ಮಹಾರಾಷ್ಟ್ರ: ಒಂದು ವರ್ಷದ ಮಗುವಿನೊಂದಿಗೆ ಬೃಹತ್​​ ಕಟ್ಟಡದಿಂದ ಜಿಗಿದ ಮಹಿಳೆ, ಇಬ್ಬರು ಸಾವು

ತನ್ನ ಒಂದು ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ಬೃಹತ್​​ ಕಟ್ಟಡದಿಂದ ಜಿಗಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ.

ಮಹಾರಾಷ್ಟ್ರ: ಒಂದು ವರ್ಷದ ಮಗುವಿನೊಂದಿಗೆ ಬೃಹತ್​​ ಕಟ್ಟಡದಿಂದ ಜಿಗಿದ ಮಹಿಳೆ, ಇಬ್ಬರು ಸಾವು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Sep 01, 2023 | 11:51 AM

ಪುಣೆ, ಸೆ.1: ತನ್ನ ಒಂದು ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ಬೃಹತ್​​ ಕಟ್ಟಡದಿಂದ ಜಿಗಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಕೌಟುಂಬಿಕ ವಿಚಾರಕ್ಕಾಗಿ ತನ್ನ ಪತಿಯ ಜತೆಗೆ ಜಗಳವಾಡಿದ್ದಾರೆ. ಈ ಕಾರಣಕ್ಕೆ ಆಕೆ ಬೃಹತ್​​ ಕಟ್ಟಡದ ಮೇಲಿನಿಂದ ಜಿಗಿದ್ದು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಲಾಗಿದೆ.

ಸಾವನ್ನಪ್ಪಿರುವ ಮಹಿಳೆಯನ್ನು ಪ್ರಿಯಾಂಕಾ ಮೋಹಿತೆ ಎಂದು ಗುರುತಿಸಲಾಗಿದೆ. ಘೋಡ್‌ಬಂದರ್ ರಸ್ತೆಯಲ್ಲಿರುವ ಪ್ಲಾಟ್​​ನಲ್ಲಿ ಪತಿ ಮತ್ತು ಒಂದು ವರ್ಷದ ಮಗನೊಂದಿಗೆ ಪ್ರಿಯಾಂಕಾ ಮೋಹಿತೆ ವಾಸಿಸುತ್ತಿದ್ದರು ಎಂದು ಕಾಸರ್ವದವಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ (ಅಪರಾಧ) ವೈಎಸ್ ಅವ್ಹಾದ್ ತಿಳಿಸಿದ್ದಾರೆ.

ಆಗಸ್ಟ್ 30ರ ರಕ್ಷಾ ಬಂಧನ ದಿನದಂದು ಪ್ರಿಯಾಂಕಾ ಮೋಹಿತೆ ತನ್ನ ಸಹೋದರಿಯ ಮನೆಗೆ ಹೋಗಲು ಬಯಸಿದ್ದು, ಆದರೆ ಇದಕ್ಕೆ ಆಕೆಯ ಪತಿ ಮಗುವಿನೊಂದಿಗೆ ಅಷ್ಟು ದೂರ ಪ್ರಯಾಣಿಸದಂತೆ ಸಲಹೆ ನೀಡಿದ್ದಾನೆ. ಇದರಿಂದ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಬುಲ್ದಾನಾದಲ್ಲಿ ಬಸ್ ಅಪಘಾತ; 6 ಮಂದಿ ಸಾವು

ಪತಿಯ ಮಾತಿನಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಪರಿಣಾಮದಿಂದ, ಶುಕ್ರವಾರ ಮುಂಜಾನೆ 1.30ರ ಸುಮಾರಿಗೆ ತಮ್ಮ ಫ್ಲಾಟ್‌ನ ಬಾಲ್ಕನಿಯಿಂದ ತಮ್ಮ ಮಗನೊಂದಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಶಬ್ದ ಕೇಳಿ ತಕ್ಷಣ ಕಟ್ಟಡದ ಇತರ ನಿವಾಸಿಗಳು ಹೊರಗೆ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ-ಮಗನನ್ನು ನೋಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ