ಮಧ್ಯಪ್ರದೇಶ: ಒಂದೇ ದಿನದಲ್ಲಿ 548 ಮಂದಿಗೆ ಕಚ್ಚಿದ ಬೀದಿ ನಾಯಿಗಳು
ಮಧ್ಯಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಜನವರಿ 23ರಂದು ಮಂಗಳವಾರ ನಗರದಲ್ಲಿ ಒಟ್ಟು 548 ಮಂದಿಗೆ ಬೀದಿ ನಾಯಿಗಳು ಕಚ್ಚಿರುವ ಸಂಗತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ಪ್ರಕಾರ, ಎಲ್ಲಾ 548 ಜನರಲ್ಲಿ, 197 ಜನರು ಆಂಟಿ ರೇಬಿಸ್ ಲಸಿಕೆಗಾಗಿ ಮೊರಾರ್‌ನ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ ಮತ್ತು 131 ಜನರು ಆಂಟಿ ರೇಬಿಸ್ ಲಸಿಕೆಗಾಗಿ ಜಯ ಆರೋಗ್ಯ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಜನವರಿ 23ರಂದು ಮಂಗಳವಾರ ನಗರದಲ್ಲಿ ಒಟ್ಟು 548 ಮಂದಿಗೆ ಬೀದಿ ನಾಯಿಗಳು(Stray Dogs) ಕಚ್ಚಿರುವ ಸಂಗತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ಪ್ರಕಾರ, ಎಲ್ಲಾ 548 ಜನರಲ್ಲಿ, 197 ಜನರು ಆಂಟಿ ರೇಬಿಸ್ ಲಸಿಕೆಗಾಗಿ ಮೊರಾರ್‌ನ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ ಮತ್ತು 131 ಜನರು ಆಂಟಿ ರೇಬಿಸ್ ಲಸಿಕೆಗಾಗಿ ಜಯ ಆರೋಗ್ಯ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ.
ಏತನ್ಮಧ್ಯೆ, ಆಂಟಿ ರೇಬಿಸ್ ಲಸಿಕೆಗಾಗಿ 153 ಜನರು ಹಜೀರಾ ಸಿವಿಲ್ ಆಸ್ಪತ್ರೆಗೆ ಬಂದರೆ, ಆಂಟಿ ರೇಬಿಸ್ ಲಸಿಕೆಗಾಗಿ 39 ಜನರು ದಾಬ್ರಾ ಸಿವಿಲ್ ಆಸ್ಪತ್ರೆಯಲ್ಲಿ ಮತ್ತು 28 ಜನರು ಆಂಟಿ ರೇಬಿಸ್ ಲಸಿಕೆಗಾಗಿ ಭಿತರ್ವಾರ್ ಆಸ್ಪತ್ರೆಗೆ ಹೋಗಿದ್ದರು.
ಗ್ವಾಲಿಯರ್ ನಾಯಿ ಕಡಿತದ ಪ್ರಕರಣ ಕ್ರಮೇಣವಾಗಿ ಹೆಚ್ಚುತ್ತಿದೆ. ಪ್ರತಿದಿನ 100ಕ್ಕೂ ಅಧಿಕ ಪ್ರಕರಣಗಳು ಕಂಡುಬರುತ್ತಿವೆ. ಮಧ್ಯಪ್ರದೇಶದ ಇತರ ನಗರಗಳಲ್ಲಿ ಪರಿಸ್ಥಿತಿ ಅಷ್ಟೇ ಘನಘೋರವಾಗಿದೆ. ಜನವರಿ 17 ರಂದು, ರಾಜಧಾನಿ ಭೋಪಾಲ್‌ನಲ್ಲಿ ಬೀದಿ ನಾಯಿಗಳು 40 ಜನರನ್ನು ಕಚ್ಚಿದ್ದವು.
ಮತ್ತಷ್ಟು ಓದಿ: ಭೋಪಾಲ್: ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿಗಳು
ಇದಕ್ಕೂ ಮುನ್ನ ಜನವರಿ 10 ರಂದು ಭೋಪಾಲ್‌ನಲ್ಲಿ ಏಳು ತಿಂಗಳ ಮಗುವನ್ನು ಬೀದಿ ನಾಯಿಗಳು ಕೊಂದು ಹಾಕಿದ್ದವು. ಅಂದಿನಿಂದ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಹಿಡಿಯುವ ಅಭಿಯಾನವನ್ನು ಪ್ರಾರಂಭಿಸಿದೆ.
ಪಾಲಕರು ಹಾಗೂ ಸ್ಥಳೀಯರು ಮಗುವನ್ನು ಹುಡುಕಲು ಆರಂಭಿಸಿದಾಗ ಅವರ ಗುಡಿಸಲು ಬಳಿ ಇರುವ ಪೊದೆಯಲ್ಲಿ ಶವ ಪತ್ತೆಯಾಗಿತ್ತು, ಕೈ ಸೇರಿದಂತೆ ಹಲವೆಡೆ ಕಚ್ಚಿದ ಗಾಯಗಳಿದ್ದವು. ಮಗುವಿನ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ತೆರಳಿದ್ದ ವೇಳೆ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ.
ನಗರದಲ್ಲಿ ಬೀದಿ ನಾಯಿಗಳ ದಾಳಿಯ ನಡುವೆಯೇ ಮಿನಲ್ ರೆಸಿಡೆನ್ಸಿ ನೆರೆಹೊರೆಯಲ್ಲಿ ಈ ಘಟನೆ ಸ್ಥಳೀಯರನ್ನು ಕೆರಳಿಸಿದೆ. ಕಳೆದ ಮೂರು ದಿನಗಳಲ್ಲಿ ಭೋಪಾಲ್ 33 ಬೀದಿ ನಾಯಿಗಳ ದಾಳಿಗೆ ಸಾಕ್ಷಿಯಾಗಿದೆ. ಇತ್ತೀಚಿನ ಘಟನೆಯನ್ನು ಗಮನಿಸಿದ ಆಡಳಿತವು ಮೃತರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತು.
ಶಿಶುವಿನ ಸಾವಿಗೆ ಸಂಬಂಧಿಸಿದಂತೆ ಎಫ್‌ಐಆರ್ ಅನ್ನು ಸಹ ದಾಖಲಿಸಲಾಗಿದೆ ಎಂದು ಹೇಳಿದರು. ಭೋಪಾಲ್‌ನಲ್ಲಿ ಬೀದಿ ನಾಯಿಗಳನ್ನು ಹಿಡಿಯಲು ಪುರಸಭೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ