ಮದುವೆಯಾಗಲು ನಿರಾಕರಿಸಿದ್ದಕ್ಕೆ ಗೆಳತಿ ಮನೆಗೆ ಬೆಂಕಿ ಇಟ್ಟ ವ್ಯಕ್ತಿ
ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಗೆಳತಿ ಮನೆಗೆ ಬೆಂಕಿ ಇಟ್ಟಿರುವ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಧಮ್‌ನಗರ ಬ್ಲಾಕ್‌ನ ಆನಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಚುಡಕುಟಿ ಪಂಚಾಯತ್ ವ್ಯಾಪ್ತಿಯ ವಿದ್ಯಾಧರಪುರ ಗ್ರಾಮದ ನಿವಾಸಿ ಜ್ಯೋತಿ ರಂಜನ್ ದಾಸ್ (28) ಎಂದು ಗುರುತಿಸಲಾಗಿದ್ದು, ಘಟನೆಯ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಆನಂದಪುರ ಪಂಚಾಯತ್ ವ್ಯಾಪ್ತಿಯ ಗೋಪಾಲ್ ಸಾಹಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದ, ತನ್ನನ್ನು ಮದುವೆಯಾಗುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ಆತ, ಒಪ್ಪದಿದ್ದರೆ ಫೋಟೊಗಳನ್ನು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ಆರೋಪಿಸಿದ್ದಾರೆ.
ಅವರು ಧಮ್‌ನಗರ ಪೊಲೀಸರಿಗೆ ದೂರು ನೀಡಿದ್ದು, ಆತ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅನೇಕ ಬಾರಿ ಭೇಟಿಯಾಗುವಂತೆ ಒತ್ತಾಯಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ. ಬೆಂಕಿಯು ಐದು ಶೆಡ್‌ಗಳನ್ನು ನಾಶಪಡಿಸಿತು ಮತ್ತು ಚಿನ್ನಾಭರಣಗಳು, ಪೀಠೋಪಕರಣಗಳು, ಅಕ್ಕಿ ಮತ್ತು ಪ್ರಮುಖ ದಾಖಲೆಗಳು ಸೇರಿದಂತೆ ಎಲ್ಲಾ ಬೆಲೆಬಾಳುವ ವಸ್ತುಗಳು ಬೂದಿಯಾಗಿವೆ ಎಂದು ಅವರು ಹೇಳಿದ್ದಾರೆ. ಬೆಂಕಿಯಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಓದಿ: 20 ದಿನದ ಸ್ವಂತ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಮಾವನ್ನೇ ಕೊಂದ ಅಳಿಯಂದಿರು
ದೂರಿನ ಮೇರೆಗೆ ಧಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದಾಗ್ಯೂ, ಆರೋಪಿಯು ಪ್ರದೇಶದಿಂದ ಪರಾರಿಯಾಗಿದ್ದಾನೆ, ಯುವತಿ ಮತ್ತು ಆಕೆಯ ಕುಟುಂಬವು ಅವನನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿತು. ಆರೋಪಿಯಿಂದ ನಮ್ಮ ಸುರಕ್ಷತೆಗೆ ಅಪಾಯವಾಗಿದೆ, ಶೀಘ್ರದಲ್ಲೇ ಬಂಧಿಸದಿದ್ದರೆ, ಅವನು ಮತ್ತಷ್ಟು ಹೇಯ ಕೃತ್ಯಗಳನ್ನು ಎಸಗಬಹುದು ಎಂದು ಯುವತಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ