಕ್ಕೆ ದೆಹಲಿಯ ಏಮ್ಸ್‌ನಲ್ಲಿ (AIIMS) ನಿಧನರಾದರು. ಮಾಧವಿ ರಾಜೇ ಸಿಂಧಿಯಾ ಕಳೆದ ಮೂರು ತಿಂಗಳಿನಿಂದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೆಪ್ಸಿಸ್ ಜೊತೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಬಹಳ ದುಃಖದಿಂದ, ರಾಜಮಾತೆ ಇನ್ನಿಲ್ಲ ಎಂದು ತಿಳಿಸಲು ಬಯಸುತ್ತೇವೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಹಾಗೂ ಗ್ವಾಲಿಯರ್ ರಾಜಮನೆತನದ ರಾಜಮಾತೆ ಮಾಧವಿ ರಾಜೇ ಸಿಂಧಿಯಾ ಅವರು ಕಳೆದ ಎರಡು ತಿಂಗಳಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ವಾರಗಳಿಂದ ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಇಂದು ಬೆಳಿಗ್ಗೆ 9:28 ಕ್ಕೆ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಓಂ ಶಾಂತಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಧ್ಯಪ್ರದೇಶದ ಗುನಾದಿಂದ ಸ್ಪರ್ಧಿಸುತ್ತಿದ್ದಾರೆ.
ಮಾಧವಿ ರಾಜೇ ಸಿಂಧಿಯಾ ಪರಿಚಯ
ಮಾಧವಿ ರಾಜೇ ಸಿಂಧಿಯಾ ಅವರು ಸಂಸತ್ತಿನ ಸದಸ್ಯರಾಗಿ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಪ್ರಮುಖ ರಾಜಕಾರಣಿ ಮಾಧವರಾವ್ ಸಿಂಧಿಯಾ ಅವರ ಪತ್ನಿ. ರಾಜಮನೆತನಕ್ಕೆ ಸೇರಿದ ಇವರು ಗ್ವಾಲಿಯರ್ ರಾಜಮನೆತನದ ರಾಜಮಾತೆ ಎಂದು ಕರೆಯಲ್ಪಡುತ್ತಿದ್ದರು. ಇವರು ಗ್ವಾಲಿಯರ್‌ನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅವರ ಕುಟುಂಬ, ಸಿಂಧಿಯಾ ತಲೆಮಾರುಗಳಿಂದ ಭಾರತೀಯ ರಾಜಕೀಯ ಮತ್ತು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ.
ಸೆಪ್ಟೆಂಬರ್ 30, 2001 ರಂದು, ಮಾಧವರಾವ್ ಸಿಂಧಿಯಾ ಅವರು ಉತ್ತರ ಪ್ರದೇಶದ ಮೈನ್‌ಪುರಿ ಬಳಿ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದರು. ತನ್ನ ಪರೋಪಕಾರಿ ಪ್ರಯತ್ನಗಳಿಗೆ ಹೆಸರುವಾಸಿಯಾಗಿರುವ ಮಾಧವಿ ರಾಜೆ ಅವರು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ವಿವಿಧ ಕ್ಷೇತ್ರಗಳಿಗೆ ಮೀಸಲಾಗಿರುವ 24 ಟ್ರಸ್ಟ್‌ಗಳ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ₹91 ಕೋಟಿ ಆಸ್ತಿ ಘೋಷಣೆ, ಮಂಡಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಕಂಗನಾ ರಣಾವತ್
ಮಾಧವಿ ರಾಜೆ ಅವರು ಸಿಂಧಿಯಾಸ್ ಕನ್ಯಾ ವಿದ್ಯಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಇದು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಬದ್ಧವಾಗಿದೆ. ಮಾಧವಿ ರಾಜೆ ಅವರು ತಮ್ಮ ದಿವಂಗತ ಪತಿಗೆ ಗೌರವಾರ್ಥವಾಗಿ ಅರಮನೆಯ ವಸ್ತುಸಂಗ್ರಹಾಲಯದಲ್ಲಿ ಮಹಾರಾಜ ಮಾಧವರಾವ್ ಸಿಂಧಿಯಾ II ಗ್ಯಾಲರಿಯನ್ನು ಸ್ಥಾಪಿಸಿದ್ದಾರೆ.
ಅಂತ್ಯಕ್ರಿಯೆ ಸಂಜೆ 7 ಗಂಟೆಗೆ
ಜ್ಯೋತಿರಾದಿತ್ಯ ಸಿಂಧಿಯಾ, ಚಿತ್ರಾಂಗದಾ ರಾಜೇ ಸಿಂಗ್ ಮತ್ತು ಅವರ ಕುಟುಂಬದವರು ನೀಡಿದ ಸಂತಾಪ ಸೂಚನೆಯಲ್ಲಿ, ಇಂದು ಸಂಜೆ 7 ಗಂಟೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ. “ನಮ್ಮ ಪ್ರೀತಿಯ ತಾಯಿ ರಾಜಮಾತಾ ಮಾಧವಿ ರಾಜೇ ಸಿಂಧಿಯಾ ಅವರು ಮೇ 15, 2024 ರಂದು ಬೆಳಿಗ್ಗೆ 9.30 ಕ್ಕೆ ನಿಧನರಾದ ಸುದ್ದಿಯನ್ನು ಹಂಚಿಕೊಳ್ಳಲು ನಾವು ತುಂಬಾ ದುಃಖಿತರಾಗಿದ್ದೇವೆ. ಅವರು ತಮ್ಮ ಕೊನೆಯ ಕ್ಷಣಗಳನ್ನು ತಮ್ಮ ಕುಟುಂಬದ ಸಮ್ಮುಖದಲ್ಲಿ ಕಳೆದರು ಎಂದು ಅದು ಹೇಳಿದೆ. ಮೇ 15, 2024 ರಂದು ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನವದೆಹಲಿಯ 27 ಸಫ್ದರ್‌ಜಂಗ್ ರಸ್ತೆಯ ನಿವಾಸದಲ್ಲಿ ಅಂತಿಮ ದರ್ಶನಕ್ಕಿರಿಸಲಾಗುತ್ತದೆ. ನಂತರ ಅವರ ಅಂತ್ಯಕ್ರಿಯೆಗಾಗಿ ಗ್ವಾಲಿಯರ್‌ಗೆ ಕರೆದೊಯ್ಯಲಾಗುತ್ತದೆ ಎಂದು ಕುಟುಂಬ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Wed, 15 May 24