AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳದಿ, ಕೆಂಪು ಶಾಲು ಹಾಕಿದವರನ್ನು ಕಂಡಲ್ಲೇ ಹೊಡೀತಾರೆ ಮರಾಠಿಗರು.. ಎಂಇಎಸ್ ಪುಂಡನ ಗೊಡ್ಡು ಬೆದರಿಕೆ

ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಕೊಲ್ಹಾಪುರ ಶಿವಸೇನೆ ಅಧ್ಯಕ್ಷ ವಿಜಯ್ ದೇವನೆ ಧಮ್ಕಿ ಹಾಕಿದ್ದಾರೆ. ಮಾರ್ಚ್ 20ರೊಳಗೆ ಬೆಳಗಾವಿ ಪಾಲಿಕೆ ಮುಂದಿರುವ ಕನ್ನಡ ಧ್ವಜವನ್ನು ತೆರವು ಮಾಡಬೇಕು. ತೆರವು ಮಾಡದಿದ್ರೆ ಕೊಲ್ಹಾಪುರ, ಸಾಂಗ್ಲಿ, ಸತಾರಾದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿಸುತ್ತೇವೆ ಎಂದಿದ್ದಾರೆ...

ಹಳದಿ, ಕೆಂಪು ಶಾಲು ಹಾಕಿದವರನ್ನು ಕಂಡಲ್ಲೇ ಹೊಡೀತಾರೆ ಮರಾಠಿಗರು.. ಎಂಇಎಸ್ ಪುಂಡನ ಗೊಡ್ಡು ಬೆದರಿಕೆ
ಕೊಲ್ಹಾಪುರ ಶಿವಸೇನೆ ಅಧ್ಯಕ್ಷ ವಿಜಯ್ ದೇವನೆ
ಆಯೇಷಾ ಬಾನು
|

Updated on:Mar 16, 2021 | 9:46 AM

Share

ಬೆಳಗಾವಿ: ಸದಾ ಒಂದಲ್ಲಾ ಒಂದು ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಹೊಸದೊಂದು ರೀತಿಯ ಕಿರಿಕ್ ಶುರು ಮಾಡಿದ್ದಾರೆ. ಕಳೆದ 3 ದಿನಗಳಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಬಸ್ ಸಂಚಾರವೇ ಬಂದ್ ಆಗಿದೆ. ಇದರ ಜೊತೆ ಈಗ ಮತ್ತೊಂದು ಕಿರಿಕ್ ಶುರುವಾಗಿದ್ದು ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಶಿವಸೇನೆ ಧಮ್ಕಿ ಹಾಕಿದೆ.

ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಕೊಲ್ಹಾಪುರ ಶಿವಸೇನೆ ಅಧ್ಯಕ್ಷ ವಿಜಯ್ ದೇವನೆ ಧಮ್ಕಿ ಹಾಕಿದ್ದಾರೆ. ಮಾರ್ಚ್ 20ರೊಳಗೆ ಬೆಳಗಾವಿ ಪಾಲಿಕೆ ಮುಂದಿರುವ ಕನ್ನಡ ಧ್ವಜವನ್ನು ತೆರವು ಮಾಡಬೇಕು. ತೆರವು ಮಾಡದಿದ್ರೆ ಕೊಲ್ಹಾಪುರ, ಸಾಂಗ್ಲಿ, ಸತಾರಾದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿಸುತ್ತೇವೆ ಎಂದು ವಿಜಯ್ ದೇವನೆ ಬೆಳಗಾವಿಯ ಶಿವಸೇನೆ ಮುಖಂಡ ಪ್ರಕಾಶ ಶಿರೋಳಕರನನ್ನು ಪಕ್ಕದಲ್ಲೇ ಕೂರಿಸಿಕೊಂಡು ಧಮ್ಕಿ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹೋಟೆಲ್‌ಗಳು, ಲಾರಿ, ಟ್ಯಾಂಕರ್, ಖಾಸಗಿ ವಾಹನಗಳ ಸಂಚಾರ, ಕೆಎಸ್ಆರ್‌ಟಿಸಿ ಬಸ್ ಸಂಚಾರ ಸಹ ಬಂದ್ ಮಾಡಿಸ್ತೇವೆ. ಮಾರ್ಚ್ 20ರಂದು ನಿಮ್ಮ ಎಲ್ಲ ವ್ಯಾಪಾರವನ್ನು ಬಂದ್ ಮಾಡಿಸುತ್ತೇವೆ. ಬಂದ್‌ಗೆ ಸಹಕರಿಸದಿದ್ದರೆ ಮಹಾರಾಷ್ಟ್ರ ಕನ್ನಡಿಗರಿಗೆ ಶಿವಸೇನೆ ತಕ್ಕ ಪಾಠ ಕಲಿಸುತ್ತೆ ಎಂದು ವಿಜಯ್ ದೇವಣೆ ಗೊಡ್ಡು ಬೆದರಿಕೆ ಹಾಕಿದ್ದಾರೆ.

ಹಳದಿ, ಕೆಂಪು ಶಾಲು ಹಾಕಿದವರನ್ನು ಕಂಡಲ್ಲೇ ಹೊಡೀತಾರೆ ಇನ್ನು ಹಳದಿ, ಕೆಂಪು ಶಾಲು ಹಾಕಿದವರನ್ನು ಕಂಡಲ್ಲೇ ಹೊಡೀತಾರೆ ಮರಾಠಿಗರು ಕಂಡಲ್ಲೇ ಹೊಡೆಯುತ್ತಾರೆಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡನೊಬ್ಬ ಗೊಡ್ಡು ಬೆದರಿಕೆ ಹಾಕಿದ್ದಾನೆ. ಶಿವಸೇನೆ ಮುಖಂಡನ ಕಾರು ತಡೆದು ಮಹಾರಾಷ್ಟ್ರ ಬೋರ್ಡ್ ಕಿತ್ತಾಕಿದ ವಿಚಾರ ಸಂಬಂಧ ಬೆಳಗಾವಿಯಲ್ಲಿ ಶಿವಸೇನೆ, MES ಒಂದೇ ನಾಣ್ಯದ 2 ಮುಖಗಳು. ನಮ್ಮ ಮೇಲೆ ದಾಳಿ ಮಾಡಿದ್ದವರನ್ನ ಪೊಲೀಸರು ಬಂಧಿಸಿಲ್ಲ. ಇನ್ಮುಂದೆ ಇದೇ ರೀತಿ ಆದರೆ ಕಂಡಲ್ಲಿಯೇ ಹೊಡೆಯುತ್ತೇವೆ. ಏನಾದ್ರು ಅನಾಹುತವಾದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ. ನಾವು ನಮ್ಮ ಪದ್ಧತಿಯಲ್ಲಿ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಬೆಳಗಾವಿ ನೆಲದಲ್ಲೇ ನಿಂತು MES ಮುಖಂಡ ಶುಭಂ ಸಾಳುಂಕೆ ಗೊಡ್ಡು ಬೆದರಿಕೆ ಹಾಕಿದ್ದಾರೆ. ಕನ್ನಡಿಗರಿಗೆ ಧಮ್ಕಿ ಹಾಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಶುಭಂ ಸಾಳುಂಕೆ ವಿರುದ್ಧ ಕ್ರಮ ಜರುಗಿಸಲು ಕರವೇ ಆಗ್ರಹಿಸಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಿನ ಬಸ್ ಸಂಚಾರ ಸ್ಥಗಿತ ಇನ್ನು ಕಳೆದ 3 ದಿನಗಳಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಿನ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ನಿತ್ಯ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಶಿವಸೇನೆ ಪುಂಡರು ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರ ಬಸ್​ನಿಲ್ದಾಣದಲ್ಲಿ ಕರ್ನಾಟಕ ಬಸ್​ಗಳಿಗೆ ಮಸಿ ಬಳಿದು ಬಸ್ ನಿಲ್ದಾಣದಿಂದ ವಾಪಸ್ ಕಳಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 3 ದಿನಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಸರ್ಕಾರಿ ಬಸ್​ಗಳನ್ನ ಬಂದ್ ಮಾಡಲಾಗಿದೆ.

ಬೆಳಗಾವಿ ಸೇರಿದಂತೆ ಚಿಕ್ಕೋಡಿ ವಿಭಾಗ ಮತ್ತು ಬೇರೆ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ನಿತ್ಯವೂ 600ಕ್ಕೂ ಹೆಚ್ಚು ಬಸ್​ಗಳು ಸಂಚಾರ ನಡೆಸುತ್ತಿದ್ದವು. ಇದ್ರಲ್ಲಿ ಸಾವಿರಾರು ಪ್ರಯಾಣಿಕರು ಮಹಾರಾಷ್ಟ್ರಕ್ಕೆ ಹೋಗಿ ಬರ್ತಿದ್ದರು. ಆದ್ರೆ ಈಗ ಬಸ್ ಬಂದ್ ಮಾಡಿರುವ ಕಾರಣ ನಿತ್ಯವೂ ಪ್ರಯಾಣಿಕರು ಪರದಾಡುವಂತಾಗಿದೆ. ಖಾಸಗಿ ವಾಹನಗಳ ಮೊರೆ ಹೋಗಿರುವ ಕೆಲವರು, ಸಾಕಷ್ಟು ಹಣ ತೆರುವಂತಾಗಿದೆ. ಮತ್ತೊಂದು ಕಡೆ ಬಡವರು ಬಸ್ ಬಂದ್ ಆಗಿರೋ ಹಿನ್ನೆಲೆ ಸದ್ಯಕ್ಕೆ ಪ್ರಯಾಣ ಮುಂದೂಡುವಂತಾಗಿದೆ.

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರ್ತಿದ್ದ ಮಹಾರಾಷ್ಟ್ರ ಸರ್ಕಾರದ ನೂರಾರು ಬಸ್​ಗಳು ಇದೀಗ ರಾಜ್ಯಕ್ಕೆ ಬರ್ತಿಲ್ಲ. ಕರ್ನಾಟಕ ಬಾರ್ಡರ್ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದವರೆಗೂ ಮಾತ್ರ ಬಸ್​ಗಳು ಓಡಾಡ್ತಿದ್ರೆ, ಇತ್ತ ಮಹಾರಾಷ್ಟ್ರ ಬಾರ್ಡರ್​ವರೆಗೆ ಮಹಾರಾಷ್ಟ್ರ ಸಾರಿಗೆ ಬಸ್​ಗಳು ಬರ್ತಿವೆ. ಪ್ರಯಾಣಿಕರು ಗಡಿವರೆಗೂ ರಾಜ್ಯ ಸಾರಿಗೆ ಬಸ್​ನಲ್ಲಿ ತೆರಳಿ ನಂತರ ಮಹಾರಾಷ್ಟ್ರ ಸಾರಿಗೆ ಬಸ್ ಹತ್ತುತ್ತಿದ್ದಾರೆ. 3 ದಿನಗಳ ಅವಧಿಯಲ್ಲಿ ಗಡಿವರೆಗೂ ಓಡಾಡುವ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಾಗಿದ್ದು, ಕೆಲ ಬಸ್​ಗಳಂತೂ ಖಾಲಿಯಾಗಿ ಓಡಾಡುತ್ತಿವೆ. ಬೇರೆ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್​ಗಳು ಬೆಳಗಾವಿ ನಿಲ್ದಾಣಕ್ಕೆ ಬಂದು ವಾಪಾಸ್ ತಮ್ಮೂರಿಗೆ ಹೋಗ್ತಿವೆ. ಈ ಮೂರು ದಿನದ ಅವಧಿಯಲ್ಲಿ ಬೆಳಗಾವಿ ವಿಭಾಗದಲ್ಲಿ 50ಲಕ್ಷ, ಚಿಕ್ಕೋಡಿ ವಿಭಾಗದಲ್ಲಿ 50 ಲಕ್ಷ ಸೇರಿ ಒಂದು ಕೋಟಿಗೂ ಅಧಿಕ ಲಾಸ್ ರಾಜ್ಯ ಸಾರಿಗೆ ಇಲಾಖೆಗೆ ಆಗಿದೆ.

ಶಿವಸೇನೆ ಪುಂಡರು ಮಾಡ್ತಿರುವ ಪುಂಡಾಟಿಕೆಗೆ ಕನ್ನಡ, ಮರಾಠಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದ್ರು ಸಚಿವರು ಹಾಗೂ ಸರ್ಕಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟ.. 2ನೇ ದಿನವೂ ಕೆಎಸ್ಅರ್‌ಟಿಸಿ ಬಸ್‌ ಸಂಚಾರ ಸ್ಥಗಿತ

Published On - 9:32 am, Tue, 16 March 21