AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಫ್ಟ್​ ಕೊಡ್ತೀನಿ ಎಂದು ಕಾರು ಹತ್ತಿಸಿಕೊಂಡು ಕೊಂದೇ ಬಿಟ್ಟ, ದೇಹ ಒಳಗಿಟ್ಟು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ್ರೂ ಸಿಕ್ಕಿಬಿದ್ದ

ಗಣೇಶ್ ಚೌಹಾಣ್ ಎಂಬ ಬ್ಯಾಂಕ್ ಏಜೆಂಟ್ 1 ಕೋಟಿ ರೂ. ವಿಮಾ ಹಣಕ್ಕಾಗಿ ತನ್ನ ಸಾವಿನ ನಾಟಕವಾಡಿದ್ದಾನೆ. ಅಮಾಯಕನಿಗೆ ಲಿಫ್ಟ್ ಕೊಟ್ಟು ಕೊಂದು, ಆ ದೇಹವನ್ನು ತನ್ನ ಕಾರಿನಲ್ಲಿಟ್ಟು ಸುಟ್ಟುಹಾಕಿದ್ದ. ಆದರೆ, ಪೊಲೀಸರ ತನಿಖೆಯಿಂದ ಆತನ ನಕಲಿ ಸಾವು ಬಯಲಿಗೆ ಬಿದ್ದಿದ್ದು, ಪ್ರಿಯತಮೆಗೆ ಸಂದೇಶ ಕಳುಹಿಸಿ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದಲ್ಲಿ ನಡೆದ ಈ ವಿಮಾ ವಂಚನೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ.

ಲಿಫ್ಟ್​ ಕೊಡ್ತೀನಿ ಎಂದು ಕಾರು ಹತ್ತಿಸಿಕೊಂಡು ಕೊಂದೇ ಬಿಟ್ಟ, ದೇಹ ಒಳಗಿಟ್ಟು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ್ರೂ ಸಿಕ್ಕಿಬಿದ್ದ
ಗಣೇಶ್ ಚೌಹಾಣ್
ನಯನಾ ರಾಜೀವ್
|

Updated on: Dec 16, 2025 | 7:58 AM

Share

ಮುಂಬೈ, ಡಿಸೆಂಬರ್ 16: ಮಹಾರಾಷ್ಟ್ರದ ಲಾತೂರಿನಲ್ಲಿ ಕಾರೊಂದು ಸುಟ್ಟುಕರಕಲಾದ ರೀತಿಯಲ್ಲಿ ಪತ್ತೆಯಾಗಿತ್ತು, ಅದರಲ್ಲಿ ಗೋಣಿಚೀಲದಲ್ಲಿದ್ದ ಶವ(Dead Body) ಕೂಡ ಬೆಂದು ಹೋಗಿತ್ತು. ಈ ಕಾರು ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್​ನದ್ದು ಆದ ಕಾರಣ ಆತನೇ ಸಾವನ್ನಪ್ಪಿದ್ದಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ನಡೆದಿರುವ ಘಟನೆಯೇ ಬೇರೆ, ಈ ಗಣೇಶ್ ಚೌಹಾಣ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವನಿಗೆ ಲಿಫ್ಟ್​ ಕೊಡುತ್ತೀನಿ ಎಂದು ಹತ್ತಿಸಿಕೊಂಡು ಕೊಂದೇ ಬಿಟ್ಟಿದ್ದ. ಬಳಿಕ ಆತನನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಆದರೆ ಗಣೇಶ್​ಗೆ ಮತ್ತೊಬ್ಬನನ್ನು ಕೊಲ್ಲುವ ಉದ್ದೇಶವಿರಲಿಲ್ಲ, ಒಟ್ಟಿನಲ್ಲಿ ತಾನು ಸತ್ತಿದ್ದೇನೆಂದು ಎಲ್ಲರೂ ತಿಳಿದುಕೊಳ್ಳಬೇಕೆಂಬ ಉದ್ದೇಶವಿದ್ದಿದ್ದು ಸ್ಪಷ್ಟವಾಗಿದೆ. ಕಾರಿನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿದಾಗ ಅವರು ಅದನ್ನು ತಮ್ಮ ಸಂಬಂಧಿಕರೊಬ್ಬರಿಗೆ ನೀಡಿರುವುದು ಕಂಡುಬಂದಿತ್ತು. ಆ ವ್ಯಕ್ತಿ ಸಂಬಂಧಿ ಗಣೇಶ್​ ಚೌಹಾಣ್​ ಸಂಪರ್ಕಿಸಲು ಮುಂದಾದಾಗ ಆತ ಮನೆಗೆ ಬಂದಿಲ್ಲ, ಮೊಬೈಲ್ ಕೂಡ ಸ್ವಿಚ್ಡ್​ ಆಫ್ ಆಗಿದೆ ಎಂದು ಪೊಲೀಸರಿಗೆ ತಿಳಿಸಲಾಯಿತು.

ಈ ಎಲ್ಲಾ ಸಂಗತಿಗಳ ಆಧಾರದ ಮೇಲೆ ಮೃತಪಟ್ಟ ವ್ಯಕ್ತಿ ಗಣೇಶ್ ಎಂಬುದು ಆರಂಭಿಕ ಊಹೆಯಾಗಿತ್ತು. ಆದರೆ ಪೊಲೀಸರ ತನಿಖೆ ಮುಂದುವರೆದಂತೆ ಪೊಲೀಸರಿಗೆ ಹಲವು ಅಂಶಗಳು ಮನವರಿಕೆಯಾಗುತ್ತಾ ಹೋಗಿತ್ತು. ಆತನಿಗೆ ಓರ್ವ ಯುವತಿ ಜತೆ ಪ್ರೀತಿ ಇದೆ ಎಂಬುದು ತಿಳಿದುಬಂದಿತ್ತು.

ಮತ್ತಷ್ಟು ಓದಿ: ಮಹಾರಾಷ್ಟ್ರ: ವ್ಯಕ್ತಿಯನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಆಕೆಯನ್ನು ಸಂಪರ್ಕಿಸಿದಾಗ ಈ ಘಟನೆಯ ಬಳಿಕ ಗಣೇಶ್ ಬೇರೊಂದು ನಂಬರ್​ ಬಳಸಿ ಆಕೆಗೆ ಸಂದೇಶ ಕಳುಹಿಸಿರುವುದು ತಿಳಿದುಬಂದಿತ್ತು. ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿ ಜೀವಂತವಾಗಿದ್ದಾನೆ ಎಂಬುದನ್ನು ಅರಿತ ಪೊಲೀಸರು ಹುಡುಕಾಟ ಆರಂಭಿಸಿದ್ದರು.

ಆ ಫೋನ್ ನಂಬರ್ ಪೊಲೀಸರನ್ನು ಕೊಲ್ಹಾಪುರಕ್ಕೆ ಕೊಂಡೊಯ್ದಿತ್ತು, ಅಲ್ಲಿ ಚೌಹಾಣ್ ಸಿಕ್ಕಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಆತ 1 ಕೋಟಿ ರೂಗಳಜೀವ ವಿಮಾ ಪಾಲಿಸಿಯನ್ನು ಮಾಡಿಸಿದ್ದ, ಗೃಹ ಸಾಲದ ಹಣವನ್ನು ತೀರಿಸಲು ಈ ನಾಟಕವಾಡಿದ್ದ, ಅದಕ್ಕೆ ಒಂದು ಅಮಾಯಕನ ಜೀವವನ್ನು ಬಲಿ ಪಡೆದಿದ್ದ ಎಂಬುದು ತಿಳಿದುಬಂದಿದೆ.

ಶನಿವಾರ ಔಸಾದ ತುಳಜಾಪುರ ಟಿ ಜಂಕ್ಷನ್​ನಲ್ಲಿ ಗೋವಿಂದ್ ಯಾದವ್ ಎಂಬ ವ್ಯಕ್ತಿಗೆ ಗಣೇಶ್ ಲಿಫ್ಟ್​ ಕೊಟ್ಟಿದ್ದ. ಯಾದವ್ ಕುಡಿದ ಮತ್ತಿನಲ್ಲಿದ್ದ, ಚೌಹಾಣ್ ಇದರ ಲಾಭವನ್ನು ಪಡೆದಿದ್ದ.ಆತ ಕಾರನ್ನು ನಿಲ್ಲಿಸಿ ಯಾದವ್​ಗೆ ಊಟ ತಂದುಕೊಟ್ಟಿದ್ದ, ಊಟದ ಬಳಿಕ ಯಾದವ್ ನಿದ್ರೆಗೆ ಜಾರಿದ್ದ, ಬಳಿಕ ಕೊಲೆ ಮಾಡಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?