
ನಾಂದೇಡ್, ಡಿಸೆಂಬರ್ 01: ಪ್ರಾಣ ಹೋದರೇನಂತೆ ಪ್ರೀತಿ ಎಂದೂ ಶಾಶ್ವತ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮಗಳು ಬೇರೆ ಜಾತಿಯವನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಕೂಡಲೆ ಹಿಂದೆ ಮುಂದೆ ನೋಡದೆ ಆ ಯುವಕನನ್ನು ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಹತ್ಯೆ(Murder) ಮಾಡಿಯೇ ಬಿಟ್ಟರು. ಆತನ ಅಂತ್ಯಕ್ರಿಯೆ ವೇಳೆ ಗೆಳೆಯನ ಕೈಯಿಂದಲೇ ಹಣೆಗೆ ಕುಂಕುಮ ಹಚ್ಚಿಕೊಂಡು ಆತನ ಮನೆಯಲ್ಲಿ ಸೊಸೆಯಾಗಿ ಬಾಳುವುದಾಗಿ ಆಕೆ ಪ್ರತಿಜ್ಞೆ ಮಾಡಿದ್ದಾಳೆ.
ಆಂಚಲ್ ಎಂಬಾಕೆಗೆ ತನ್ನ ಸಹೋದರರ ಮೂಲಕ ಸಕ್ಷಮ್ ಎಂಬಾತನ ಪರಿಚಯವಾಗಿತ್ತು ಅದು ಕ್ರಮೇಣವಾಗಿ ಪ್ರೀತಿಗೆ ತಿರುಗಿತ್ತು. ಮೂರು ವರ್ಷಗಳ ಕಾಲ ಅವರು ಪ್ರೀತಿಸುತ್ತಿದ್ದರು. ಮನೆಯಲ್ಲಿ ವಿಚಾರ ತಿಳಿಸಿದಾಗ ಬೇರೆ ಜಾತಿ ಎಂದು ಯಾರೂ ಮದುವೆಗೆ ಒಪ್ಪಲು ಸಿದ್ಧರಿರಲಿಲ್ಲ.ಹಲವು ಬಾರಿ ಯುವತಿಯ ಮನೆಯವರು ಸಕ್ಷಮ್ಗೆ ಬೆದರಿಕೆ ಹಾಕಿದ್ದರೂ ಅವರಿಬ್ಬರ ಸಂಬಂಧ ಹಾಗೆಯೇ ಮುಂದುವರೆದಿತ್ತು. ಅದಕ್ಕೆ ಕೋಪಗೊಂಡ ಆಂಚಲ್ ಮನೆಯವರು ಆತನನ್ನಯ ಹೊಡೆದು ಕೊಂದಿದ್ದಾರೆ.
ಆತನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಆಕೆ ಆತನ ದೇಹದ ಮೇಲಿದ್ದ ಅರಿಶಿನವನ್ನು ತಾನು ಹಚ್ಚಿಕೊಂಡು ಶವದ ಕೈಯಿಂದ ಹಣೆಗೆ ಕುಂಕುಮ ಹಚ್ಚಿಕೊಂಡು ಸತಿ, ಪತ್ನಿಯರಾದರು.ಕೊನೆಯವರೆಗೂ ಆತನ ಪತ್ನಿಯಾಗಿಯೇ ವಾಸಿಸಲು ನಿರ್ಧರಿಸಿದ್ದಳು. ಸಕ್ಷಮ್ ಮೃತಪಟ್ಟರೂ ಕೂಡ ಅವರ ಪ್ರೀತಿ ಗೆದ್ದಿತ್ತು. ಪ್ರೀತಿ ಮುಂದೆ ಸಹೋದರರು, ಅಪ್ಪ ಅಮ್ಮ ಎಲ್ಲರೂ ಸೋತರು. ಆತನನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಲಾಯಿತು.ಪೊಲೀಸರು ಆರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಮತ್ತಷ್ಟು ಓದಿ: ಬೇರೊಬ್ಬನ ಜತೆ ಲವ್ವಿಡವ್ವಿಗೆ ಗಂಡನ ಹತ್ಯೆ: ಸುಪಾರಿ ಹಣ ಕೊಡದೆ ಕಳ್ಳಾಟ, 9 ವರ್ಷದ ಬಳಿಕ ರಹಸ್ಯ ಬಯಲು
ಮತ್ತೊಂದು ಘಟನೆ
ಗೆಳತಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಪುಣೆಯಲ್ಲಿ ವ್ಯಕ್ತಿಯೊಬ್ಬ ಸಣ್ಣ ಜಗಳಕ್ಕೆ ಗೆಳತಿಯನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು 20 ವರ್ಷದ ದಿವ್ಯಾ ನಿಗೋಟ್ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿಯನ್ನು ಬೀಡ್ ಜಿಲ್ಲೆಯ 21 ವರ್ಷದ ಗಣೇಶ್ ಕೇಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆ ವ್ಯಕ್ತಿ ಟೆಕ್ನಿಷಿಯನ್ ಆಗಿದ್ದ, ಯುವತಿ ಅದೇ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.
ದಿವ್ಯಾ ಅವರ ಕುಟುಂಬವು ನಾಪತ್ತೆ ದೂರು ದಾಖಲಿಸಿತ್ತು.
ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಸಂಗಮವಾಡಿ ಪ್ರದೇಶದ ವ್ಯಕ್ತಿಯ ಮನೆಯಲ್ಲಿ ದಿವ್ಯಾ ಅವರ ಮೃತದೇಹ ಪತ್ತೆಯಾಗಿದೆ. ತಲೆಗಾಂವ್ ರೈಲ್ವೆ ಹಳಿಯ ಬಳಿ ಆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ದಿವ್ಯಾಳ ಮೂಗು ಮತ್ತು ಮುಖದ ಮೇಲೆ ದಾಳಿಯ ಗುರುತುಗಳಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ