ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮೀರತ್‌ನಿಂದ ಮಹಾಕುಂಭಕ್ಕೆ ಹೋಗುವ ಸಂಗಮ್ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ನಾಚಿಕೆಗೇಡಿನ ಘಟನೆ ನಡೆದಿದೆ. ಇದು ಆ ಕೋಚ್‌ನಲ್ಲಿದ್ದ ಪ್ರಯಾಣಿಕರನ್ನು ಆಘಾತ ಮತ್ತು ಕೋಪಕ್ಕೆ ಒಳಪಡಿಸಿದೆ. ರೈಲ್ವೆ ಅಧಿಕಾರಿಗಳು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಂಗಮ್ ಎಕ್ಸ್‌ಪ್ರೆಸ್ ರೈಲು ಮೀರತ್‌ನಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಆರೋಪಿ ತನ್ನ ಸೀಟಿನಿಂದ ಎದ್ದು, ತನ್ನ ಪ್ಯಾಂಟ್‌ನ ಜಿಪ್ ಬಿಚ್ಚಿ, ಮಹಿಳಾ ಮತ್ತು ವೃದ್ಧ ಪ್ರಯಾಣಿಕರ ಮುಂದೆಯೇ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಆ ವ್ಯಕ್ತಿ 3ನೇ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಡೀ ಘಟನೆಯನ್ನು ಪ್ರಯಾಣಿಕರು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
JUST IN | This is train number 14164, Sangam Express.
An elderly man openly urinating between the berths. When objected to, he arrogantly replied, “I am Baliyan, part of Rakesh Tikait’s Kisan Union. Today, this train belongs to us.”
Take note @RailMinIndia @AshwiniVaishnaw pic.twitter.com/6z2kKzWHxZ
— Ashwini Shrivastava (@AshwiniSahaya) January 15, 2025
ಇದನ್ನೂ ಓದಿ: Viral: ಸೀಟಿಗಾಗಿ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ನಡುವೆ ನಡೆಯಿತು ಜಡೆ ಜಗಳ; ವಿಡಿಯೋ ವೈರಲ್
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರತಿ ರೈಲು ಬೋಗಿಯಲ್ಲಿ ಪ್ರತಿ ಬದಿಯಲ್ಲಿ ಎರಡು ಶೌಚಾಲಯಗಳಿರುತ್ತವೆ. ರೈಲಿನಲ್ಲಿ ಎರಡು ಶೌಚಾಲಯಗಳಿದ್ದರೂ ಆ ವ್ಯಕ್ತಿ ರೈಲಿನ ಕೋಚ್ನೊಳಗೇ ಮೂತ್ರ ವಿಸರ್ಜನೆ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ