Viral Video: ಬ್ಯಾಗ್​​ನಲ್ಲಿದ್ದ ಮೊಬೈಲ್​​ನಲ್ಲಿ ಬೆಂಕಿ; ಕೈ, ತಲೆಕೂದಲು ಸುಟ್ಟುಕೊಂಡ ಯುವಕ

| Updated By: Digi Tech Desk

Updated on: Apr 22, 2021 | 2:39 PM

ಚಾರ್ಜ್​​​ಗೆ ಹಾಕಿದ್ದ ಮೊಬೈಲ್​ ಸ್ಫೋಟವಾಗಿದ್ದನ್ನು, ಮೊಬೈಲ್ ಸ್ಫೋಟದಿಂದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದನ್ನು ಕೇಳಿದ್ದೇವೆ. ಆದರೆ ಈಗ ಮೊಬೈಲ್​​ಗೆ ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ.. ಅಬ್ಬಾ.. ! ಇದು ನಿಜಕ್ಕೂ ಭಯಾನಕ ಎಂದಿದ್ದಾರೆ. ಯುವಕ ಹಾಗೂ ಯುವತಿ ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ಯುವಕನ ಎಡಭುಜದಲ್ಲಿ ಬ್ಯಾಗ್ ಇರುತ್ತದೆ. ಅದರಲ್ಲಿ ಇರುವ ಮೊಬೈಲ್​ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡು, ಬ್ಯಾಗ್ ಹೊತ್ತಿ ಉರಿಯಲು ಪ್ರಾರಂಭಿಸಿದೆ. ಈ ಘಟನೆ ನಡೆದಿದ್ದು ಚೀನಾದಲ್ಲಿ ಎಂದು ಹೇಳಲಾಗಿದ್ದು, ದಕ್ಷಿಣ ಚೀನಾ ಮಾರ್ನಿಂಗ್​ ಪೋಸ್ಟ್ […]

Viral Video: ಬ್ಯಾಗ್​​ನಲ್ಲಿದ್ದ ಮೊಬೈಲ್​​ನಲ್ಲಿ ಬೆಂಕಿ; ಕೈ, ತಲೆಕೂದಲು ಸುಟ್ಟುಕೊಂಡ ಯುವಕ
Fire
Follow us on

ಚಾರ್ಜ್​​​ಗೆ ಹಾಕಿದ್ದ ಮೊಬೈಲ್​ ಸ್ಫೋಟವಾಗಿದ್ದನ್ನು, ಮೊಬೈಲ್ ಸ್ಫೋಟದಿಂದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದನ್ನು ಕೇಳಿದ್ದೇವೆ. ಆದರೆ ಈಗ ಮೊಬೈಲ್​​ಗೆ ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ.. ಅಬ್ಬಾ.. ! ಇದು ನಿಜಕ್ಕೂ ಭಯಾನಕ ಎಂದಿದ್ದಾರೆ.

ಯುವಕ ಹಾಗೂ ಯುವತಿ ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ಯುವಕನ ಎಡಭುಜದಲ್ಲಿ ಬ್ಯಾಗ್ ಇರುತ್ತದೆ. ಅದರಲ್ಲಿ ಇರುವ ಮೊಬೈಲ್​ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡು, ಬ್ಯಾಗ್ ಹೊತ್ತಿ ಉರಿಯಲು ಪ್ರಾರಂಭಿಸಿದೆ. ಈ ಘಟನೆ ನಡೆದಿದ್ದು ಚೀನಾದಲ್ಲಿ ಎಂದು ಹೇಳಲಾಗಿದ್ದು, ದಕ್ಷಿಣ ಚೀನಾ ಮಾರ್ನಿಂಗ್​ ಪೋಸ್ಟ್ ಮಾಧ್ಯಮ​ ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆ ಯುವಕ ಬ್ಯಾಗ್​​ನ್ನು ಕೆಳಗೆ ಬಿಸಾಕಿದ್ದಾರೆ. ಆದರೂ ಅವರ ಕೈ ಸುಟ್ಟಿದ್ದು, ತಲೆ ಕೂದಲೂ ಸಹ ಸುಟ್ಟಿದೆ.

ಇದು ಸ್ಯಾಮ್ಸಂಗ್ ಫೋನ್​ ಆಗಿದ್ದು, ಯುವಕ 2016ರಲ್ಲಿ ಖರೀದಿ ಮಾಡಿದ್ದ ಎಂದು ತಿಳಿದುಬಂದಿದೆ. ಇನ್ನು ಕಳೆದ ಹಲವಾರು ದಿನಗಳಿಂದಲೂ ಮೊಬೈಲ್​ನ ಬ್ಯಾಟರಿಯಲ್ಲಿ ಸಮಸ್ಯೆ ಆಗುತ್ತಿತ್ತು ಎಂದು ಯುವಕ ಹೇಳಿಕೊಂಡಿದ್ದಾನೆ. ಅದೇನೇ ಇರಲಿ, ವಿಡಿಯೋ ನೋಡಿದ ನೆಟ್ಟಿಗರು, ತಮಗೆ ತುಂಬ ಶಾಕ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಮೊಬೈಲ್ ಎಷ್ಟೇ ಅನಿವಾರ್ಯತೆ ಇದ್ದರೂ, ಅದರ ಬಗ್ಗೆ ತುಂಬ ಎಚ್ಚರಿಕೆಯಿಂದ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೈಟ್ ಕರ್ಫ್ಯೂ ಉಲ್ಲಂಘಿಸುವ ವಾಹನಗಳ ಜಪ್ತಿಗೆ ಆದೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇನ್ನೂ ಏನು ಹೇಳಿದರು?

ಮೈಸೂರು ವೈದ್ಯಕೀಯ ಸಂಶೋಧನಾಲಯದ ಡೀನ್​ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕ್ಲಾಸ್​

ಗಾಳಿ, ಮಳೆಯಿಂದ ಬೀದಿಗೆ ಬಿದ್ದ ಹಾವೇರಿ ಜನರ ಬದುಕು; ಶಾಶ್ವತ ಸೂರಿಗೆ ಸ್ಥಳೀಯರ ಆಗ್ರಹ

Published On - 2:09 pm, Thu, 22 April 21