ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​​ಗೆ ಭೂ ಮಾಲೀಕತ್ವದ ದಾಖಲೆ ನೀಡಿದ ಮಮತಾ ಬ್ಯಾನರ್ಜಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 31, 2023 | 2:08 PM

ಅಮರ್ತ್ಯ ಸೇನ್‌ಗೆ ಅವರಿಗೆ ಈ ರೀತಿ ಅವಮಾನ ಮಾಡಬಾರದು ಎಂಬ ಕಾರಣದಿಂದ ನಾನು ಈ ಭೂ ದಾಖಲೆಗಳನ್ನು ನೀಡಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿವರೆಗೆ ಆದದ್ದು ಸಾಕು. ವಿವಿ ಹೇಳುತ್ತಿರುವುದು ಸಂಪೂರ್ಣವಾಗಿ ತಪ್ಪು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​​ಗೆ ಭೂ ಮಾಲೀಕತ್ವದ ದಾಖಲೆ ನೀಡಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರನ್ನು ಭೇಟಿ ಮಾಡಿ ಭೂ ಮಾಲೀಕತ್ವದ ದಾಖಲೆಗಳನ್ನು ನೀಡುತ್ತಿರುವುದು
Follow us on

ಕೊಲ್ಕತ್ತಾ: ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  (Mamata Banerjee)ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ (Amartya Sen) ಅವರನ್ನು ಭೇಟಿ ಮಾಡಿ ಭೂ ಮಾಲೀಕತ್ವದ ದಾಖಲೆಗಳನ್ನು ನೀಡಿದ್ದಾರೆ. ಶಾಂತಿ ನಿಕೇತನ್ ನಲ್ಲಿ ವಾಸಿಸುತ್ತಿರುವ ಸೇನ್ ಅವರಿಗೆ ಭೂ ಮಾಲೀಕತ್ವವನ್ನು ಸಾಬೀತುಪಡಿಸುವಂತೆ ವಿಶ್ವ ಭಾರತಿ ವಿಶ್ವವಿದ್ಯಾಲಯ ಹಲವು ಬಾರಿ ನೋಟಿಸ್‌ ನೀಡಿತ್ತು. ಸೋಮವಾರ ಸಂಜೆ, ಮಮತಾ ಬ್ಯಾನರ್ಜಿ ಅವರು ದಾಖಲೆಗಳನ್ನು ಹಸ್ತಾಂತರಿಸಿದ್ದು, ವಿಶ್ವ ಭಾರತಿ ವಿಶ್ವವಿದ್ಯಾಲಯದ ವಿರುದ್ಧ ತಮ್ಮ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ.ವಿಶ್ವವಿದ್ಯಾನಿಲಯವು ತನ್ನ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿ ಜನವರಿ 24 ರಂದು ಖ್ಯಾತ ಅರ್ಥಶಾಸ್ತ್ರಜ್ಞ ಸೇನ್ ಅವರಿಗೆ ಪತ್ರವನ್ನು ಕಳುಹಿಸಿತ್ತು. ಈ ಹಿಂದೆಯೂ ಇದೇ ರೀತಿಯ ಸೂಚನೆಗಳನ್ನು ಕಳುಹಿಸಲಾಗಿತ್ತು.

“ಅಮರ್ತ್ಯ ಸೇನ್‌ಗೆ ಅವರಿಗೆ ಈ ರೀತಿ ಅವಮಾನ ಮಾಡಬಾರದು ಎಂಬ ಕಾರಣದಿಂದ ನಾನು ಈ ಭೂ ದಾಖಲೆಗಳನ್ನು ನೀಡಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿವರೆಗೆ ಆದದ್ದು ಸಾಕು. ವಿವಿ ಹೇಳುತ್ತಿರುವುದು ಸಂಪೂರ್ಣವಾಗಿ ತಪ್ಪು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 89ರ ಹರೆಯದ ನೊಬೆಲ್ ಪ್ರಶಸ್ತಿ ಪುರಸ್ಕೃತರಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆಯೂ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಈಗ ಅವರು ನಿಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಇದು ನಿಮ್ಮ ಭೂಮಿ ಎಂದು ಸಾಬೀತಾಗಿದೆ” ಎಂದು ಮಮತಾ ಅಮರ್ತ್ಯ ಸೇನ್‌ಗೆ ಹೇಳಿದ್ದಾರೆ.


ಅರ್ಥಶಾಸ್ತ್ರಜ್ಞರ ತಂದೆ ಅಶುತೋಷ್ ಸೇನ್ ಅವರಿಗೆ 1.25 ಎಕರೆ ಗುತ್ತಿಗೆ ನೀಡಲಾಗಿತ್ತು, ಆದರೆ ಅವರು 1.38 ಎಕರೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯ ಹೇಳಿಕೊಂಡಿದೆ.

ಕೇಂದ್ರೀಯ ವಿಶ್ವವಿದ್ಯಾನಿಲಯ ವಿಶ್ವ ಭಾರತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುಲಪತಿಯಾಗಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರವು ತನ್ನ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರು ಕೇಂದ್ರದ ಆಡಳಿತಾರೂಢ ಬಿಜೆಪಿಯ ಆದೇಶದಂತೆ ವರ್ತಿಸುತ್ತಿದ್ದಾರೆ. ಅವರು ಶಾಂತಿನಿಕೇತನದಲ್ಲಿ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ವಿಶ್ವವಿದ್ಯಾಲಯವನ್ನು “ಕೇಸರಿಕರಣ” ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಉಪಕುಲಪತಿಗಳು ಅಮರ್ತ್ಯ ಸೇನ್ ಅವರ ನೊಬೆಲ್ ಪ್ರಶಸ್ತಿ ಪ್ರಶ್ನಿಸಿ ಟೀಕೆಗಳನ್ನು ಮಾಡಿದ್ದರು.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಬಿಜೆಪಿಯನ್ನು ಟೀಕಿಸುವ ಅವರ ಹಿಂದಿನ ಹೇಳಿಕೆಗಳಿಂದಾಗಿ ವಿಶ್ವವಿದ್ಯಾಲಯವು ಅಮರ್ತ್ಯ ಸೇನ್ ಅವರನ್ನು ಗುರಿಯಾಗಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ: ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಕ್ಕೆ ಕಾರಣವಾದ ವ್ಯಕ್ತಿಗೆ ಮೂರು ಜೀವಾವಧಿ ಶಿಕ್ಷೆ

ಮಮತಾ ಬ್ಯಾನರ್ಜಿಯವರು ಪ್ರಧಾನಿಯಾಗುವ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಡಾ ಸೇನ್ ಹೇಳಿದ್ದರು.ವಿಶ್ವ ಭಾರತಿ ಕಳೆದ ವಾರ ಮೂರು ದಿನಗಳಲ್ಲಿ ಎರಡು ಪತ್ರಗಳನ್ನು ಕಳುಹಿಸಿದ್ದು, ಶಾಂತಿನಿಕೇತನದಲ್ಲಿ “ಅನಧಿಕೃತ ರೀತಿಯಲ್ಲಿ ಆಕ್ರಮಿಸಿಕೊಂಡಿರುವ” ಭೂಮಿಯನ್ನು ತಕ್ಷಣವೇ ಹಸ್ತಾಂತರಿಸುವಂತೆ ಡಾ ಸೇನ್ ಅವರನ್ನು ಕೇಳಿದೆ.

ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ ಸೇನ್, “ಅವರು ಭೂ ದಾಖಲೆಗಳೊಂದಿಗೆ ಬಂದು ಎಲ್ಲ ವಿವರಗಳನ್ನು ಕಲೆ ಹಾಕಿದ್ದಾರೆ. ಇದು ಆಶ್ಚರ್ಯವನ್ನುಂಟುಮಾಡಿದೆ ಎಂದು ಹೇಳಿದ್ದಾರೆ. “ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ” ನನ್ನ ಮನೆಯನ್ನು ಕಬಳಿಸಲು ಪ್ರಯತ್ನಿಸುತ್ತಿರುವವರು ಇನ್ನೊಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಸೇನ್ ಹೇಳಿದ್ದಾರೆ.

ಇದು ಇಲ್ಲಿಗೆ ಮುಗಿಯುತ್ತದೆ ಎಂದು ನಾನು ಭಾವಿಸುವುದಿಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ನನ್ನ ಮನೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುವವರು ಇನ್ನೊಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ನಾನು ಜಾತ್ಯತೀತ ವಾತಾವರಣದಲ್ಲಿ ಹುಟ್ಟಿ ಬೆಳೆದಿದ್ದೇನೆ ಮತ್ತು ಜಾತ್ಯತೀತತೆಯನ್ನು ನಂಬಿದ್ದೇನೆ. ಕೋಮುವಾದಿ ರಾಜಕಾರಣದಲ್ಲಿ ತೊಡಗುವವರು ಜಾತ್ಯತೀತತೆಯನ್ನು ಬೋಧಿಸುವ ಇಂತಹ ದೃಷ್ಟಿಕೋನಗಳನ್ನು ಇಷ್ಟಪಡುವುದಿಲ್ಲ ಎಂದು ಸೇನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ