Jugaad Ambulance: ಕೊವಿಡ್ ರೋಗಿಗಳಿಗೆ ಸಹಾಯ: ಪುಣೆ ಆಟೊ ಚಾಲಕರಿಂದ ‘ಜುಗಾಡ್ ಆಂಬುಲೆನ್ಸ್’ ಸೇವೆ

Jugaad Ambulance Service: ಕೇಶವ್ ಕ್ಷೀರ್‌ಸಾಗರ್ ಎಂಬ ವ್ಯಕ್ತಿ ಜುಗಾಡ್ ಆಂಬುಲೆನ್ಸ್ ಆರಂಭಿಸಿದ್ದು ಮೂರು ಆಟೊಗಳಲ್ಲಿ ಆಕ್ಸಿಜನ್ ಸೌಲಭ್ಯವಿರಿಸಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕಷ್ಟಪಡುವವರಿಗೆ ಈ ಜುಗಾಡ್ ಆಟೊಗಳು ನೆರವಿಗೆ ಬರುತ್ತವೆ.ಈ ಆಮ್ಲಜನಕ ಸಿಲಿಂಡರ್‌ಗಳು 6-7 ಗಂಟೆಗಳವರೆಗೆ ಇರುತ್ತವೆ.

Jugaad Ambulance: ಕೊವಿಡ್ ರೋಗಿಗಳಿಗೆ ಸಹಾಯ: ಪುಣೆ ಆಟೊ ಚಾಲಕರಿಂದ ಜುಗಾಡ್ ಆಂಬುಲೆನ್ಸ್ ಸೇವೆ
ಪುಣೆಯ ಜುಗಾಡ್ ಆಂಬುಲೆನ್ಸ್
Edited By:

Updated on: May 13, 2021 | 4:12 PM

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಕೊವಿಡ್ ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬಂದಿರುವ ಆಟೋ ಚಾಲಕರ ಗುಂಪೊಂದು ಜುಗಾಡ್ ಆಂಬುಲೆನ್ಸ್ ಸೇವೆ ಆರಂಭಿಸಿದೆ. ಪುಮೆ ನಗರದಲ್ಲಿ ಕೊವಿಡ್ ರೋಗಿಗಳನ್ನು ಕರೆದೊಯ್ಯಲು ಆಟೊಗಳನ್ನೇ ಇವರು ಆಂಬುಲೆನ್ಸ್ ಆಗಿ ಪರಿವರ್ತಿಸಿದ್ದಾರೆ.

ಕೇಶವ್ ಕ್ಷೀರ್‌ಸಾಗರ್ ಎಂಬ ವ್ಯಕ್ತಿ ಜುಗಾಡ್ ಆಂಬುಲೆನ್ಸ್ ಆರಂಭಿಸಿದ್ದು ಮೂರು ಆಟೊಗಳಲ್ಲಿ ಆಕ್ಸಿಜನ್ ಸೌಲಭ್ಯವಿರಿಸಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕಷ್ಟಪಡುವವರಿಗೆ ಈ ಜುಗಾಡ್ ಆಟೊಗಳು ನೆರವಿಗೆ ಬರುತ್ತವೆ.
ಈ ಆಮ್ಲಜನಕ ಸಿಲಿಂಡರ್‌ಗಳು 6-7 ಗಂಟೆಗಳವರೆಗೆ ಇರುತ್ತವೆ. ರೋಗಿಗಳು ನಮ್ಮನ್ನು ಸಂಪರ್ಕಿಸುವ ಸಹಾಯವಾಣಿ ಸಂಖ್ಯೆ ನಮ್ಮಲ್ಲಿದೆ. ರೋಗಿಗಳಿಗೆ ಆಮ್ಲಜನಕವನ್ನು ಹೇಗೆ ನೀಡಬೇಕೆಂದು ನಾವು ನಮ್ಮ ಚಾಲಕರಿಗೆ ತರಬೇತಿ ನೀಡಿದ್ದೇವೆ ಮತ್ತು ಅವರು ಸಂಪೂರ್ಣ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ವೈದ್ಯರ ತಂಡವೂ ಇದೆ ಅಂತಾರೆ ಕ್ಷೀರ್‌ಸಾಗರ್.

ಕೊವಿಡ್ -19 ನಿಂದ ಬಳಲುತ್ತಿರುವ ಜನರು ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯುವುದು ಕಷ್ಟಕರವಾಗಿತ್ತು, ಆದ್ದರಿಂದ ನಾವು ಅವರಿಗೆ ಸಹಾಯ ಮಾಡಲು ಮೂರು ಆಟೋಗಳಲ್ಲಿ ಆಮ್ಲಜನಕದ ಸಪೋರ್ಟ್ ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು.


ಟ್ವಿಟರ್​ನಲ್ಲಿ ಟ್ವೀಟಿಗರು ಈ ಆಟೊ ಚಾಲಕರನ್ನು ಶ್ಲಾಘಿಸಿದ್ದು ಇವರೇ ನಿಜವಾದ ಕೊವಿಡ್ ವಾರಿಯರ್ಸ್ ಎಂದಿದ್ದಾರೆ.


ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 46,781 ಹೊಸ ಪ್ರಕರಣಗಳು ಮತ್ತು 816 ಹೆಚ್ಚಿನ ಸಾವು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳ ದೈನಂದಿನ ಸಂಖ್ಯೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ವರದಿಗಳು ತಿಳಿಸಿವೆ.

ಬುಧವಾರ 58,805 ಮಂದಿ ಚೇತರಿಸಿಕೊಂಡಿದ್ದು ಚೇತರಿಸಿಕೊಂಡವರ ಸಂಖ್ಯೆ 4.6 ದಶಲಕ್ಷ ದಾಟಿದೆ. ಚೇತರಿಕೆ ದರವು ಪ್ರಸ್ತುತ ಶೇಕಡಾ 88.01 ರಷ್ಟಿದೆ.

ಇದನ್ನೂ ಓದಿ:  ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್​ಡೌನ್ ವಿಸ್ತರಣೆ; ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ಕೊವಿಡ್ ಪರಿಹಾರ ನಿಧಿಗೆ ಸಚಿವರ 1 ವರ್ಷದ ವೇತನ ನೀಡುವಂತೆ ಸಿಎಂ ಸೂಚನೆ

(Maharashtra’s Pune Auto Drivers Start Jugaad Ambulance Service to Help COVID19 Patients)

Published On - 4:00 pm, Thu, 13 May 21