ಶಬರಿಗಿರಿಯಲ್ಲಿ ಮಕರ ಜ್ಯೋತಿ ದರ್ಶನ: ಪುಳಕಗೊಂಡ ಭಕ್ತಸಾಗರ

| Updated By: ganapathi bhat

Updated on: Apr 06, 2022 | 9:03 PM

ಮಕರ ಸಂಕ್ರಮಣ ದಿನದಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಸಹಸ್ರ ಸಂಖ್ಯೆಯ ಜನರು ಜ್ಯೋತಿಯನ್ನು ಕಂಡು ಭಕ್ತಿಸಾಗರದಲ್ಲಿ ಮಿಂದೆದ್ದಿದ್ದಾರೆ. ಅಯ್ಯಪ್ಪ ಸ್ವಾಮಿಯ ದರ್ಶನವನ್ನೂ ಪಡೆದುಕೊಂಡಿದ್ದಾರೆ. 

ಶಬರಿಗಿರಿಯಲ್ಲಿ ಮಕರ ಜ್ಯೋತಿ ದರ್ಶನ: ಪುಳಕಗೊಂಡ ಭಕ್ತಸಾಗರ
ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ
Follow us on

ತಿರುವನಂತಪುರ: ಮಕರ ಸಂಕ್ರಮಣ ದಿನದಂದು ಐತಿಹಾಸಿಕ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಸಹಸ್ರ ಸಂಖ್ಯೆಯ ಜನರು ಜ್ಯೋತಿಯನ್ನು ಕಂಡು ಭಕ್ತಿಸಾಗರದಲ್ಲಿ ಮಿಂದೆದ್ದಿದ್ದಾರೆ. ಅಯ್ಯಪ್ಪ ಸ್ವಾಮಿಯ ದರ್ಶನವನ್ನೂ ಪಡೆದುಕೊಂಡಿದ್ದಾರೆ.

ಶಬರಿಗಿರಿಯಲ್ಲಿ ಮಕರಜ್ಯೋತಿ ಕಾಣುತ್ತಿದ್ದಂತೆ, ಭಕ್ತರು ಅಯ್ಯಪ್ಪನಾಮ ಸ್ಮರಣೆ ಮಾಡಿದ್ದಾರೆ. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆ ಮೊಳಗಿದೆ. ಜ್ಯೋತಿ ರೂಪದಲ್ಲಿ ಅಯ್ಯಪ್ಪ ದರ್ಶನವಾಗಿದೆ ಎಂದು ಭಕ್ತರು ಸಂತಸಗೊಂಡಿದ್ದಾರೆ.

ಶಬರಿಮಲೆಯ ಪೊನ್ನಂಬಲಮೇಡಿನಲ್ಲಿ ಮಕರಜ್ಯೋತಿ ಗೋಚರಿಸಿದೆ. ಪ್ರತಿ ವರ್ಷ ಈ ಸನ್ನಿವೇಶವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೇವಲ 5 ಸಾವಿರ ಭಕ್ತರಿಗೆ ಅವಕಾಶ ನೀಡಲಾಗಿತ್ತು.

ಸೂರ್ಯ ರಶ್ಮಿ ಸ್ಪರ್ಶಕ್ಕೆ ಅಡ್ಡವಾದ ಮೋಡ: ಅಗೋಚರವಾಗಿಯೇ ಗವಿ ಗಂಗಾಧರನನ್ನು ಸ್ಪರ್ಶಿಸಿ ಮುಂದೆ ನಡೆದ ಭಾಸ್ಕರ

Published On - 6:48 pm, Thu, 14 January 21