ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ, ಉಚಿತ ಶಿಕ್ಷಣ: ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಘೋಷಣೆ

|

Updated on: May 13, 2021 | 2:16 PM

Madhya Pradesh: ಈ ಕೊವಿಡ್ ಸಾಂಕ್ರಾಮಿಕ ರೋಗದಲ್ಲಿ ಪೋಷಕರು / ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನಾವು ತಿಂಗಳಿಗೆ 5000 ರೂ. ಪಿಂಚಣಿ ನೀಡುತ್ತೇವೆ. ಈ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಈ ಕುಟುಂಬಗಳಿಗೆ ಉಚಿತ ಪಡಿತರವನ್ನು ಸಹ ನಾವು ವ್ಯವಸ್ಥೆಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ, ಉಚಿತ ಶಿಕ್ಷಣ: ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಘೋಷಣೆ
ಶಿವರಾಜ್ ಸಿಂಗ್ ಚೌಹಾಣ್
Follow us on

ಭೋಪಾಲ್: ಮಧ್ಯಪ್ರದೇಶದಲ್ಲಿ ಪೋಷಕರು ಕೊವಿಡ್ 19 ನಿಂದ ಮೃತಪಟ್ಟರೆ ಆ ಕುಟುಂಬದ ಮಕ್ಕಳಿಗೆ ಪ್ರತಿ ತಿಂಗಳು ₹5,000 ಪಿಂಚಣಿ ನೀಡಲಾಗುವುದು. ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಘೋಷಿಸಿದ್ದಾರೆ.

ಈ ಕೊವಿಡ್ ಸಾಂಕ್ರಾಮಿಕ ರೋಗದಲ್ಲಿ ಪೋಷಕರು / ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನಾವು ತಿಂಗಳಿಗೆ 5000 ರೂ. ಪಿಂಚಣಿ ನೀಡುತ್ತೇವೆ. ಈ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಈ ಕುಟುಂಬಗಳಿಗೆ ಉಚಿತ ಪಡಿತರವನ್ನು ಸಹ ನಾವು ವ್ಯವಸ್ಥೆಗೊಳಿಸುತ್ತೇವೆ ಎಂದು ಅವರು ಹೇಳಿದರು.


ಕೆಲಸ ಮಾಡಲು ಬಯಸುವ ಜನರಿಗೆ ರಾಜ್ಯ ಸರ್ಕಾರವು ಸರ್ಕಾರದ ಖಾತರಿಯ ಮೇರೆಗೆ ಸಾಲವನ್ನು ನೀಡುತ್ತದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಪರಿಹಾರ ನೀಡುವ ಉದ್ದೇಶವನ್ನು ಈ ಉಪಕ್ರಮಗಳು ಹೊಂದಿವೆ ಎಂದು ಚೌಹಾಣ್ ಹೇಳಿದ್ದಾರೆ.


ರಾಜ್ಯದಲ್ಲಿ ಬುಧವಾರ 8,970 ಹೊಸ ಪ್ರಕರಣಗಳು ಮತ್ತು 84 ಸಾವು ವರದಿಯಾಗಿದೆ. ಈವರೆಗೆ ಒಟ್ಟು 6,679 ಮಂದಿ ಮೃತಪಟ್ಟಿದ್ದಾರೆ. ಕೊವಿಡ್ -19 ಉಲ್ಬಣವನ್ನು ನಿಯಂತ್ರಿಸಲು ಸರ್ಕಾರವು ಮೇ 15 ರವರೆಗೆ ಸಂಪೂರ್ಣ ಲಾಕ್​ಡೌನ್ ಘೋಷಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್​ಡೌನ್ ವಿಸ್ತರಣೆ; ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

Published On - 2:13 pm, Thu, 13 May 21