ಒಡಿಶಾ: ಪತ್ನಿಯನ್ನು ಕೊಂದು ಎರಡು ದಿನಗಳ ಕಾಲ ಬೆಡ್​ರೂಂನಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿಯ ಬಂಧನ

ಮದ್ಯದ ಅಮಲಿನಲ್ಲಿದ್ದ ಪತ್ನಿ ನಿಂದಿಸಿದ ಕಾರಣಕ್ಕೆ ಕೋಪಗೊಂಡ ವ್ಯಕ್ತಿ ಆಕೆಯನ್ನು ಹತ್ಯೆ ಮಾಡಿ ಎರಡು ದಿನಗಳ ಕಾಲ ಬೆಡ್​ರೂಂನಲ್ಲಿಟ್ಟಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ.

ಒಡಿಶಾ: ಪತ್ನಿಯನ್ನು ಕೊಂದು ಎರಡು ದಿನಗಳ ಕಾಲ ಬೆಡ್​ರೂಂನಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿಯ ಬಂಧನ

Updated on: Mar 15, 2024 | 8:25 AM

ಪತ್ನಿ ಮದ್ಯದ ಅಮಲಿನಲ್ಲಿ ನಿಂದಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಮರದ ಹಲಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಮಂಗಳವಾರ ಮೈತ್ರಿ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಣಿ ನಗರದ ಕೊಳೆಗೇರಿಯಲ್ಲಿ ನಡೆದ ಘಟನೆ ಇದು.

ವ್ಯಕ್ತಿ ಶವವನ್ನು ಕೋಣೆಯಲ್ಲಿ ಬಚ್ಚಿಟ್ಟು, ಎರಡು ದಿನಗಳ ಕಾಲ ಅದರೊಂದಿಗೆ ವಾಸಿಸುತ್ತಿದ್ದ, ಗುರುವಾರ ಮಗ ಶವವನ್ನು ಪತ್ತೆ ಮಾಡಿದ್ದ. ಗಂಜಾಂ ಮೂಲದ ವ್ಯಕ್ತಿ ತನ್ನ ಪತ್ನಿ ಮತ್ತು ಮೂವರು ಪುತ್ರರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಪತ್ನಿ ಮದ್ಯವ್ಯಸನಿಯಾಗಿದ್ದು, ಮಂಗಳವಾರ ಮಧ್ಯಾಹ್ನ ಕುಡಿದು ಬಂದು ಆತನನ್ನು ನಿಂದಿಸಲು ಆರಂಭಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಆಕೆಯನ್ನು ಮರದ ಹಲಗೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಕೋಣೆಯೊಂದರಲ್ಲಿ ಬಚ್ಚಿಟ್ಟು ಬೀಗ ಹಾಕಿದ್ದರು. ಗುರುವಾರ, ಅವರ ಹಿರಿಯ ಮಗ ಮನೆಗೆ ಬಂದಾಗ ಮಾಹಿತಿ ಸಿಕ್ಕಿತ್ತು. ಬಳಿಕ ಪೊಲೀಸರಿಗೆ ಈ ವಿಷಯ ತಿಳಿಸಿದ್ದ. ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಕೋಪದಲ್ಲಿ ಪತ್ನಿ ಕೊಂದು 3 ದಿನಗಳ ಕಾಲ ಶವದ ಜತೆಯಲ್ಲೇ ಇದ್ದ ಪತಿ

ಮತ್ತೊಂದು ಘಟನೆ

ಪತ್ನಿ ಕೊಂದು 3 ದಿನಗಳ ಕಾಲ ಶವದ ಜತೆಯಲ್ಲೇ ಇದ್ದ ಪತಿ
ಕೋಪದಲ್ಲಿ ಪತ್ನಿಯನ್ನು ಕೊಂದು 3 ದಿನಗಳ ಕಾಲ ಶವದ ಜತೆಯೆಲ್ಲೇ ಇದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ. ಫೆಬ್ರವರಿ 27ರಂದು ಘಟನೆ ನಡೆದಿದ್ದು, ಮಾರ್ಚ್​ 1ರಂದು ಬೆಳಕಿಗೆ ಬಂದಿದೆ, ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರು ಮಾಹಿತಿ ನೀಡಿದ್ದರು.

ಬಳಿಕ ಪೊಲೀಸರು ಮನೆಗೆ ಬಂದು ವಿಚಾರಣೆ ನಡೆಸಿದಾಗ ಕೋಣೆಯಲ್ಲಿ ಶವ ಪತ್ತೆಯಾಗಿತ್ತು. ಆರೋಪಿ ಭರತ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭರತ್ ಪತಿ ಜತೆ ಜಗಳವಾಡಿದ್ದ ಕೋಪದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ, ಭರತ್ ಮೂರು ದಿನಗಳ ಕಾಲ ಶವದೊಂದಿಗೆ ಮನೆಯಲ್ಲಿಯೇ ಇದ್ದ.

ಬಳಿಕ ಪತ್ನಿ ಸುನಿತಾಳ ದೇಹವನ್ನು ಹಾಸಿಗೆಯ ಮೇಲೆ ಮಲಗಿಸಿ ಶುಕ್ರವಾರವಷ್ಟೇ ಕೆಲಸಕ್ಕೆಂದು ಕಚೇರಿಗೆ ಹೋಗಿದ್ದ. ಶನಿವಾರ ಅಕ್ಕಪಕ್ಕದ ಮನೆಯವರು ಈ ಮನೆಯಿಂದ ವಾಸನೆ ಬರುತ್ತಿರುವುದನ್ನು ಪತ್ತೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us