ಕಾರಲ್ಲಿ ಗಿಫ್ಟ್​ ಇದೆ.. ತಗೋಂಡು ಬಾ ಎಂದವನ ನಂಬಿದ ಯುವತಿ; ನಾಲ್ಕು ದಿನಗಳ ನಂತರವೇ ಆಕೆಗೆ ಗೊತ್ತಾಯ್ತು ತಾನು ಮೋಸ ಹೋಗಿದ್ದು !

ಈ ವ್ಯಕ್ತಿಯ ಹಿನ್ನೆಲೆಯ ಜಾಡು ಹಿಡಿದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಉದ್ಯೋಗಕ್ಕೆ ಸಂಬಂಧಪಟ್ಟ ವೆಬ್​ಸೈಟ್​​ವೊಂದರಲ್ಲಿ ಈತನ ಪ್ರೊಫೈಲ್​ ಪರಿಶೀಲನೆ ಮಾಡಿದಾಗ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಎಂಡೋಕ್ರಿನಾಲಿಜಿಸ್ಟ್​ ಈತ ಎಂಬುದು ಗೊತ್ತಾಗಿದೆ.

ಕಾರಲ್ಲಿ ಗಿಫ್ಟ್​ ಇದೆ.. ತಗೋಂಡು ಬಾ ಎಂದವನ ನಂಬಿದ ಯುವತಿ; ನಾಲ್ಕು ದಿನಗಳ ನಂತರವೇ ಆಕೆಗೆ ಗೊತ್ತಾಯ್ತು ತಾನು ಮೋಸ ಹೋಗಿದ್ದು !
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 18, 2021 | 7:01 PM

ಮುಂಬೈ: ಪ್ರಿಯತಮೆಯ ಸುಮಾರು 6 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಪನ್ವೆಲ್​ ನಿವಾಸಿಯಾದ ಸೌರಭ್​ ಠಾಕೂರ್ (35)​ ಬಂಧಿತ. ಈತ 32ವರ್ಷದ ಯುವತಿಯೊಂದಿಗೆ ಕಳೆದ ಕೆಲವು ತಿಂಗಳುಗಳಿಂದಲೂ ಸಂಪರ್ಕದಲ್ಲಿದ್ದ. ಈಕೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಯುವತಿ ಕೊಟ್ಟ ದೂರಿನ ಅನ್ವಯ ಆತನನ್ನು ಅರೆಸ್ಟ್ ಮಾಡಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೌರಬ್ ಠಾಕೂರ್ ಹಾಗೂ ಯುವತಿ ಡೇಟಿಂಗ್​ ಆ್ಯಪ್​ ಮೂಲಕ ಪರಿಚಿತರಾಗಿದ್ದರು. ನಂತರ ಇವರಿಬ್ಬರ ಮಧ್ಯೆ ಮೆಸೇಜ್​ ವಿನಿಮಯ ಆಗಿತ್ತು. ಸೌರಭ್​ ತನ್ನನ್ನು ವೈದ್ಯ ಎಂದೂ ಹೇಳಿಕೊಂಡಿದ್ದ. ಅದಾದ ಬಳಿಕ ಪರಸ್ಪರ ಹತ್ತಿರವಾಗಿದ್ದರು. ಹೀಗೆ ಒಂದು ದಿನ ಸೌರಭ್ ಯುವತಿಯ ಬಳಿ, ನಿನ್ನ ಪಾಲಕರನ್ನು ಭೇಟಿಯಾಗಬೇಕು ಎಂದು ಕೇಳಿದ್ದ. ಹಾಗಾಗಿ ಘಾಟ್​​ಕೋಪರ್​​ನಲ್ಲಿರುವ ತಮ್ಮ ಮನೆಗೆ ಆತನನ್ನು ಯುವತಿ ಕರೆದಿದ್ದಳು. ಯುವತಿಯ ಮನೆಯೊಳಕ್ಕೆ ಹೋದ ಸೌರಭ್​, ನಾನೊಂದು ಉಡುಗೋರೆ ತಂದಿದ್ದೇನೆ. ಕಾರಲ್ಲೇ ಬಿಟ್ಟು ಬಂದಿದ್ದೇನೆ. ಅದನ್ನು ನೀನೇ ತೆಗೆದುಕೊಂಡು ಬಾ ಎಂದು ಹೇಳಿದ. ಆದರೆ ಸೌರಭ್​ ಮನೆಗೆ ಬಂದು ಹೋಗಿ ನಾಲ್ಕು ದಿನಗಳ ನಂತರ ತಮ್ಮ ಮನೆಯಲ್ಲಿ ಕಳವಾಗಿರುವುದು ಯುವತಿಗೆ ಗೊತ್ತಾಗಿತ್ತು. ಸೌರಭ್​ ಅಲ್ಲದೆ ತಮ್ಮ ಮನೆಗೆ ಇನ್ಯಾರೂ ಬಂದಿರಲಿಲ್ಲ ಎಂದು ಖಚಿತವಾಗಿ ಗೊತ್ತಿದ್ದ ಕಾರಣ ಕೂಡಲೇ ದೂರು ನೀಡಿದಳು ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಕದಮ್​ ತಿಳಿಸಿದ್ದಾರೆ.

ತನಿಖೆ ಶುರು ಮಾಡಿದ ಪೊಲೀಸರಿಗೆ ಸೌರಭ್​ನ ಇನ್ನೊಂದು ರೂಪ ಕಾಣಿಸಿತ್ತು. ಯುವತಿಯ ಬಳಿ ತಾನು ವೈದ್ಯ ಎಂದು ಹೇಳಿಕೊಂಡಿದ್ದಾತ ಪೊಲೀಸ್ ಇಲಾಖೆಯ ಲೋಗೋ ಇರುವ ಕಾರನ್ನೂ ಇಟ್ಟುಕೊಂಡಿದ್ದರು. ಅಲ್ಲದೆ, ಗೃಹಸಚಿವರ ಕಚೇರಿಯ ಗುರುತಿನ ಚೀಟಿಯನ್ನೂ ಹೊಂದಿದ್ದ. ಆತ ಪೊಲೀಸ್​ ಅಲ್ಲ ಎಂಬುದು ಸ್ಪಷ್ಟ. ಆದರೆ ಆ ಗುರುತಿನ ಚೀಟಿ ಹೇಗೆ ಬಂತು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಈ ವ್ಯಕ್ತಿಯ ಹಿನ್ನೆಲೆಯ ಜಾಡು ಹಿಡಿದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಉದ್ಯೋಗಕ್ಕೆ ಸಂಬಂಧಪಟ್ಟ ವೆಬ್​ಸೈಟ್​​ವೊಂದರಲ್ಲಿ ಈತನ ಪ್ರೊಫೈಲ್​ ಪರಿಶೀಲನೆ ಮಾಡಿದಾಗ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಎಂಡೋಕ್ರಿನಾಲಿಜಿಸ್ಟ್​ ಈತ ಎಂಬುದು ಗೊತ್ತಾಗಿದೆ. ಇಷ್ಟಕ್ಕೇ ಬಿಡುವುದಿಲ್ಲ. ಸೌರಭನ ಹಿನ್ನೆಲೆ, ಶಿಕ್ಷಣ ಇತರ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: West Bengal Elections 2021: ಪಶ್ಚಿಮ ಬಂಗಾಳದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ?

Published On - 6:58 pm, Thu, 18 March 21

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ
ಮೈಸೂರಿನ ಅರಮನೆ ಬಳಿ ಹೊಸ ವರ್ಷಾಚರಣೆ ರದ್ದು..!
ಮೈಸೂರಿನ ಅರಮನೆ ಬಳಿ ಹೊಸ ವರ್ಷಾಚರಣೆ ರದ್ದು..!
ಹುಬ್ಬಳ್ಳಿಯಲ್ಲಿದ್ದಾರೆ ಡಾ. ಮನಮೋಹನ್ ಸಿಂಗ್ ಹತ್ತಿರದ ಸಂಬಂಧಿಗಳು
ಹುಬ್ಬಳ್ಳಿಯಲ್ಲಿದ್ದಾರೆ ಡಾ. ಮನಮೋಹನ್ ಸಿಂಗ್ ಹತ್ತಿರದ ಸಂಬಂಧಿಗಳು