Maharashtra Politics: ಗೋವಾದಿಂದ ಮುಂಬೈಗೆ ಬಂದಿಳಿದ ಏಕನಾಥ್ ಶಿಂಧೆ; ಕೆಲವೇ ಕ್ಷಣದಲ್ಲಿ ಫಡ್ನವಿಸ್ ಜೊತೆ ರಾಜ್ಯಪಾಲರ ಭೇಟಿ

| Updated By: ಸುಷ್ಮಾ ಚಕ್ರೆ

Updated on: Jun 30, 2022 | 3:38 PM

ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಬಂಡಾಯ ಸೇನಾ ಸಚಿವ ಏಕನಾಥ್ ಶಿಂಧೆ ಕೆಲವೇ ಕ್ಷಣಗಳಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಲಿದ್ದಾರೆ.

Maharashtra Politics: ಗೋವಾದಿಂದ ಮುಂಬೈಗೆ ಬಂದಿಳಿದ ಏಕನಾಥ್ ಶಿಂಧೆ; ಕೆಲವೇ ಕ್ಷಣದಲ್ಲಿ ಫಡ್ನವಿಸ್ ಜೊತೆ ರಾಜ್ಯಪಾಲರ ಭೇಟಿ
ಮುಂಬೈ ಏರ್​ಪೋರ್ಟ್​ಗೆ ಬಂದ ಏಕನಾಥ್ ಶಿಂಧೆ
Image Credit source: Indian Express
Follow us on

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಶಿವಸೇನೆಯ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ (Eknath Shinde) ಇಂದು ಗೋವಾದಿಂದ ಮುಂಬೈಗೆ ಆಗಮಿಸಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದಿಂದ ಝಡ್ ಕೆಟಗರಿ ಭದ್ರತೆಯನ್ನು ಒದಗಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ಏಕನಾಥ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾಗೇ, ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಅವರನ್ನು ಏಕನಾಥ್ ಶಿಂಧೆ ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಬಂಡಾಯ ಸೇನಾ ಸಚಿವ ಏಕನಾಥ್ ಶಿಂಧೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಲಿದ್ದಾರೆ. ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದು, ಏಕನಾಥ್ ಶಿಂಧೆ ಬಣ ಸರ್ಕಾರ ರಚನೆಗೆ ಬಿಜೆಪಿಗೆ ಬೆಂಬಲ ನೀಡಲಿದೆ. ಈ ಹಿಂದೆ ಶಿಂಧೆ ಬಣ ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದು, ಸರ್ಕಾರ ರಚಿಸುತ್ತೇವೆ ಎಂದು ಹೇಳಿತ್ತು.

ಹಲವು ಬಂಡಾಯ ಶಾಸಕರು ಉದ್ಧವ್ ಠಾಕ್ರೆ ಅವರ ರಾಜೀನಾಮೆಯ ನಂತರ ಗೋವಾದಲ್ಲಿಯೇ ಉಳಿದುಕೊಂಡಿದ್ದಾರೆ. ಬಿಜೆಪಿಯೊಂದಿಗೆ ಮಾತುಕತೆ ಆರಂಭಿಸಿದ್ದು, ಸರ್ಕಾರ ರಚಿಸುತ್ತೇವೆ ಎಂದು ಏಕನಾಥ್ ಶಿಂಧೆ ಬಣ ಹೇಳಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಡಾಯ ಸೇನಾ ಶಿಬಿರದ ವಕ್ತಾರ ದೀಪಕ್ ಕೇಸರ್ಕರ್, ನಾವು 2019ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಪರ್ಧಿಸಿದ್ದೇವೆ. ಅದಕ್ಕಾಗಿಯೇ ಮಹಾರಾಷ್ಟ್ರದ ಜನರು ಮತ ಚಲಾಯಿಸಿದ್ದಾರೆ. ಆಗ ನೀಡಿದ ಭರವಸೆಗಳನ್ನು ಈಗ ಈಡೇರಿಸಲಿದ್ದೇವೆ ಎಂದಿದ್ದಾರೆ.

ಉದ್ಧವ್ ಠಾಕ್ರೆ ಅವರ ರಾಜೀನಾಮೆಯನ್ನು ನಾವು ಸಂಭ್ರಮಿಸಿಲ್ಲ. ಠಾಕ್ರೆ ಅವರನ್ನು ಅಗೌರವಿಸಲು ಅಥವಾ ನೋಯಿಸಲು ನಮಗೆ ಯಾವುದೇ ಕಾರಣವಿಲ್ಲ, ಯಾವುದೇ ಶಿವಸೇನಾ ಸದಸ್ಯರು ಠಾಕ್ರೆ ಕುಟುಂಬವನ್ನು ನಿಂದಿಸಬಾರದು ಎಂದು ಕೇಸರ್ಕರ್ ಹೇಳಿದ್ದಾರೆ.

ಇದನ್ನೂ ಓದಿ: Maharashtra Politics: ರೆಸಾರ್ಟ್​ ರಾಜಕೀಯದಿಂದ ಉದ್ಧವ್ ಠಾಕ್ರೆ ರಾಜೀನಾಮೆವರೆಗೆ; ಮಹಾರಾಷ್ಟ್ರ ರಾಜಕಾರಣದ ಮುಖ್ಯಾಂಶ ಇಲ್ಲಿದೆ

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, ತಾವು ಬಿಜೆಪಿಯೊಂದಿಗೆ ಸಚಿವ ಸ್ಥಾನದ ಕುರಿತು ಇನ್ನೂ ಚರ್ಚೆ ನಡೆಸಿಲ್ಲ, ಆದರೆ ಶೀಘ್ರದಲ್ಲೇ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲಿಯವರೆಗೆ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಉನ್ನತ ನಾಯಕರು ತಮ್ಮ ಮುಂದಿನ ನಡೆಯ ಬಗ್ಗೆ ಕಾರ್ಯತಂತ್ರ ರೂಪಿಸಲು ದಕ್ಷಿಣ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಬುಧವಾರ ಸಭೆ ನಡೆಸಿದರು. ತಮ್ಮ ಮುಂದಿನ ಕ್ರಮವನ್ನು ಅಂತಿಮಗೊಳಿಸಲು ಮಹಾರಾಷ್ಟ್ರದ ಉನ್ನತ ಬಿಜೆಪಿ ನಾಯಕರು ಇಂದು ಸಭೆ ನಡೆಸಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ. 39 ಬಂಡಾಯ ಶಾಸಕರು ಮತ್ತು ಸ್ವತಂತ್ರರನ್ನು ಒಳಗೊಂಡಿರುವ ಶಿವಸೇನೆಯ ಏಕನಾಥ್ ಶಿಂಧೆ ಬಣದ ಬೆಂಬಲದೊಂದಿಗೆ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎನ್ನಲಾಗಿದೆ.

Published On - 3:36 pm, Thu, 30 June 22