ಮದುವೆಗಾಗಿ ಪೀಡಿಸಿದ ಪ್ರೇಯಸಿಯ ಕೊಲೆ ಮಾಡಿ ಫ್ಲಾಟ್​ನಲ್ಲೇ ಹೂತಿಟ್ಟ.. 3 ತಿಂಗಳ ನಂತರ ಸಿಕ್ತು ಅಸ್ಥಿಪಂಜರ

ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯನ್ನು 32 ವರ್ಷದ ಮಹಿಳೆ ಪ್ರೀತಿ ಮಾಡುತ್ತಿದ್ದಳು. ಈತ ಮದುವೆಯಾಗುತ್ತಾನೆ ಎನ್ನುವುದನ್ನು ಬಲವಾಗಿ ನಂಬಿದ್ದ ಆಕೆ, ಪದೇ ಪದೇ ಮನೆಯಲ್ಲಿ ಮದುವೆ ಮುಂದೂಡುತ್ತಲೇ ಬಂದಿದ್ದಳು.

  • TV9 Web Team
  • Published On - 18:37 PM, 16 Jan 2021
ಮದುವೆಗಾಗಿ ಪೀಡಿಸಿದ ಪ್ರೇಯಸಿಯ ಕೊಲೆ ಮಾಡಿ ಫ್ಲಾಟ್​ನಲ್ಲೇ ಹೂತಿಟ್ಟ.. 3 ತಿಂಗಳ ನಂತರ ಸಿಕ್ತು ಅಸ್ಥಿಪಂಜರ
ಸಾಂದರ್ಭಿಕ ಚಿತ್ರ

ಪಾಲ್ಘರ್​: ಮದುವೆ ಆಗುವಂತೆ ಪೀಡಿಸುತ್ತಿದ್ದ ಪ್ರೇಯಸಿಯನ್ನು ಕೊಲೆ ಮಾಡಿ, ಶವವನ್ನು ತನ್ನದೇ ಫ್ಲಾಟ್​ನಲ್ಲಿ ಹೂತಿಟ್ಟ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. 3 ತಿಂಗಳ ನಂತರ ಮಹಿಳೆಯ ದೇಹ ಪತ್ತೆ ಆಗಿದೆ.

ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯನ್ನು 32 ವರ್ಷದ ಮಹಿಳೆ ಪ್ರೀತಿ ಮಾಡುತ್ತಿದ್ದಳು. ಈತ ಮದುವೆಯಾಗುತ್ತಾನೆ ಎನ್ನುವುದನ್ನು ಬಲವಾಗಿ ನಂಬಿದ್ದ ಆಕೆ, ಪದೇ ಪದೇ ಮನೆಯಲ್ಲಿ ಮದುವೆ ಮುಂದೂಡುತ್ತಲೇ ಬಂದಿದ್ದಳು. ಆದರೆ, ಕೊನೆಗೆ ಮನೆಯವರ ಒತ್ತಡ ಹೆಚ್ಚಿದ್ದಕ್ಕೆ ಆತನನ್ನು ಮದುವೆಯಾಗುವಂತೆ ಆಕೆ ಪೀಡಿಸಿದ್ದಳು. ಇಬ್ಬರ ನಡುವೆ ಅಕ್ಟೋಬರ್​ ತಿಂಗಳಲ್ಲಿ ಈ ವಿಚಾರಕ್ಕೆ ಜಗಳ ಕೂಡ ಏರ್ಪಟ್ಟಿತ್ತು.

ಇದರಿಂದ ಸಿಟ್ಟಾದ ವ್ಯಕ್ತಿ, ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಅಷ್ಟೇ, ಅಲ್ಲ ಆಕೆಯನ್ನು ಕೊಲೆ ಮಾಡಿ ತನ್ನದೇ ಫ್ಲಾಟ್​ನ ಗೋಡೆ ನಡುವೆ ಶವವನ್ನು ಹೂತಿಟ್ಟಿದ್ದ. ಮನೆಯವರು ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಆತ ಗುಜರಾತ್​ಗೆ ತೆರಳಿದ್ದಾಳೆ ಎಂದೇ ಹೇಳುತ್ತಾ ಬರುತ್ತಿದ್ದ.

ಕೊನೆಗೆ ಮನೆಯವರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಬಂದು ನೋಡಿದಾಗ ಈತನ ಮನೆಯ ಗೋಡೆ ಒಳಗೆ ಮಹಿಳೆಯ ಅಸ್ಥಿ ಪಂಜರ ಪತ್ತೆ ಆಗಿದೆ.

ಪ್ರೀತಿಸಿ ಮದುವೆಯಾಗಿ ಮತಾಂತರ ಆಗುವಂತೆ ಕಿರುಕುಳ.. ಲವ್ ಜಿಹಾದ್ ಹಿನ್ನೆಲೆ ವ್ಯಕ್ತಿ ಅರೆಸ್ಟ್