ಮಧ್ಯಪ್ರದೇಶ, ಮಾರ್ಚ್ 9: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ. ಕೊನೆಗೆ ಆ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಯುವ ಸಂದರ್ಭದಲ್ಲಿ ಮೊಮ್ಮಗನ ಚಿತೆಗೆ ಅಜ್ಜ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಹ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಹೋಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಭಯ್ ರಾಜ್ ಯಾದವ್ ಶುಕ್ರವಾರ ತನ್ನ ಪತ್ನಿ ಸವಿತಾ ಯಾದವ್ ಅವರನ್ನು ಕೊಡಲಿಯಿಂದ ಕೊಂದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.
ಅದೇ ಸಂಜೆ ಅವರ ಅಂತ್ಯಕ್ರಿಯೆಗಳನ್ನು ನಡೆಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂತ್ಯಕ್ರಿಯೆಯ ಸಮಯದಲ್ಲಿ ಅವರ ಅಜ್ಜ ರಾಮಾವತಾರ್ ಯಾದವ್ ಮನೆಯಲ್ಲಿದ್ದರು, ತಡರಾತ್ರಿ ಅವರು ಕಾಣೆಯಾಗಿದ್ದರು. ಶನಿವಾರ ಬೆಳಗ್ಗೆ, ಕುಟುಂಬ ಸದಸ್ಯರು ಅವರನ್ನು ತುಂಬಾ ಹುಡುಕಿದರು. ಸಿಗದಿದ್ದಾಗ, ಅವರು ಅಂತ್ಯಕ್ರಿಯೆಯ ಸ್ಥಳಕ್ಕೆ ಹೋದರು.
ಅಲ್ಲಿ ಅವರ ಅರೆಬೆಂದ ಶವ ಕಂಡಿತ್ತು, ಪೊಲೀಸರು ಬರುವ ಹೊತ್ತಿಗೆ, ದೇಹವು ಸಂಪೂರ್ಣವಾಗಿ ಸುಟ್ಟುಹೋಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಗಾಯತ್ರಿ ತ್ರಿಪಾಠಿ ಹೇಳಿದ್ದಾರೆ. ಸವಿತಾ ಯಾದವ್ ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಮೈಸೂರು ಜಿಲ್ಲೆಯಲ್ಲಿ ಜೋಡಿ ಕೊಲೆ: ಒಳಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯ ಹತ್ಯೆ
ಅಜ್ಜ ಮೊಮ್ಮಗನನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಆತ ಇನ್ನಿಲ್ಲ ಎಂಬುದನ್ನು ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ