ಭ್ರಷ್ಟಾಚಾರ ಪ್ರಕರಣ: ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ಇಡಿ ದಾಳಿ
ಕೇಂದ್ರೀಯ ಸಂಸ್ಥೆ ಈ ತಿಂಗಳ ಆರಂಭದಲ್ಲಿ ನಗರದ ಕೈಗಾರಿಕಾ ಪ್ರದೇಶದಲ್ಲಿ ಶೋಧ ನಡೆಸಿದ್ದು, ವಿವಿಧ ಉದ್ಯಮಿಗಳಿಂದ 250 ರಿಂದ 300 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ (Corruption case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಂಗಳವಾರ ಕೋಲ್ಕತ್ತಾದಲ್ಲಿ ಕನಿಷ್ಠ ಹನ್ನೆರಡು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಟಿವಿ9 ಭಾರತ್ವರ್ಷ್ ವರದಿ ಮಾಡಿದೆ.ಕೋಲ್ಕತ್ತಾದ ಆನಂದ್‌ಪುರ, ತೆಂಗ್ರಾ, ಅಲಿಪೋರ್, ನ್ಯೂ ಅಲಿಪೋರ್, ಹೇಸ್ಟಿಂಗ್ಸ್, ಬಜ್‌ಬುಜ್ ಮತ್ತು ಮಹೇಶ್ತಾಲಾ ಪ್ರದೇಶಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಗಳು ಬೆಳಿಗ್ಗೆ 6.30 ರ ಸುಮಾರಿಗೆ ಪ್ರಾರಂಭವಾಗಿದ್ದು, ಅಧಿಕಾರಿಗಳ ತಂಡವು ತೆಂಗ್ರಾದಲ್ಲಿನ ಕಚೇರಿಯೊಂದರ ಮೇಲೆ ದಾಳಿ ನಡೆಸಿತು. ದಕ್ಷಿಣ ಕೋಲ್ಕತ್ತಾದ ಅಲಿಪೋರ್ ರಸ್ತೆಯಲ್ಲಿರುವ ಅತಿಥಿ ಗೃಹ ಮತ್ತು ವಸತಿ ಫ್ಲಾಟ್ ಮೇಲೆ ನಾಲ್ಕೈದು ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.
ಆದರೆ, ಈ ದಾಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕೇಂದ್ರೀಯ ಸಂಸ್ಥೆ ಈ ತಿಂಗಳ ಆರಂಭದಲ್ಲಿ ನಗರದ ಕೈಗಾರಿಕಾ ಪ್ರದೇಶದಲ್ಲಿ ಶೋಧ ನಡೆಸಿದ್ದು, ವಿವಿಧ ಉದ್ಯಮಿಗಳಿಂದ 250 ರಿಂದ 300 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ.
ವಿವಿಧ ಶೆಲ್ ಕಂಪನಿಗಳ ಮೂಲಕ ವಂಚನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಜಾರಿ ನಿರ್ದೇಶನಾಲಯದ ಇತ್ತೀಚಿನ ದಾಳಿಯು ಈ ಪ್ರಕರಣಕ್ಕೆ ಸಂಬಂಧಿಸಿದೆ ಎನ್ನಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ