ಶ್ರೀಮಂತನಾಗುವ ದುರಾಸೆಯಿಂದ ಮಾಂತ್ರಿಕ ಹೇಳಿದಂತೆ ವ್ಯಕ್ತಿಯೊಬ್ಬ ಓರ್ವನ ತಲೆ ಕಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಪೂಜೆ ಮುಗಿಸಿದರೆ ನಿನಗೆ 50-60 ಕೋಟಿ ರೂ. ಸಿಗುವುದು ನಿಶ್ಚಿತ ಎಂದು ಮಾಂತ್ರಿಕನೊಬ್ಬ ಹೇಳಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಷ್ಟೇ ಅಲ್ಲದೆ ಆತನ ತಲೆಯನ್ನು ಕಡಿದು ಪೂಜೆಗೆ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬಿಹಾರ ಮೂಲದವರಾಗಿದ್ದಾರೆ, ದೆಹಲಿಯಲ್ಲಿ ಇ-ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ, ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಅಪರಾಧವೆಸಗಿದ್ದಾನೆ. ಅದರಲ್ಲಿ ಒಬ್ಬ ಸ್ನೇಹಿತ ತಾನು ಯೂಟ್ಯೂಬ್ ನೋಡಿ ಬ್ಲ್ಯಾಕ್ ಮ್ಯಾಜಿಕ್ ಕಲಿತಿದ್ದೇನೆ, ತಲೆಬುರುಡೆಗೆ ಪೂಜೆ ಮಾಡಿದರೆ ಶ್ರೀಮಂತರಾಗಬಹುದು ಎಂದು ಆತ ಹೇಳಿದ್ದ.
ಬಂಧಿತ ಆರೋಪಿಗಳನ್ನು ವಿಕಾಸ್ (28) ಅಲಿಯಾಸ್ ಪರಮಾತ್ಮ, ನರೇಂದ್ರ, ಪವನ್ ಕುಮಾರ್ ಮತ್ತು ಪಂಕಜ್ ಎಂದು ಗುರುತಿಸಲಾಗಿದೆ. ಈ ಘಟನೆ ಈ ಜೂನ್ನಲ್ಲಿ ನಡೆದಿದೆ, ಪೊಲೀಸರು ಗಾಜಿಯಾಬಾದ್‌ನ ಚರಂಡಿಯಲ್ಲಿ ತಲೆಯಿಲ್ಲದ ಶವ ವಶಪಡಿಸಿಕೊಂಡಿದ್ದರು. ತನಿಖೆ ಪ್ರಾರಂಭಿಸಲಾಯಿತು, ವಿಕಾಸ್ ಗುಪ್ತಾ (24) ಅಲಿಯಾಸ್ ಮೋಟಾ ಮತ್ತು ಧನಂಜಯ್ (25) ಅವರನ್ನು ಬಂಧಿಸಲಾಗಿತ್ತು.
ವಿಚಾರಣೆ ವೇಳೆ ವಿಕಾಸ್ (28) ಅಲಿಯಾಸ್ ಪರಮಾತ್ಮ ಎಂಬಾತ ವ್ಯಕ್ತಿಯೊಬ್ಬನನ್ನು ಕೊಂದು ಆತನ ತಲೆಬುರುಡೆಯನ್ನು ಮಾಟಮಂತ್ರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದ ಎಂದು ತಿಳಿದು ಬಂದಿದೆ. ಪರಮಾತ್ಮನ ಸೂಚನೆ ಮೇರೆಗೆ ರಾಜು ಶಾ (29) ಎಂಬಾತನನ್ನು ಕೊಲೆ ಮಾಡಿರುವುದಾಗಿ ಮೋಟಾ ಮತ್ತು ಧನಂಜಯ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಡಿಸೆಂಬರ್ 7ರ ಶನಿವಾರದಂದು ಪರಮಾತ್ಮನನ್ನು ಬಂಧಿಸಲಾಗಿತ್ತು.
ಮತ್ತಷ್ಟು ಓದಿ: ಮದುವೆಯಾಗಿದ್ದರೂ 2 ಗರ್ಲ್ ಫ್ರೆಂಡ್ಸ್ಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿ ಬಂಧನ
ಆರೋಪಿಯ ಬಂಧನದ ನಂತರ, ಪೊಲೀಸರು ರಾಜು ಅವರ ತಲೆಬುರುಡೆಯನ್ನು ಗಾಜಿಯಾಬಾದ್‌ನ ಚರಂಡಿಯಿಂದ ವಶಪಡಿಸಿಕೊಂಡರು. ಇದಲ್ಲದೆ, ಪೊಲೀಸರು ಪ್ರಾಣಿಯ ತಲೆಬುರುಡೆ, ಹರಿತವಾದ ಆಯುಧಗಳು ಮತ್ತು ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ