ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ: ಕೈಲಾಶ್ ವಿಜಯವರ್ಗಿಯಾ, ಪ್ರಹ್ಲಾದ್ ಪಟೇಲ್ ಪ್ರಮಾಣ ವಚನ

ಕೈಲಾಶ್ ವಿಜಯವರ್ಗಿಯಾ ಮತ್ತು ಪಟೇಲ್ ಜತೆಗೆ ರಾಕೇಶ್ ಸಿಂಗ್, ರಾವ್ ಉದಯ್ ಪ್ರತಾಪ್ ಸಿಂಗ್, ಕರಣ್ ಸಿಂಗ್ ವರ್ಮಾ, ನಾಗರ್ ಸಿಂಗ್ ಚೌಹಾಣ್, ಸಮಪತಿಯ ಉಯಿಕೆ, ಈಡಾಲ್ ಸಿಂಗ್ ಕಂಸಾನಾ, ಪ್ರದ್ಯುಮನ್ ಸಿಂಗ್ ತೋಮರ್, ಇಂದರ್ ಸಿಂಗ್ ಪರ್ಮಾರ್, ನಿರ್ಮಲಾ ಭೂರಿಯಾ, ತುಳಸಿ ಸಿಲಾವತ್, ವಿಜಯ್ ಶಾ, ವಿಶ್ವಾಸ್ ಸಾರಂಗ್, ಗೋವಿಂದ್ ಸಿಂಗ್ ರಜಪೂತ್, ನಾರಾಯಣ ಸಿಂಗ್ ಕುಶ್ವಾಹ, ರಾಕೇಶ್ ಶುಕ್ಲಾ ಮತ್ತು ಚೇತನ್ ಕಶ್ಯಪ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ: ಕೈಲಾಶ್ ವಿಜಯವರ್ಗಿಯಾ, ಪ್ರಹ್ಲಾದ್ ಪಟೇಲ್ ಪ್ರಮಾಣ ವಚನ
ಸಚಿವ ಸಂಪುಟ ವಿಸ್ತರಣೆ

Updated on: Dec 25, 2023 | 5:23 PM

ಭೋಪಾಲ್ ಡಿಸೆಂಬರ್ 25: ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ, ಬಿಜೆಪಿ ದಿಗ್ಗಜರಾದ ಕೈಲಾಶ್ ವಿಜಯವರ್ಗಿಯಾ (Kailash Vijayvargiya) ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಸೋಮವಾರ ಮಧ್ಯಪ್ರದೇಶದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯ ಪ್ರದೇಶದ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ಇಂದು (ಸೋಮವಾರ) ಆರು ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು ನಾಲ್ವರು ರಾಜ್ಯ ಸಚಿವರು ಸೇರಿದಂತೆ 28 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ವಿಜಯವರ್ಗಿಯಾ ಮತ್ತು ಪಟೇಲ್ ಅವರ ಜತೆಗೆ, ರಾಕೇಶ್ ಸಿಂಗ್, ರಾವ್ ಉದಯ್ ಪ್ರತಾಪ್ ಸಿಂಗ್, ಕರಣ್ ಸಿಂಗ್ ವರ್ಮಾ, ನಾಗರ್ ಸಿಂಗ್ ಚೌಹಾಣ್, ಸಮಪತಿಯ ಉಯಿಕೆ, ಈಡಾಲ್ ಸಿಂಗ್ ಕಂಸಾನಾ, ಪ್ರದ್ಯುಮನ್ ಸಿಂಗ್ ತೋಮರ್, ಇಂದರ್ ಸಿಂಗ್ ಪರ್ಮಾರ್, ನಿರ್ಮಲಾ ಭೂರಿಯಾ, ತುಳಸಿ ಸಿಲಾವತ್, ವಿಜಯ್ ಶಾ, ವಿಶ್ವಾಸ್ ಸಾರಂಗ್, ಗೋವಿಂದ್ ಸಿಂಗ್ ರಜಪೂತ್, ನಾರಾಯಣ ಸಿಂಗ್ ಕುಶ್ವಾಹ, ರಾಕೇಶ್ ಶುಕ್ಲಾ ಮತ್ತು ಚೇತನ್ ಕಶ್ಯಪ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.


ಕೃಷ್ಣ ಗೌರ್, ಧರ್ಮೇಂದ್ರ ಲೋಧಿ, ದಿಲೀಪ್ ಜೈಸ್ವಾಲ್, ಗೌತಮ್ ಟೆಟ್ವಾಲ್, ಲಖನ್ ಪಟೇಲ್ ಮತ್ತು ನಾರಾಯಣ ಪನ್ವಾರ್ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಪ್ರಮಾಣ ವಚನ ಸ್ವೀಕರಿಸಿದರು. ಅದೇ ವೇಳೆ ರಾಧಾ ಸಿಂಗ್, ಪ್ರತಿಮಾ ಬಗ್ರಿ, ದಿಲೀಪ್ ಅಹಿರ್ವಾರ್ ಮತ್ತು ನರೇಂದ್ರ ಶಿವಾಜಿ ಪಟೇಲ್ ಅವರು ರಾಜ್ಯಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಂದು ಮಧ್ಯಾಹ್ನ 3.30ರ ಸುಮಾರಿಗೆ ರಾಜ್ಯ ಸಚಿವ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಯಾದವ್ ತಿಳಿಸಿದ್ದು ಬೆಳಗ್ಗೆ ಭೋಪಾಲ್‌ನ ರಾಜಭವನದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್ ಅವರನ್ನು ಭೇಟಿ ಮಾಡಿದ್ದರು.

“ಇಂದು ಮಧ್ಯಾಹ್ನ 3:30 ಕ್ಕೆ ರಾಜ್ಯಪಾಲರು ನಮ್ಮ ಹೊಸ ಸಂಪುಟದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥ ಜೆಪಿ ನಡ್ಡಾ, ರಾಜ್ಯ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರ ಮಾರ್ಗದರ್ಶನದಲ್ಲಿ, ಮತ್ತು ಪಕ್ಷದ ಎಲ್ಲಾ ಹಿರಿಯ ನಾಯಕರು, ಹೊಸ ಸಚಿವ ಸಂಪುಟವು ರಾಜ್ಯದ ಒಳಿತಿಗಾಗಿ ಕೆಲಸ ಮಾಡುತ್ತದೆ ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ:ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಪ್ರಮಾಣ ವಚನ 

ಮೋಹನ್ ಯಾದವ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಅಚ್ಚರಿಯ ಆಯ್ಕೆಯಾಗಿದ್ದರು. ಯಾದವ್ ಅವರ ನೇಮಕದೊಂದಿಗೆ, 2024 ರ ಸಾರ್ವತ್ರಿಕ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ವಿರೋಧಿ ಅಂಶವನ್ನು ಸರಿದೂಗಿಸಲು ಬಿಜೆಪಿ ಬಯಸಿದೆ. ಅದೇ ವೇಳೆ ಪಕ್ಷವು ಗಮನಾರ್ಹವಾದ ಒಬಿಸಿ ಸಮುದಾಯವನ್ನು ಓಲೈಸುವ ಗುರಿಯನ್ನು ಹೊಂದಿದೆ.

ಮಧ್ಯಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ವಿಸ್ತರಿಸಲು ರಾಜ್ಯ ಸಚಿವ ಸಂಪುಟದ ಸದಸ್ಯರು ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Mon, 25 December 23