ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್ ದರೋಡೆಕೋರರು ಎಸ್ಕೇಪ್
ಬೀದರ್ನಲ್ಲಿ ಇಬ್ಬರ ಮೇಲೆ ಫೈರಿಂಗ್ ಮಾರಿ ಎಟಿಎಂ ಹಣ ಕದ್ದೊಯ್ದ ದುಷ್ಕರ್ಮಿಗಳು ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ದರೋಡೆಕೋರರು ಹೈದರಾಬಾದ್ನತ್ತ ಎಸ್ಕೇಪ್ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆನ್ನಟ್ಟಿ ಹೋಗಿದ್ದ ಬೀದರ್ ಪೊಲೀಸರಿಗೆ ದರೋಡೆಕೋರರು ಪತ್ತೆಯಾಗಿದ್ದಾರೆ. ಆದರೆ ಹಿಡಿಯಲು ಹೋದಾಗ ಬೀದರ್ ಪೊಲೀಸರ ಮೇಲೆಯೇ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದಾರೆ.
ಬೀದರ್, ಜನವರಿ 16: ನಗರದ ಶಿವಾಜಿ ಚೌಕ್‌ನಲ್ಲಿರು ಬ್ಯಾಂಕ್‌ನಲ್ಲಿ ಹಣ ತುಂಬಿಸಿಕೊಂಡು ತೆರಳುತ್ತಿದ್ದ ಸಿಎಂಎಸ್ ಕಂಪನಿ ಸಿಬ್ಬಂದಿಗಳ ಮೇಲೆ ದರೋಡೆಕೋರರು ಗುಂಡಿನ ದಾಳಿ (Shootout) ಮಾಡಿ, ಹಣ ಎಗರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಈ ಮಧ್ಯೆ ಹೈದ್ರಾಬಾದ್ನಲ್ಲಿ ಬೀದರ್ ಪೊಲೀಸರ ಮೇಲೆ ಮತ್ತೊಮ್ಮೆ ಫೈರಿಂಗ್ ಮಾಡಿ ಎಟಿಎಂ ಹಣ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಹೌದು. ದರೋಡೆಕೋರರು ಹೈದರಾಬಾದ್ನತ್ತ ಪರಾರಿಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬೀದರ್ ಪೊಲೀಸರು ಬೆನ್ನಟ್ಟಿದ್ದಾರೆ. ಹೈದರಾಬಾದ್ನ ಅಫ್ಜಲ್ಗಂಜ್ ಪ್ರದೇಶದಲ್ಲಿ ದುಷ್ಕರ್ಮಿಗಳು ಪತ್ತೆ ಆಗಿದ್ದು, ಪೊಲೀಸರನ್ನು ಕಾಣುತ್ತಿದ್ದಂತೆ ಫೈರಿಂಗ್ ಮಾಡಿದ್ದಾರೆ. ಆದರೆ ಮಿಸ್ ಆಗಿ ಖಾಸಗಿ ಬಸ್ ಕ್ಲೀನರ್ಗೆ ಗುಂಡು ತಗುಲಿದೆ. ಈ ಮಧ್ಯೆ ಪೊಲೀಸರಿಂದ ದರೋಡೆಕೋರರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಸದ್ಯ ದರೋಡೆಕೋರರಿಗಾಗಿ ಬೀದರ್ ಮತ್ತು ಹೈದರಾಬಾದ್ ಪೊಲೀಸರು ಶೋಧ ನಡೆಸಿದ್ದಾರೆ.
ಇದನ್ನೂ ಓದಿ: ಬೀದರ್: ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು
ಹೈದರಾಬಾದ್‌ನಿಂದ ಛತ್ತೀಸ್‌ಗಢದ ರಾಯಪುರ್‌ಗೆ ತೆರಳಲು ದರೋಡೆಕೋರರು ಪ್ಲ್ಯಾನ್ ಮಾಡಿದ್ದರು. ಅದಕ್ಕಾಗಿ ಅಮಿತ್ ಕುಮಾರ್ ಹೆಸರಿನಲ್ಲಿ ರೋಷನ್ ಟ್ರಾವೆಲ್ಸ್ನಿಂದ ಬಸ್ ಬುಕ್ ಮಾಡಿದ್ದರು. ಬೀದರ್ ಪೊಲೀಸರು ಸಹ ಅದೇ ಬಸ್ ಟಿಕೆಟ್ ಬುಕ್ ಮಾಡಿದ್ದರು. ದರೋಡೆಕೋರರು ನಾವು ಬೀದರ್ನಲ್ಲಿ ದರೋಡೆ ಮಾಡಿದ್ದ 83 ಲಕ್ಷ ರೂ. ಹಣದ ಸಮೇತ ಬಸ್‌ನಲ್ಲಿ ಕುಳಿತಿದ್ದರು.
ಈ ವೇಳೆ ಖಾಸಗಿ ಟ್ರಾವೆಲ್ಸ್‌ನ ಮ್ಯಾನೇಜರ್ ಬ್ಯಾಗ್ ಚೆಕ್ ಮಾಡಿದ್ದಾರೆ. ಅನುಮಾನ ಬಂದು ದರೋಡೆಕೋರರಿಂದ ಖಾಸಗಿ ಬಸ್‌ನಲ್ಲಿ ಟ್ರಾವೆಲ್ಸ್ ಮ್ಯಾನೇಜರ್ ಜಹಾನ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಬಳಿಕ ಹಣದ ಸಮೇತ ದರೋಡೆಕೋರರು ಪರಾರಿಯಾಗಿದ್ದಾರೆ.
ಗುಂಡೇಟಿಗೆ ಬಲಿಯಾದ ಗಿರಿ ವೆಂಕಟೇಶ್ ಮರಣೋತ್ತರ ಪರೀಕ್ಷೆ ಅಂತ್ಯ: ಆಸ್ಪತ್ರೆ ಎದುರು ಪ್ರತಿಭಟನೆ
ಘಟನೆಯಲ್ಲಿ ಗುಂಡೇಟಿಗೆ ಗಿರಿ ವೆಂಕಟೇಶ್ ಮೃತಪಟ್ಟಿದ್ದಾರೆ. ಸದ್ಯ ಬೀದರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಪರಿಹಾರ ನೀಡುವಂತೆ ಮೃತ ಗಿರಿ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆಸ್ಪತ್ರೆ ಎದುರು ಪ್ರತಿಭಟನೆ ಮಾಡಲಾಗಿದೆ.
ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಪ್ರಿಯಾಂಕ್ ಖರ್ಗೆ ಆಪ್ತ 5 ದಿನ ಸಿಐಡಿ ಕಸ್ಟಡಿಗೆ
ಈ ವೇಳೆ ಪ್ರತಿಭಟನಾಕಾರರ ಜೊತೆ ದೂರವಾಣಿ ಮೂಲಕ ಸಂಸದ ಸಾಗರ್ ಖಂಡ್ರೆ ಮಾತುಕತೆ ನಡೆಸಿದ್ದರು. ಬಳಿಕ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಮಳಖೇಡ ಗ್ರಾಮಕ್ಕೆ ಗಿರಿ ವೆಂಕಟೇಶ್ ಶವವನ್ನು ಸಂಬಂಧಿಕರು ಕೊಂಡೊಯ್ದಿದ್ದಾರೆ. ಇಂದು ರಾತ್ರಿ 10 ಗಂಟೆ ಸುಮಾರಿಗೆ ಗಿರಿ ವೆಂಕಟೇಶ್ ಶವಸಂಸ್ಕಾರ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:15 pm, Thu, 16 January 25