ತೆಲಂಗಾಣದಲ್ಲಿ ಹುಲಿ ಸಾವು, ವಿಷವುಂಡು ಮೃತಪಟ್ಟಿರುವ ಶಂಕೆ
ತೆಲಂಗಾಣದಲ್ಲಿ ಹುಲಿಯೊಂದು ಸಾವನ್ನಪ್ಪಿದ್ದು, ವಿಷವುಂಡು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ತೆಲಂಗಾಣದ ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕಾಗಜ್‌ನಗರ ಅರಣ್ಯದಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಹುಲಿ ಮೃತಪಟ್ಟಿರುವ ಸ್ಥಳದ ಆಸುಪಾಸಿನಲ್ಲಿ ಪ್ರಾಣಿಗಳ ಅರ್ಧಂಬರ್ಧ ದೇಹ ಕಂಡುಬಂದಿದೆ. ಸ್ಥಳೀಯ ಹೊಳೆ ಬಳಿ ಪತ್ತೆಯಾದ ಹುಲಿ ಮೃತದೇಹ ಕುತ್ತಿಗೆಯಲ್ಲಿ ಬಲೆ ಸಡಿಲಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ತೆಲಂಗಾಣದಲ್ಲಿ ಹುಲಿ(Tiger)ಯೊಂದು ಸಾವನ್ನಪ್ಪಿದ್ದು, ವಿಷವುಂಡು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ತೆಲಂಗಾಣದ ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕಾಗಜ್‌ನಗರ ಅರಣ್ಯದಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಹುಲಿ ಮೃತಪಟ್ಟಿರುವ ಸ್ಥಳದ ಆಸುಪಾಸಿನಲ್ಲಿ ಪ್ರಾಣಿಗಳ ಅರ್ಧಂಬರ್ಧ ದೇಹ ಕಂಡುಬಂದಿದೆ. ಸ್ಥಳೀಯ ಹೊಳೆ ಬಳಿ ಪತ್ತೆಯಾದ ಹುಲಿ ಮೃತದೇಹ ಕುತ್ತಿಗೆಯಲ್ಲಿ ಬಲೆ ಸಡಿಲಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿಗೆ ಸುಮಾರು ಐದು ಅಥವಾ ಆರು ವರ್ಷ ವಯಸ್ಸಾಗಿರಬಹುದು ಎಂದು ಅವರು ಹೇಳಿದರು. ಕಾಗಜ್‌ನಗರದಿಂದ ಸುಮಾರು ಎಂಟು ಕಿಮೀ ದೂರದಲ್ಲಿರುವ ದರೇಗಾಂವ್‌ನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಜನವರಿ 6 ರಂದು ಕಾವಲ್ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಕಾರಿಡಾರ್ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಗೆ ಒಂದೂವರೆ ವರ್ಷದ ಹುಲಿಯ ಮೃತದೇಹ ಪತ್ತೆಯಾಗಿತ್ತು.
ಮತ್ತಷ್ಟು ಓದಿ: International Tiger Day 2023: ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 435ಕ್ಕೆ ಏರಿಕೆ: ಸಮೀಕ್ಷೆ
ಉತ್ತರಾಖಂಡದಲ್ಲಿ 16 ವರ್ಷಗಳಲ್ಲಿ ಶೇ.314ರಷ್ಟು ಹೆಚ್ಚಳವಾದ ಹುಲಿಗಳ ಸಂಖ್ಯೆ 2006 ಮತ್ತು 2022 ರ ನಡುವೆ ಉತ್ತರಾಖಂಡದಲ್ಲಿ ಹುಲಿಗಳ ಸಂಖ್ಯೆ 314 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರಾಖಂಡದ ಮುಖ್ಯ ವನ್ಯಜೀವಿ ವಾರ್ಡನ್ ಸಮೀರ್ ಸಿನ್ಹಾ ಅವರು ಉತ್ತರಾಖಂಡದಲ್ಲಿ ಹುಲಿ ಸಂಖ್ಯೆಯ ಸಾಂದ್ರತೆಯು ವಿಶ್ವದಲ್ಲೇ ಅತಿ ಹೆಚ್ಚು ಎಂದು ಹೇಳಿದ್ದಾರೆ.
2006 ರಲ್ಲಿ 178 ರಷ್ಟಿದ್ದ ಹುಲಿಗಳ ಸಂಖ್ಯೆ 2022 ರಲ್ಲಿ 560 ಕ್ಕೆ ಏರಿತು, ಇದು ಶೇ. 314ರಷ್ಟು ಏರಿಕೆಯನ್ನು ದಾಖಲಿಸಿದೆ ಎಂದು ಸಿನ್ಹಾ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯು ಅವುಗಳ ವಾಸಸ್ಥಳವನ್ನು ಸುಧಾರಿಸಲು ಕೈಗೊಂಡ ಕ್ರಮಗಳಿಂದಾಗಿ ರಾಜ್ಯದಲ್ಲಿ ವನ್ಯಜೀವಿಗಳ ಸಂತತಿ ಹೆಚ್ಚಳವಾಗಿದೆ ಎಂದು ಹೇಳಿದರು.
ಹುಲಿಗಳಲ್ಲದೆ ಚಿರತೆಗಳು, ಆನೆಗಳು ಮತ್ತು ಹಾವುಗಳಂತಹ ಪ್ರಾಣಿಗಳ ಎನ್‌ಕೌಂಟರ್‌ನಲ್ಲಿ ಸತ್ತವರ ಒಟ್ಟು ಸಂಖ್ಯೆ 2021 ರಲ್ಲಿ 71, 2022 ರಲ್ಲಿ 82 ಮತ್ತು 2023 ರಲ್ಲಿ 66 ಎಂದು ಅವರು ಹೇಳಿದರು. ಮನುಷ್ಯ-ಪ್ರಾಣಿ ಸಂಘರ್ಷದಲ್ಲಿ ಗಾಯಗೊಂಡವರ ಸಂಖ್ಯೆ 2021 ರಲ್ಲಿ 361, 2022 ರಲ್ಲಿ 325 ಮತ್ತು 2023 ರಲ್ಲಿ 317 ಎಂದು ಅಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ