AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ಟ್ರಿಪ್​ಗೆ ಹೋದ ಮಗ, ಬರುವಷ್ಟರಲ್ಲಿ ಅನ್ನ, ನೀರಿಲ್ಲದೆ ಜೀವ ಬಿಟ್ಟ ತಾಯಿ

ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ಟ್ರಿಪ್​ ಹೋಗಿದ್ದ ಮಗ ವಾಪಸಾಗುವಷ್ಟರಲ್ಲಿ ತಾಯಿ ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದಿರುವ ತಾಯಿಯನ್ನು ಮಗನೊಬ್ಬ ಭಿಕ್ಷುಕರಿಗಿಂತಲೂ ಕಡೆಯಾಗಿ ನೋಡಿದ್ದಾನೆ. ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ತಾನು ಟ್ರಿಪ್​ಗೆ ಹೋಗಿದ್ದ ಹಿಂದಿರುಗುವಷ್ಟರಲ್ಲಿ ಅನ್ನ, ನೀರಿಲ್ಲದೆ ತಾಯಿ ಸಾವನ್ನಪ್ಪಿರುವ ಮನಕಲಕುವ ಘಟನೆ ಭೋಪಾಲ್​ನಲ್ಲಿ ನಡೆದಿದೆ.

ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ಟ್ರಿಪ್​ಗೆ ಹೋದ ಮಗ, ಬರುವಷ್ಟರಲ್ಲಿ ಅನ್ನ, ನೀರಿಲ್ಲದೆ ಜೀವ ಬಿಟ್ಟ ತಾಯಿ
ಪೊಲೀಸ್​ Image Credit source: India Today
ನಯನಾ ರಾಜೀವ್
|

Updated on: Dec 24, 2024 | 7:58 AM

Share

ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದಿರುವ ತಾಯಿಯನ್ನು ಮಗನೊಬ್ಬ ಭಿಕ್ಷುಕರಿಗಿಂತಲೂ ಕಡೆಯಾಗಿ ನೋಡಿದ್ದಾನೆ. ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ತಾನು ಟ್ರಿಪ್​ಗೆ ಹೋಗಿದ್ದ ಹಿಂದಿರುಗುವಷ್ಟರಲ್ಲಿ ಅನ್ನ, ನೀರಿಲ್ಲದೆ ತಾಯಿ ಸಾವನ್ನಪ್ಪಿರುವ ಮನಕಲಕುವ ಘಟನೆ ಭೋಪಾಲ್​ನಲ್ಲಿ ನಡೆದಿದೆ.

ಭೋಪಾಲ್‌ನ ನಿಶಾತ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಲಲಿತಾ ದುಬೆ ಎಂಬ ಮಹಿಳೆ ತನ್ನ ಮಗ ಅರುಣ್‌ನೊಂದಿಗೆ ವಾಸಿಸುತ್ತಿದ್ದರು. ಲಲಿತಾ ದುಬೆಯನ್ನು ಮನೆಯೊಳಗೆ ಕೂಡಿ ಹಾಕಿ ಅರುಣ್ ತನ್ನ ಪತ್ನಿಯೊಂದಿಗೆ ಉಜ್ಜಯಿನಿಯ ಮನೆಗೆ ಹೋಗಿದ್ದ. ಬಳಿಕ ಅರುಣ್ ಇಂದೋರ್​ನಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಫ್ಯಾಮಿಲಿ ಸಮೇತ ಉಜ್ಜಿಯಿನಿಗೆ ಹೋಗುತ್ತಿರುವುದಾಗಿ ತಿಳಿಸಿದ್ದ.

ಕೆಲವು ದಿನಗಳ ಬಳಿಕ ಮತ್ತೊಬ್ಬ ಮಗ ಅಜಯ್​ ದುಬೆಗೆ ಅನುಮಾನ ಬಂದು ಒಮ್ಮೆ ಮನೆಯ ಹತ್ತಿರ ಹೋಗಿ ಅಮ್ಮ ಇದ್ದಾರಾ ನೋಡು ಎಂದು ಹೇಳಿ ಸ್ನೇಹಿತರೊಬ್ಬರನ್ನು ಕಳುಹಿಸಿದ್ದರು. ಆದರೆ ಸ್ನೇಹಿತ ಮನೆಗೆ ತಲುಪುವಷ್ಟರಲ್ಲಿ ಅವರು ಶವವಾಗಿದ್ದರು. ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸ್​ ತಂಡ ಸ್ಥಳಕ್ಕೆ ಬಂದಿತ್ತು, ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಅವರ ಸಾವಿಗೆ ಊಟ, ನೀರು ಇಲ್ಲದಿರುವುದೇ ಕಾರಣ , ಹಸಿವಿನಿಂದ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದರು. ಅಜಯ್ ನೀಡಿದ ದೂರನ್ನು ಸ್ವೀಕರಿಸಿದ ನಂತರ, ಆರೋಪಿ ಪುತ್ರ ಅರುಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭೋಪಾಲ್ ಪೊಲೀಸ್ ಇನ್ಸ್‌ಪೆಕ್ಟರ್ ರೂಪೇಶ್ ದುಬೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಲಲಿತಾ ದುಬೆ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅನಾರೋಗ್ಯದ ಕಾರಣ, ಅವರಿಗೆ ಎದ್ದು ತಿನ್ನಲು ಅಥವಾ ಔಷಧಿ ತೆಗೆದುಕೊಳ್ಳಲು ಹಾಸಿಗೆಯಿಂದ ಎದ್ದೇಳಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: ದಾವಣಗೆರೆ: 20 ರೂಪಾಯಿ ಕುರ್‌ ಕುರೆ ವಿಚಾರಕ್ಕೆ ಮಾರಾಮಾರಿ, ಬಂಧನ ಭೀತಿಯಿಂದ ಗ್ರಾಮ ತೊರೆದ 25 ಜನ

ಆರೋಪಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಯಸ್ಸಾದ ಮಹಿಳೆಗೆ ಮೂವರು ಗಂಡು ಮಕ್ಕಳಿದ್ದರು. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದರು, ಇನ್ನೊಬ್ಬರು ಉಜ್ಜಯಿನಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಉಜ್ಜಯಿನಿಯಲ್ಲಿಯೇ ಇರುತ್ತಿದ್ದರು ಮಗನ ವೃತ್ತಿಜೀವನವು ಸ್ಥಿರವಾಗಿಲ್ಲದ ಕಾರಣ ತನ್ನ ಮಗನನ್ನು ಬೆಂಬಲಿಸಲು ಭೋಪಾಲ್‌ಗೆ ಸ್ಥಳಾಂತರಗೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ