ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: ಬಿಜೆಪಿ-ಎನ್‌ಸಿಪಿ-ಶಿವಸೇನಾ ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳಿಗೆ ಗೆಲುವು

|

Updated on: Jul 12, 2024 | 8:29 PM

ಮಹಾಯುತಿಯ ಎಲ್ಲಾ ಒಂಬತ್ತು ಅಭ್ಯರ್ಥಿಗಳು ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಮೂರು ಆಡಳಿತ ಪಕ್ಷಗಳ ಒಗ್ಗಟ್ಟಿನ ಪ್ರಯತ್ನದ ಗೆಲುವು. ನಂತರದ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟು ಉಳಿಯುತ್ತದೆ. ಪರಿಷತ್ತಿನ ಫಲಿತಾಂಶಗಳು ಪುನರಾವರ್ತನೆಯಾಗುತ್ತವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ

ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: ಬಿಜೆಪಿ-ಎನ್‌ಸಿಪಿ-ಶಿವಸೇನಾ ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳಿಗೆ ಗೆಲುವು
ಎಂಎಲ್​​ಸಿ ಚುನಾವಣೆ
Follow us on

ಮುಂಬೈ ಜುಲೈ 12: ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನಾ (Shiv Sena) ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಸ್ಪರ್ಧಿಸಿದ ಎಲ್ಲಾ ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿದೆ. ಮಹಾಯುತಿಯ ಎಲ್ಲಾ ಒಂಬತ್ತು ಅಭ್ಯರ್ಥಿಗಳು ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಮೂರು ಆಡಳಿತ ಪಕ್ಷಗಳ ಒಗ್ಗಟ್ಟಿನ ಪ್ರಯತ್ನದ ಗೆಲುವು. ನಂತರದ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟು ಉಳಿಯುತ್ತದೆ. ಪರಿಷತ್ತಿನ ಫಲಿತಾಂಶಗಳು ಪುನರಾವರ್ತನೆಯಾಗುತ್ತವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ರಾಜ್ಯ ವಿಧಾನಸಭೆಯ ಮೇಲ್ಮನೆಯ 11 ಸದಸ್ಯರು ಜುಲೈ 27 ರಂದು ನಿವೃತ್ತರಾಗುತ್ತಿದ್ದು, ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಒಟ್ಟು 11 ಸ್ಥಾನಗಳಿಗೆ ಇಂದು ಬೆಳಗ್ಗೆ ಮತದಾನ ನಡೆದಿದೆ.

ಮಹಾರಾಷ್ಟ್ರ MLC ಚುನಾವಣೆಯಲ್ಲಿ ಗೆದ್ದವರಿವರು

1. ಬಿಜೆಪಿ – ಪಂಕಜಾ ಮುಂಡೆ

2. ಬಿಜೆಪಿ – ಯೋಗೇಶ್ ತಿಲೇಕರ್

3. ಬಿಜೆಪಿ – ಪರಿಣಯ್ ಫುಕೆ

4. ಬಿಜೆಪಿ – ಅಮಿತ್ ಗೋರ್ಖೆ

5. ಬಿಜೆಪಿ – ಸದಾಭೌ ಖೋ

6. ಶಿವಸೇನೆ – ಕೃಪಾಲ್ ತುಮಾನೆ

7. ಶಿವಸೇನೆ – ಭಾವನಾ ಗಾವ್ಲಿ

8. ಎನ್‌ಸಿಪಿ- ರಾಜೇಶ್ ವಿಟೇಕರ್ ಮತ್ತು

9. ಎನ್‌ಸಿಪಿ- ಶಿವಾಜಿರಾವ್ ಗರ್ಜೆ

10. ಶಿವಸೇನೆ (UBT)- ಮಿಲಿಂದ್ ನಾರ್ವೇಕರ್

11. ಕಾಂಗ್ರೆಸ್- ಪ್ರದ್ನ್ಯಾ ಸತವ್

ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಅದರ ಮಹಾಯುತಿ ಮಿತ್ರಪಕ್ಷಗಳಾದ ಶಿವಸೇನಾ ಮತ್ತು ಎನ್‌ಸಿಪಿ ತಲಾ ಇಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನಗೊಳಿಸಿದ್ದವು. ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಶಿವಸೇನಾ(ಯುಬಿಟಿ) ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಅವರ ಎಂವಿಎ ಪಾಲುದಾರ ಎನ್‌ಸಿಪಿ (ಎಸ್‌ಪಿ), ರೈತ ಮತ್ತು ಕಾರ್ಮಿಕರ ಪಕ್ಷ (ಪಿಡಬ್ಲ್ಯೂಪಿ) ನಾಮನಿರ್ದೇಶಿತರನ್ನು ಬೆಂಬಲಿಸಿದೆ. ಆದರೆ, ಪಿಡಬ್ಲ್ಯುಪಿ ಅಭ್ಯರ್ಥಿ ಜಯಂತ್ ಪಾಟೀಲ್ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.

ಒಬ್ಬ ಎಂಎಲ್‌ಸಿಯನ್ನು ಆಯ್ಕೆ ಮಾಡುವ ಕೋಟಾವು 23 ಎಂಎಲ್‌ಎಗಳ ಮತಗಳಾಗಿರುವುದರಿಂದ ಎಂವಿಎಗೆ ತನ್ನ ಮೂರನೇ ಅಭ್ಯರ್ಥಿಗೆ ಗೆಲುವು ಸಾಧಿಸಲು ಸಂಖ್ಯೆಗಳ ಕೊರತೆಯಿದೆ.

ಇದನ್ನೂ ಓದಿ: ಜುಲೈ13 ರಂದು ಮುಂಬೈಗೆ ಪ್ರಧಾನಿ ಮೋದಿ ಭೇಟಿ; ಇಲ್ಲಿದೆ ಕಾರ್ಯಕ್ರಮದ ವೇಳಾಪಟ್ಟಿ

ಬಿಜೆಪಿ 103 ಶಾಸಕರೊಂದಿಗೆ ಮುನ್ನಡೆ ಸಾಧಿಸಿದರೆ, ಶಿವಸೇನಾ  (38), ಎನ್‌ಸಿಪಿ (42), ಕಾಂಗ್ರೆಸ್ (37), ಶಿವಸೇನಾ(ಯುಬಿಟಿ) (15), ಮತ್ತು ಎನ್‌ಸಿಪಿ (ಶರದ್ ಪವಾರ್) (10) ನಂತರದ ಸ್ಥಾನದಲ್ಲಿದೆ.

ಆದಾಗ್ಯೂ, ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ ಮತ್ತು ಶಿವಸೇನೆಯ ಕೆಲವು ಶಾಸಕರು ತಮ್ಮ ಪರವಾಗಿ ಅಡ್ಡ ಮತದಾನ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇತ್ತೀಚೆಗೆ, ಎನ್‌ಸಿಪಿ (ಶರದ್ ಪವಾರ್ ಬಣ) ಅಜಿತ್ ಪವಾರ್ ನೇತೃತ್ವದ ಪ್ರತಿಸ್ಪರ್ಧಿ ಪಾಳೆಯದ ಹಲವಾರು ಶಾಸಕರು ಪ್ರತಿಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:10 pm, Fri, 12 July 24