AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ದಿನದ ಸ್ವಂತ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಮಾವನ್ನೇ ಕೊಂದ ಅಳಿಯಂದಿರು

ಹೆಂಡ್ತಿ ಮೇಲಿನ ಕೋಪಕ್ಕೆ ಕುಡಿದ ನಶೆಯಲ್ಲಿ ತನ್ನ 20 ದಿನದ ಮಗುವನ್ನ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಸುತ್ತಿದ್ದ. ಇದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು. ಎಷ್ಟು ಬುದ್ಧಿ ಹೇಳಿದರೂ ಸಹ ಕುಡಿದು ಬಂದು ಗಲಾಟೆ ಮಾಡುತ್ತಲೇ ಇದ್ದ. ಅಲ್ಲದೇ ಮಗುವನ್ನು ಕೊಲ್ಲುವುದಾಗಿ ಹೇಳಿದ್ದ. ಇದರಿಂದ ಅಳಿಯಂದಿರೇ ಮಾವನನ್ನು ಹೊಡೆದು ಕೊಂದಿದ್ದಾರೆ. ಎಲ್ಲಿ..? ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

20 ದಿನದ ಸ್ವಂತ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಮಾವನ್ನೇ ಕೊಂದ ಅಳಿಯಂದಿರು
ಕೊಲೆ ಆರೋಪಿಗಳು
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ರಮೇಶ್ ಬಿ. ಜವಳಗೇರಾ|

Updated on:Dec 17, 2024 | 9:09 PM

Share

ಬೆಂಗಳೂರು, (ಡಿಸೆಂಬರ್ 17): ಕೆಲವರಿಗೆ ಕುಡಿದ ನಶೆಯಲ್ಲಿ ಏನು ಮಾಡುತ್ತಿದ್ದೀವೆ ಎನ್ನುವುದೇ ನೆನಪಿರಲ್ಲ. ಕುಡಿದು ನಶೆಯೇರಿಸಿಕೊಂಡ ವ್ಯಕ್ತಿಯೊಬ್ಬ ಹೆಂಡ್ತಿ ಜೊತೆ ಕಿರಿಕ್ ಮಾಡಿಕೊಂಡಿದ್ದು, ತನ್ನ 20 ದಿನದ ಮಗುವನ್ನ ಕೊಲ್ಲುವುದಾಗಿ ಚಾಕು ತೋರಿಸಿ ಬೆದರಿಸಿದ್ದಾನೆ. ಇದರಿಂದ ಏನಾದರೂ ಮಾಡಿದರೆ ಹೇಗೆಂದು ಪತಿಯನ್ನ ಪತ್ನಿಯ ಸಹೋದರರೇ ಹತ್ಯೆ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ. ಸಲ್ಮಾನ್ ಖಾನ್ (29) ಕೊಲೆಯಾದ ಪತಿ. ಅಂದಂಗೆ ಪತ್ನಿಯ ಸಹೋದರರಾದ ಉಮರ್ , ಶೊಯೇಬ್ ಹಾಗೂ ಅನ್ವರ್ ಕೊಲೆ ಆರೋಪಿಗಳಾಗಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರದಲ್ಲಿ ವಾಸವಾಗಿದ್ದ ಸಲ್ಮಾನ್ ಖಾನ್, ಬೀರು ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಆಯೆಷಾ ಗೃಹಿಣಿಯಾಗಿದ್ದು, ದಂಪತಿಗೆ 20 ದಿನದ ಮಗುವಿದೆ. ಕುಡಿತಕ್ಕೆ ದಾಸನಾಗಿದ್ದ ಸಲ್ಮಾನ್ ಕೆಲವು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಮದ್ಯಪಾನ ಮಾಡಿ ಮನೆಗೆ ಬಂದು ಹೆಂಡತಿಯೊಂದಿಗೆ ಸದಾ ಜಗಳ ಮಾಡುತ್ತಿದ್ದ. ಹಲವು ಬಾರಿ ಬುದ್ಧಿ ಹೇಳಿದರೂ ಮಾತು ಕೇಳದೆ ಹಳೆ ಚಾಳಿ ಮುಂದುವರೆಸಿದ್ದನಂತೆ.

ಇದನ್ನೂ ಓದಿ: ಸೊಸೆಯನ್ನ ಮಂಚಕ್ಕೆ ಕರೆದ ಮಾವ : ಬರಲೊಪ್ಪದಕ್ಕೆ ಆಕೆಯ ಜೀವವನ್ನೇ ತೆಗೆದ!

ನಿನ್ನೆ(ಡಿಸೆಂಬರ್ 16) ರಾತ್ರಿಯು ಸಹ ಕುಡಿದ ನಶೆಯಲ್ಲಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದ. ಈತನ ಕಾಟ ತಾಳಲಾರದೆ 112 ಕರೆ ಮಾಡಿ ಪೋಲೀಸರನ್ನ ಕರೆಯಿಸಿಕೊಳ್ಳುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ. ಇಂದು(ಡಿಸೆಂಬರ್ 17) ಬೆಳಗಿನ ಜಾವ ಮನೆಗೆ ಬಂದು ಪೊಲೀಸರನ್ನ ಕರೆಯಿಸುತ್ತೀರಾ ಎಂದು ಕ್ಯಾತೆ ತೆಗೆದು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ್ದ‌‌. ಇದರಿಂದ ಆತಂಕಗೊಂಡ ಪತ್ನಿ ತನ್ನ ಸಹೋದರರನ್ನ ಸ್ಥಳಕ್ಕೆ ಕರೆಯಿಸಿಕೊಂಡಿದ್ದಳು.

ಈ ವೇಳೆ ತನ್ನ 20 ದಿನದ ಮಗುವಿಗೆ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಸಿದ್ದ. ಈ ವೇಳೆ ಪತ್ನಿಯ ಸಹೋದರರು ತುಂಡಿನಿಂದ ಹೊಡೆದು ಮಗುವನ್ನ ಕಸಿದುಕೊಂಡಿದ್ದಾರೆ.. ಬಳಿಕ ಸಲ್ಮಾನ್ ಕೈಯಲ್ಲಿದ್ದ ಚಾಕು ಕಿತ್ತುಕೊಂಡು ಆತನಿಗೆ ತಿವಿದಿದ್ದಾರೆ. ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಲ್ಮಾನ್ ಮೃತಪಟ್ಟಿದ್ದಾನೆ.‌

ಮೃತನ ವಿರುದ್ಧ ಇದುವರೆಗೂ ಆರು ಪ್ರಕರಣ ದಾಖಲಾಗಿದ್ದವು. ಈ ಬಗ್ಗೆ ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ಪ್ಕರಣ ದಾಖಲಾಗಿದ್ದು, ಕೊಲೆ ಆರೋಪದಡಿ ಸಲ್ಮಾನ್ ಹೆಂಡ್ತಿಯ ಮೂವರು ಸಹೋದರರನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:07 pm, Tue, 17 December 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ