AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕುಟುಂಬವೇ ನಮಗೆ ದ್ರೋಹ ಬಗೀತು, ಪ್ರಿಯಕರನ ಶವದ ಜತೆ ಮದುವೆಯಾದ ಯುವತಿ ಹೇಳಿದ್ದೇನು?

ಪ್ರೀತಿ(Love) ಆಗಷ್ಟೇ ಚಿಗುರೊಡೆದಿತ್ತು. ಜಾತಿ, ಬಡವ, ಶ್ರೀಮಂತ ಎಲ್ಲವನ್ನೂ ಮೀರಿ ಗಟ್ಟಿಯಾಗಿತ್ತು. ಅಷ್ಟೊತ್ತಿಗೆ ಬೇರೆ ಯಾರದ್ದೂ ಅಲ್ಲ ಕುಟುಂಬದವರ ಕಣ್ಣೇ ಬಿತ್ತು. ಹುಡುಗ ಬೇರೆ ಜಾತಿಯವನೆಂದು ಮದುವೆ ಬೇಡ ಅಂದಿದ್ದಷ್ಟೇ ಅಲ್ಲದೆ ಗುಂಡು ಹಾರಿಸಿ ಆತನನ್ನು ಕೊಂದೇ ಬಿಟ್ಟಿದ್ದರು. ಆ ಪ್ರೀತಿ ಇಂದು ಬಂದು ನಾಳೆ ಹೋಗುವುದಾಗಿರಲಿಲ್ಲ, ಆತನೇ ಗಂಡನಾಗಬೇಕೆಂದು ಆಕೆಯೂ ಕೂಡ ಬಯಸಿದ್ದಳು. ಹೀಗಾಗಿ ಗೆಳೆಯನ ಶವದ ಜತೆಯೇ ಮದುವೆಯಾಗಿ, ಅವರ ಮನೆಗೆ ಸೊಸೆಯಾಗಿ ಹೋಗಿದ್ದ ಆಂಚಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಕುಟುಂಬವೇ ನಮಗೆ ದ್ರೋಹ ಬಗೀತು, ಪ್ರಿಯಕರನ ಶವದ ಜತೆ ಮದುವೆಯಾದ ಯುವತಿ ಹೇಳಿದ್ದೇನು?
ಯುವತಿ
ನಯನಾ ರಾಜೀವ್
|

Updated on: Dec 02, 2025 | 7:24 AM

Share

ನಾಂಡೇದ್, ಡಿಸೆಂಬರ್ 02: ಪ್ರೀತಿ(Love) ಆಗಷ್ಟೇ ಚಿಗುರೊಡೆದಿತ್ತು. ಜಾತಿ, ಬಡವ, ಶ್ರೀಮಂತ ಎಲ್ಲವನ್ನೂ ಮೀರಿ ಗಟ್ಟಿಯಾಗಿತ್ತು. ಅಷ್ಟೊತ್ತಿಗೆ ಬೇರೆ ಯಾರದ್ದೂ ಅಲ್ಲ ಕುಟುಂಬದವರ ಕಣ್ಣೇ ಬಿತ್ತು. ಹುಡುಗ ಬೇರೆ ಜಾತಿಯವನೆಂದು ಮದುವೆ ಬೇಡ ಅಂದಿದ್ದಷ್ಟೇ ಅಲ್ಲದೆ ಗುಂಡು ಹಾರಿಸಿ ಆತನನ್ನು ಕೊಂದೇ ಬಿಟ್ಟಿದ್ದರು. ಆ ಪ್ರೀತಿ ಇಂದು ಬಂದು ನಾಳೆ ಹೋಗುವುದಾಗಿರಲಿಲ್ಲ, ಆತನೇ ಗಂಡನಾಗಬೇಕೆಂದು ಆಕೆಯೂ ಕೂಡ ಬಯಸಿದ್ದಳು. ಹೀಗಾಗಿ ಗೆಳೆಯನ ಶವದ ಜತೆಯೇ ಮದುವೆಯಾಗಿ, ಅವರ ಮನೆಗೆ ಸೊಸೆಯಾಗಿ ಹೋಗಿದ್ದ ಆಂಚಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಮಹಾರಾಷ್ಟ್ರದ ನಾಂಡೇದ್​ನಲ್ಲಿ ನಡೆದ ಘಟನೆ. ಆಕೆ ಇನ್​ಸ್ಟಾಗ್ರಾಂ ಮೂಲಕ ಆಂಚಲ್ ಸಕ್ಷಮ್​ನನ್ನು ಭೇಟಿಯಾಗಿದ್ದಳು. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತ್ತು. ಇದ್ಯಾವುದನ್ನೂ ಅವರು ಮನೆಯವರ ಬಳಿ ಮುಚ್ಚಿಟ್ಟಿರಲಿಲ್ಲ. ಮೊದ ಮೊದಲು ಬೇರೆ ಜಾತಿ ಬೇಡ ಆತ ಅಂದಾಗ ಯುವತಿ ತಲೆ ಕೆಡಿಸಿಕೊಂಡಿರಲಿಲ್ಲ, ಯಾವತ್ತೋ ಒಂದು ದಿನ ಒಪ್ಪಿಕೊಳ್ಳಬಹುದು ಎನ್ನುವ ಭರವಸೆಯಲ್ಲಿದ್ದಳು, ಆದರೆ ಯಾವಾಗ ಆತನ ಹತ್ಯೆ ಮಾಡಲಾಯಿತೋ ಅಂದೇ ಆಕೆ ತವರಿನ ಸಂಬಂಧವನ್ನು ಕಡಿದುಕೊಂಡುಬಿಟ್ಟಿದ್ದಾಳೆ.

ನನ್ನ ಕುಟುಂಬವೇ ನಮಗೆ ದ್ರೋಹ ಬಗೆದಿದೆ, ನನ್ನ ಕುಟುಂಬ ಸದಸ್ಯರು ಸಕ್ಷಮ್ ಜತೆ ಸಮಯ ಕಳೆಯುತ್ತಿದ್ದರು, ಅವನೊಂದಿಗೆ ಚೆನ್ನಾಗಿಯೇ ವರ್ತಿಸುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು ಎಲ್ಲವೂ ಚೆನ್ನಾಗಿದೆ ಎಂದು ಅವನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಈ ರೀತಿ ನಡೆಯುತ್ತೆ ಎನ್ನುವ ಕಲ್ಪನೆಯೂ ನಮಗಿರಲಿಲ್ಲ ಎಂದು ಆಂಚಲ್ ಕಣ್ಣೀರಿಟ್ಟಿದ್ದಾರೆ. ಇದೀಗ ಆಂಚಲ್ ಕುಟುಂಬ ಸದಸ್ಯರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.

ಮತ್ತಷ್ಟು ಓದಿ: ನಿಜವಾದ ಪ್ರೀತಿ ಅಂದ್ರೆ ಇದು, ಜಾತಿ ಬೇರೆ ಎಂದು ಪ್ರಿಯಕರನ ಕೊಂದ ಕುಟುಂಬ, ಶವದ ಜತೆ ಮದುವೆಯಾಗಿ ಅತ್ತೆ ಮನೆ ಸೇರಿದ ಯುವತಿ

ಸಕ್ಷಮ್ ಕೊಲೆಯಾದ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ ಸಹೋದರ ಪೊಲೀಸ್ ಠಾಣೆಗೆ ಕರೆದೊಯ್ದು ಸಕ್ಷಮ್ ವಿರುದ್ಧ ಸುಳ್ಳು ದೂರು ದಾಖಲಿಸುವಂತೆ ಹೇಳಿದ್ದ, ನಾನು ನಿರಾಕರಿಸಿದ್ದೆ. ಆಗ ಪೊಲೀಸರು ನೀವು ಹೇಗೂ ಕೊಲೆ ಮಾಡಿ ಇಲ್ಲಿಎ ಬರುತ್ತಲೇ ಇರುತ್ತೀರಿ, ಸಕ್ಷಮ್​ನನ್ನು ಏಕೆ ಕೊಲ್ಲಬಾರದು ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಹೋದರ ನಾನು ಸಂಜೆಯೊಳಗೆ ಅವನನ್ನು ಕೊಂದು ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿ ಬಂದಿದ್ದ. ಪೊಲೀಸರೇ ಈ ರೀತಿ ವರ್ತಿಸಿದರೆ ಜನರಿಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಗುರುವಾರ ಸಂಜೆ ಆಂಚಲ್ ಅವರ ಕಿರಿಯ ಸಹೋದರ ಹಿಮೇಶ್ ಹಾಗೂ ಸಕ್ಷಮ್ ನಡುವೆ ವಾಗ್ವಾದ ನಡೆದಿತ್ತು.ಹಿಮೇಶ್ ಸಾಕ್ಷಮ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದ್ದು, ಗುಂಡು ಅವರ ಪಕ್ಕೆಲುಬುಗಳಿಗೆ ತಗುಲಿತ್ತು.ಹಿಮೇಶ್, ಅವರ ಸಹೋದರ ಸಾಹಿಲ್, ಅವರ ತಂದೆ ಗಜಾನನ್ ಮಾಮಿದ್ವರ್ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.

ಮರುದಿನ ಸಂಜೆ, ಸಕ್ಷಮ್ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿರುವಾಗ, ಅಂಚಲ್ ಅವರ ಮನೆಗೆ ಹೋಗಿ ಶವದ ಜತೆ ಮದುವೆಯಾಗಿದ್ದಾರೆ. ನಾನು ಕಳೆದ ಮೂರು ವರ್ಷಗಳಿಂದ ಸಕ್ಷಮ್ ಅವರನ್ನು ಪ್ರೀತಿಸುತ್ತಿದ್ದೆ, ಆದರೆ ನನ್ನ ತಂದೆ ಜಾತಿ ಬೇರೆಯಾಗಿದ್ದ ಕಾರಣ ನಮ್ಮ ಸಂಬಂಧವನ್ನು ವಿರೋಧಿಸಿದರು.ಕೊಲೆ ಮಾಡಿವುದಾಗಿ ಆಗಾಗ ಬೆದರಿಕೆ ಹಾಕುತ್ತಿದ್ದರು ಎಂದು ಆಂಚಲ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್