ಲಕ್ನೋ: ಸಾಕು ನಾಯಿಗಳಿಗೆ ಚಪಾತಿ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ತನ್ನ ಸ್ವಂತ ತಂಗಿಯನ್ನೇ ಗುಂಡು ಹಾರಿಸಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. 25 ವರ್ಷದ ಆಶೀಶ್ ಎಂಬಾತ ತನ್ನ ತಂಗಿ ಪಾರುಲ್ (23) ಮೇಲೆ ಎರಡು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.
ಶ್ವಾನ ಪ್ರಿಯನಾಗಿರುವ ಆಶೀಶ್ 2 ಡಜನ್ಗೂ ಅಧಿಕ ನಾಯಿಗಳನ್ನು ಸಾಕಿದ್ದ. ಈ ನಡುವೆ, ಅವುಗಳಿಗೆ ಚಪಾತಿ ಮಾಡಿಕೊಡಲು ತನ್ನ ಸಹೋದರಿಯನ್ನು ಕೇಳಿಕೊಂಡಿದ್ದಾನೆ. ಆದರೆ, ಆತನ ತಂಗಿ ಇದಕ್ಕೆ ಒಪ್ಪದಿದ್ದಾಗ ಸಿಟ್ಟಾದ ಆಶೀಶ್ ಪಾರುಲ್ ತಲೆ ಮತ್ತು ಎದೆ ಭಾಗಕ್ಕೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾನೆ.
ಈ ಬಗ್ಗೆ, ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಅಧೀಕ್ಷಕ ದೆಹತ್ ಕೇಶವ್ ಕುಮಾರ್, 18-20 ನಾಯಿಗಳನ್ನು ನೋಡಿಕೊಳ್ಳಲು ಪಾರುಲ್ ನಿರಾಕರಿಸಿದ್ದಕ್ಕೆ, ಆಶೀಶ್ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ದಿನನಿತ್ಯವೂ ಅವರು ಜಗಳ ಮಾಡಿಕೊಳ್ಳುತ್ತಿದ್ದರು ಎಂದೂ ತಿಳಿಸಿದ್ದಾರೆ. ಪ್ರತಿನಿತ್ಯ 20 ಚಪಾತಿಗಳನ್ನು ಮಾಡುವಂತೆ ಆಶೀಶ್ ಪಾರುಲ್ಗೆ ಪೀಡಿಸುತ್ತಿದ್ದ. ಇದರಿಂದ ಆಕೆ ಬೇಸತ್ತಿದ್ದಳು ಎಂದು ಕೇಶವ್ ಕುಮಾರ್ ಮಾಹಿತಿ ನೀಡಿದರು.
Published On - 2:15 pm, Tue, 15 December 20