ಕೇರಳ: ಕೆಎಸ್ಆರ್​​ಟಿಸಿ ಬಸ್ಸಿನಲ್ಲಿ ಯುವಕನ ಅನುಚಿತ ವರ್ತನೆ ವಿರುದ್ಧ ದನಿಯೆತ್ತಿದ ಯುವತಿ; ತಪ್ಪಿಸಲು ಯತ್ನಿಸಿದ ಆರೋಪಿಯನ್ನು ಹಿಡಿದುಕೊಟ್ಟ ಕಂಡೆಕ್ಟರ್

ನಂದಿತಾ ವಿಡಿಯೊದಲ್ಲಿ ಹೇಳುವಂತೆ, ಆರೋಪಿ ಸವಾದ್, ನಂದಿತಾ ಮತ್ತು ಇನ್ನೊಬ್ಬ ಮಹಿಳಾ ಪ್ರಯಾಣಿಕರ ನಡುವೆ ಕುಳಿತಿದ್ದ. ಮೂರು ಸೀಟುಗಳಿರುವ ಬಸ್ ಅದು. ಬಸ್ ಅಂಗಮಾಲಿಯಿಂದ ಹೊರಟ ನಂತರ, ಆರೋಪಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದನು. ಆರಂಭದಲ್ಲಿ, ನಂದಿತಾ ಅದನ್ನು ನಿರ್ಲಕ್ಷಿಸಿದ್ದಾರೆ...

ಕೇರಳ: ಕೆಎಸ್ಆರ್​​ಟಿಸಿ ಬಸ್ಸಿನಲ್ಲಿ ಯುವಕನ ಅನುಚಿತ ವರ್ತನೆ ವಿರುದ್ಧ ದನಿಯೆತ್ತಿದ ಯುವತಿ; ತಪ್ಪಿಸಲು ಯತ್ನಿಸಿದ ಆರೋಪಿಯನ್ನು ಹಿಡಿದುಕೊಟ್ಟ ಕಂಡೆಕ್ಟರ್
ಆರೋಪಿ ಸವಾದ್ ಶಾImage Credit source: mastaanii_/Instagram
Follow us
ರಶ್ಮಿ ಕಲ್ಲಕಟ್ಟ
|

Updated on: May 19, 2023 | 1:41 PM

ಕೊಚ್ಚಿ (ಕೇರಳ): ಎರ್ನಾಕುಲಂ ಜಿಲ್ಲೆಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ನಲ್ಲಿ ಹಸ್ತ ಮೈಥುನ ನಡೆಸಿ, ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.ಆರೋಪಿಯನ್ನು ಎರ್ನಾಕುಲಂನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ತ್ರಿಶೂರ್ ಜಿಲ್ಲೆಯವರಾದ ನಂದಿತಾ ಶಂಕರ (Nandita Sankara) ನೀಡಿದ ದೂರು ನೀಡಿದ ನಂತರ ಮಂಗಳವಾರ ನಡೆದ ಆಪಾದಿತ ಘಟನೆ ಬೆಳಕಿಗೆ ಬಂದಿದೆ. ನಟಿ, ಮಾಡೆಲ್ ಆಗಿರುವ ನಂದಿತಾ ಘಟನೆಯ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಆರೋಪಿ ತನ್ನ ಪ್ಯಾಂಟ್‌ಗಳನ್ನು ಬಿಚ್ಚಿ, ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎಂದು ನಂದಿತಾ ವಿಡಿಯೊದಲ್ಲಿ ಆರೋಪಿಸಿದ್ದಾರೆ. ಆರೋಪಿಯನ್ನು ಕೋಯಿಕ್ಕೋಡ್ ಮೂಲದ ಸವದ್ ಶಾ (27) ಎಂದು ಗುರುತಿಸಲಾಗಿದೆ.

ಎರ್ನಾಕುಲಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಅತ್ತಾಣಿ ಎಂಬಲ್ಲಿ ಈ ಘಟನೆ ನಡೆದಿದೆ. ನಂದಿತಾ ಸಿನಿಮಾ ಶೂಟಿಂಗ್‌ಗಾಗಿ ಎರ್ನಾಕುಲಂಗೆ ಹೋಗುತ್ತಿದ್ದರು. ಸವಾದ್ ಅಂಗಮಾಲಿಯಿಂದ ಈ ಬಸ್‌ಗೆ ಹತ್ತಿದ್ದ. ನಂದಿತಾ ವಿಡಿಯೊದಲ್ಲಿ ಹೇಳುವಂತೆ, ಆರೋಪಿ ಸವಾದ್, ನಂದಿತಾ ಮತ್ತು ಇನ್ನೊಬ್ಬ ಮಹಿಳಾ ಪ್ರಯಾಣಿಕರ ನಡುವೆ ಕುಳಿತಿದ್ದ. ಮೂರು ಸೀಟುಗಳಿರುವ ಬಸ್ ಅದು. ಬಸ್ ಅಂಗಮಾಲಿಯಿಂದ ಹೊರಟ ನಂತರ, ಆರೋಪಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದನು. ಆರಂಭದಲ್ಲಿ, ನಂದಿತಾ ಅದನ್ನು ನಿರ್ಲಕ್ಷಿಸಿದ್ದಾರೆ. ಸ್ವಲ್ಪ ಸಮಯದ ನಂತರ ಆರೋಪಿಯಿಂದ ಮತ್ತಷ್ಟು ಕಿರಿಕಿರಿ ಅನುಭವಿಸಿದಾಗ ನಂದಿತಾ ಪ್ರತಿಕ್ರಿಯಿಸಿದ್ದಾರೆ. ಅಷ್ಟೊತ್ತಿಗೆ ಬಳಿ ಬಂದ ಕಂಡಕ್ಟರ್ ವಿಷಯ ಏನು ಎಂದು ಕೇಳಿ, ನಿಮಗೆ ದೂರು ನೀಡಬೇಕಿದೆಯೇ ಎಂದು ಕೇಳಿದ್ದಾರೆ. ಆಗ ನಂದಿತಾ ಇದೆ ಎಂದು ಹೇಳಿದ್ದಾರೆ. ಕಂಡಕ್ಟರ್, ಬಸ್ ಚಾಲಕರಲ್ಲಿ ಬಾಗಿಲು ತೆರೆಯಬೇಡಿ ಎಂದು ಹೇಳಿದ್ದಾರೆ. ಅತ್ತಾಣಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದಾಗ, ಆರೋಪಿ ಬಸ್ಸಿನಿಂದ ಹೊರಗೆ ಓಡಿದ್ದಾನೆ. ಕಂಡಕ್ಟರ್ ಅವನನ್ನು ಹಿಡಿಯಲು ಪ್ರಯತ್ನಿರುವುದು, ಆತನ ಹಿಡಿತದಿಂದ ಸವದ್ ಶಾ ಓಡಿ ಹೋಗುತ್ತಿರುವುದು ವಿಡಿಯೊದಲ್ಲಿದೆ. ನಂತರ ಸ್ಥಳೀಯರು ಮತ್ತು ಇತರ ಪ್ರಯಾಣಿಕರು ಆರೋಪಿಯನ್ನು ಹಿಡಿದು ನೆಡುಂಬಶ್ಶೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:2027ರ ಹೊತ್ತಿಗೆ ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಲಿದೆ: ಹರಿಭೂಷಣ್ ಠಾಕೂರ್

ನಡೆದ ಘಟನೆಯನ್ನು ವಿಡಿಯೊದಲ್ಲಿ ವಿವರಿಸಿದ ನಂದಿತಾ, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿರುವ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಇಂಥಾ ಸಂದರ್ಭದಲ್ಲಿ ತನ್ನ ಸೀಟಿನಲ್ಲಿ ಕುಳಿತಿದ್ದ ಮತ್ತೊಬ್ಬ ಮಹಿಳೆ, ಆಕೆ ಕಾನೂನು ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ಬಂದು ನನ್ನ ಜತೆ ನಿಂತಿದ್ದಾಳೆ. ಬಸ್ ಕಂಡಕ್ಟರ್ ಮತ್ತು ಚಾಲಕರು ಜತೆಗೆ ನಿಂತಿದ್ದಾರೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ