ಮಗಳನ್ನು ಕಚ್ಚಿದ್ದಕ್ಕೆ ನಾಯಿಯನ್ನು ಧರಧರನೆ ಎಳೆದೊಯ್ದು, ಥಳಿಸಿ, ಬೆಂಕಿ ಹಚ್ಚಿ ಕೊಂದ ವ್ಯಕ್ತಿ

ತನ್ನ ಮಗಳಿಗೆ ಕಚ್ಚಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಆರೋಪಿಯನ್ನು ಪಪ್ಪು ಎಂದು ಗುರುತಿಸಲಾಗಿದ್ದು, ಸೇಡು ತೀರಿಸಿಕೊಳ್ಳಲು ಬೀದಿ ನಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾಯಿ ಕುತ್ತಿಗೆಗೆ ಹಗ್ಗ ಕಟ್ಟಿ ರಸ್ತೆಯ ತುಂಬೆಲ್ಲಾ ಬೈಕ್​ನಲ್ಲಿ ಹೋಗುತ್ತಾ ನಾಯಿಯನ್ನು ಧರ ಧರನೆ ಎಳೆದೊಯ್ದಿದ್ದಾರೆ.

ನಾಯಿ
Follow us
ನಯನಾ ರಾಜೀವ್
|

Updated on: Oct 01, 2024 | 9:26 AM

ತನ್ನ ಮಗಳಿಗೆ ಕಚ್ಚಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಆರೋಪಿಯನ್ನು ಪಪ್ಪು ಎಂದು ಗುರುತಿಸಲಾಗಿದ್ದು, ಸೇಡು ತೀರಿಸಿಕೊಳ್ಳಲು ಬೀದಿ ನಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾಯಿ ಕುತ್ತಿಗೆಗೆ ಹಗ್ಗ ಕಟ್ಟಿ ರಸ್ತೆಯ ತುಂಬೆಲ್ಲಾ ಬೈಕ್​ನಲ್ಲಿ ಹೋಗುತ್ತಾ ನಾಯಿಯನ್ನು ಧರ ಧರನೆ ಎಳೆದೊಯ್ದಿದ್ದಾರೆ.

ಪಪ್ಪು ಮೊದಲು ನಾಯಿಗೆ ಕೋಲಿನಿಂದ ತಳಿಸಿದ್ದಾನೆ, ಬಳಿಕ ಬೆಂಕಿಗೆ ಹಾಕಿ ಸುಟ್ಟಿದ್ದಾನೆ, ಅಷ್ಟಾದರೂ ಅದು ಸಾಯದಿದ್ದಾಗ ನಾಯಿಯನ್ನು ಬೈಕ್​ನ ಹಿಂಬದಿಗೆ ಕಟ್ಟಿ ಎಳೆದೊಯ್ದು ರಸ್ತೆಯಲ್ಲಿ ಎಸೆದಿದ್ದಾನೆ. ಕೊನೆಯದಾಗಿ ಪಪ್ಪು ನಾಯಿಯ ತಲೆಯನ್ನು ದೊಡ್ಡ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಲಕ್ನೋದಲ್ಲಿ ಮತ್ತೊಂದು ಘಟನೆ ರಕ್ತ ಸುರಿಯುವಂತೆ ಬೀದಿ ನಾಯಿಯ ಮೇಲೆ ಹಲ್ಲೆ ಮಾಡಿದ ಪಾಪಿಗಳು ಬೊಗಳಿದ್ದಕ್ಕೆ ಬೀದಿ ನಾಯಿಯನ್ನು (Dog) ಥಳಿಸಿ ಕಾಲು ಮುರಿದಿರುವ  ಘಟನೆ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಮೂವರು ವ್ಯಕ್ತಿಗಳು ಮನೆಯ ಹೊರಗೆ ಬೀದಿ ನಾಯಿಗಳ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಾಯಿ ಥಳಿತದ ವಿಡಿಯೋ ಲಕ್ನೋದ ಸಾದತ್ಗಂಜ್ ಪ್ರದೇಶದಲ್ಲಿ ನಡೆದದ್ದು ಎನ್ನಲಾಗುತ್ತಿದೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಉತ್ತರ ಪ್ರದೇಶದ ಪೊಲೀಸರು ವಿಡಿಯೋ ಆಧರಿಸಿ ಎಫ್ಐಆರ್ ದಾಖಲಿಸಿದ್ದಾರೆ.

ಮನೆಯೊಂದರ ಗೇಟ್ ಮುಂದೆ ಎರಡು ಶ್ವಾನಗಳು ವಿಶ್ರಾಂತಿ ಪಡೆಯುತ್ತಿದ್ದಾಗ ನಾಯಿಗಳ ಮೇಲೆ ಮೂವರು ವ್ಯಕ್ತಿಗಳು ದಾಳಿ ಮಾಡಿದ್ದಾರೆ. ದೊಣ್ಣೆಯಿಂದ ಥಳಿಸುತ್ತಿದ್ದಂತೆ ಅಲ್ಲಿದ್ದ ಎರಡು ನಾಯಿಗಳಲ್ಲಿ ಒಂದು ಥಳಿತದಿಂದ ಪಾರಾಗಿದೆ. ಮೂವರು ವ್ಯಕ್ತಿಗಳು ದಾಳಿ ನಡೆಸುತ್ತಿದ್ದಂತೆ ಒಂದು ಅಲ್ಲಿಂದ ಪರಾರಿಯಾಗಿದೆ. ಆದರೆ ಇನ್ನೊಂದು ಶ್ವಾನ ಈ ದುಷ್ಟರ ಕೈಗೆ ಸಿಕ್ಕಿಬಿದ್ದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ