ಉತ್ತರಾಖಂಡ: ಗಂಗೆಯಲ್ಲಿ ಪಾಪ ತೊಳೆಯಲು ಹೋಗಿ ಮಗನನ್ನೇ ಕಳೆದುಕೊಂಡ ದಂಪತಿ
ಗಂಗೆ(Ganga)ಯಲ್ಲಿ ಸ್ನಾನ ಮಾಡಿದರೆ ರೋಗ ರುಜಿನಗಳು ದೂರವಾಗುವವು ಹಾಗೆಯೇ ಪಾಪವೂ ತೊಳೆಯುವುದು ಎಂಬುದು ನಂಬಿಕೆ. ಗಂಗಾ ನದಿಯಲ್ಲಿ ಪೋಷಕರು ಮಗನನ್ನು ಮುಳುಗಿಸಿದ ಪರಿಣಾಮ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಏಳು ವರ್ಷದ ಮಗ ಕ್ಯಾನ್ಸರ್ನಿಂದ ಬಳಲುತ್ತಿದ್ದ, ಗಂಗಾ ನದಿಯಲ್ಲಿ ಸ್ನಾನ ಮಾಡಿಸಿದರೆ ರೋಗದಿಂದ ಚೇತರಿಕೆ ಕಾಣಬಹುದು ಎಂಬ ಹಂಬಲದಲ್ಲಿದ್ದ ಪೋಷಕರು ನೀರಿನಲ್ಲಿ ನಿಲ್ಲಿಸಿ ಮಗನನ್ನು ಮುಳುಗಿಸಿದ್ದಾರೆ ಆಗ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಹುಡುಗನ ಪೋಷಕರು ಹರ್ ಕಿ ಪೌರಿ ದಡದಲ್ಲಿ ಮಂತ್ರಗಳನ್ನು ಪಠಿಸುತ್ತಲೇ ಇದ್ದರು, ಆದರೆ ಅವನ ಚಿಕ್ಕಮ್ಮ ಅವನ ಜೋರಾದ ಕೂಗನ್ನು ನಿರ್ಲಕ್ಷಿಸದೆ ಗಂಗಾದಲ್ಲಿ ಪದೇ ಪದೇ ಅದ್ದಿದ್ದಾರೆ ಕೊನೆಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಪಕ್ಕದಲ್ಲಿದ್ದವರು ಮಹಿಳೆಯನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರು ಅವರ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಸ್ನೇಹಿತೆಯ ಸಾಕು ನಾಯಿಯನ್ನು ಕಾಪಾಡಲು ಹೋಗಿ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ಯುವಕ
ಮಗುವಿನ ಪೋಷಕರು ಮತ್ತು ಚಿಕ್ಕಮ್ಮನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ. ಬಾಲಕ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ದೆಹಲಿಯಲ್ಲಿ ತನ್ನ ಪೋಷಕರೊಂದಿಗೆ ವಾಸವಿದ್ದ ಎಂದು ಅವರು ತಿಳಿಸಿದ್ದಾರೆ. ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಕೊರೊನಾ ಸಮಯದಲ್ಲಿ ಪ್ರೊ. ಯುಕೆ ಚೌಧರಿಯವರು ನದಿ ತಂತ್ರಜ್ಞಾನದ ವಿವೇಚನೆಯುತ ಬಳಕೆಯಿಂದ ಗಂಗೆಯ ನೀರಿನಿಂದ ಕೋವಿಡ್ ವೈರಾಣುಗಳನ್ನು ಸಂಹರಿಸಬಹುದು ಎಂದು ಹೇಳಿದ್ದರು.
ವೇದ, ಪುರಾಣ, ಉಪನಿಷತ್ಗಳಲ್ಲಿಯೂ ಗಂಗಾ ನದಿಯ ಔಷಧದ ಗುಣಗಳ ಬಗ್ಗೆ ಉಲ್ಲೇಖಗಳಿವೆ. ಅಲ್ಲದೆ, ವಿಜ್ಞಾನಿಗಳು ಕೂಡ ಗಂಗೆಯ ನೀರಿನಲ್ಲಿ ಅಪಾರ ಪ್ರಮಾಣದ ಬ್ಯಾಕ್ಟೀರಿಯಾ ಭಕ್ಷಕಗಳನ್ನು ಪತ್ತೆ ಹಚ್ಚಿದ್ದರು. ಇವು ವೈರಾಣುಗಳನ್ನು ಕೊಲ್ಲಲು ನರವಾಗಬಹುದು ಎಂದು ಹೇಳಲಾಗಿತ್ತು.
ಯಮುನಾ ಹಸಿರು, ಸೋನ್ ಕಂದು ಬಣ್ಣದಿಂದ ಕೂಡಿದ್ದರೆ , ಗಂಗಾ ನದಿಯ ಬಣ್ಣ ಶುಭ್ರ ಬಿಳಿ, ಇದು ನೀರಿನ ಉತ್ತಮ ಗುಣಮಟ್ಟವನ್ನು ಸೂಚಿಸುತ್ತದೆ. ಅಲ್ಲದೆ, ಗಂಗೆಯ ನದಿಪಾತ್ರದ ಉದ್ದಕ್ಕೂ ಔಷಧ ಗಿಡಮೂಲಿಕೆಗಳಿವೆ ಎನ್ನುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ