ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Jul 21, 2020 | 1:19 PM

ಎಐಸಿಸಿ ಪ್ರಧಾನ ಕಚೇರಿಯ ಸಿಬ್ಬಂದಿ ವಸತಿಗೃಹದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಮೃತನ ಹೆಸರು ಪ್ರಕಾಶ್​ ಸಿಂಗ್​(45) ಎಂದು ತಿಳಿದುಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮೃತ ಪ್ರಕಾಶ್​ನ ಸಹೋದರ ಅವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದನಂತೆ. ಪ್ರಕಾಶ್​ ಶುಕ್ರವಾರದಿಂದ ಸಿಬ್ಬಂದಿ ವಸತಿಗೃಹದ ತನ್ನ ಕೋಣೆಯಲ್ಲಿಯೇ ಉಳಿದಿದ್ದು ಯಾವುದೇ ಕರೆಗೆ ಸ್ಪಂದಿಸುತ್ತಿರಲಿಲ್ಲ ಎಂದು ತಿಳಿಸಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಪ್ರಕಾಶ್​ ಮೃತದೇಹ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದೆ. ಕೂಡಲೇ […]

ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಎಐಸಿಸಿ ಪ್ರಧಾನ ಕಚೇರಿಯ ಸಿಬ್ಬಂದಿ ವಸತಿಗೃಹದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಮೃತನ ಹೆಸರು ಪ್ರಕಾಶ್​ ಸಿಂಗ್​(45) ಎಂದು ತಿಳಿದುಬಂದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮೃತ ಪ್ರಕಾಶ್​ನ ಸಹೋದರ ಅವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದನಂತೆ. ಪ್ರಕಾಶ್​ ಶುಕ್ರವಾರದಿಂದ ಸಿಬ್ಬಂದಿ ವಸತಿಗೃಹದ ತನ್ನ ಕೋಣೆಯಲ್ಲಿಯೇ ಉಳಿದಿದ್ದು ಯಾವುದೇ ಕರೆಗೆ ಸ್ಪಂದಿಸುತ್ತಿರಲಿಲ್ಲ ಎಂದು ತಿಳಿಸಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಪ್ರಕಾಶ್​ ಮೃತದೇಹ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದೆ. ಕೂಡಲೇ ಮೃತದೇಹವನ್ನ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಮೃತದೇಹದ ಪಕ್ಕ ಡೆತ್​ನೋಟ್​ ಪತ್ತೆ
ಪ್ರಾಥಮಿಕ ತನಿಖೆ ಪ್ರಕಾರ ಮೃತದೇಹದ ಪಕ್ಕ ಡೆತ್​ನೋಟ್​ ಪತ್ತೆಯಾಗಿದ್ದ ವೈವಾಹಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಕುಡಿತದ ಚಟಕ್ಕೆ ಒಳಗಾಗಿದ್ದ ಪ್ರಕಾಶ್​ನಿಂದ ಆತನ ಕುಟುಂಬ ದೂರವಾಗಿತ್ತಂತೆ. ಹೀಗಾಗಿ, ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರಕಾಶ್​ ನೇಣಿಗೆ ಶರಣಾಗಿರಬಹುದು ಎಂದು ಹೇಳಲಾಗ್ತಿದೆ.