ಮಣಿಪುರ ಮುಖ್ಯಮಂತ್ರಿ ಬೆಂಗಾವಲು ವಾಹನದ ಮೇಲೆ ದಾಳಿ, ಓರ್ವ ಭದ್ರತಾ ಸಿಬ್ಬಂದಿಗೆ ಗಾಯ
ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ಡನೆಸಿದ ಪರಿಣಾಮ ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಮಣಿಪುರ ಮುಖ್ಯಮಂತ್ರಿ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಬೆಂಗಾವಲು ವಾಹನದ ಮೇಲೆ ಸೋಮವಾರ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಉಗ್ರರು ಹೊಂಚುದಾಳಿ ನಡೆಸಿದ್ದು, ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ, ಬೆಂಗಾವಲು ಪಡೆ ಇಂಫಾಲ್‌ನಿಂದ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-37 ರ ರಲ್ಲಿ ಬೆಳಗ್ಗೆ 10.30 ರ ಸುಮಾರಿಗೆ ದಾಳಿ ನಡೆಸಿತು.
ಜೂನ್ 6 ರಂದು ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯ ಶಿರಚ್ಛೇದ ಮಾಡಿದ ನಂತರ ಕಳೆದ ಕೆಲವು ದಿನಗಳಿಂದ ಅಶಾಂತಿಯಿಂದ ನಲುಗಿರುವ ಜಿರಿಬಾಮ್‌ಗೆ ಭೇಟಿ ನೀಡಲು ಮುಖ್ಯಮಂತ್ರಿ ಯೋಜಿಸಿದ್ದರು.
ಬಿರೇನ್ ಸಿಂಗ್ ಮಂಗಳವಾರ ಈ ಪ್ರದೇಶಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಜಿರಿಬಾಮ್‌ನಲ್ಲಿನ ವ್ಯಕ್ತಿಯ ಹತ್ಯೆಯ ಬಳಿಕ ಸುಮಾರು 70 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು, ಕೆಲವು ಸರ್ಕಾರಿ ಕಚೇರಿಗಳು ಮತ್ತು ನೂರಾರು ನಾಗರಿಕರು ಈ ಪ್ರದೇಶದಿಂದ ಬೇರೆಡೆಗೆ ಪಲಾಯನ ಮಾಡಬೇಕಾಯಿತು.
ಮತ್ತಷ್ಟು ಓದಿ: ಮಣಿಪುರ: ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಹತ್ಯೆ, ಶವದ ಚಿತ್ರಗಳು ವೈರಲ್
ಮಣಿಪುರ: ವ್ಯಕ್ತಿಯ ಶಿರಚ್ಛೇದ, ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಗುಂಪು ಮಣಿಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಹೆಚ್ಚಿದೆ, ವ್ಯಕ್ತಿಯೊಬ್ಬರ ಶಿರಚ್ಛೇದ ಮಾಡಿರುವ ಘಟನೆ ವರದಿಯಾಗಿದೆ. ಬಲಿಯಾದವರನ್ನು ಸೋಬಾಮ್ ಶರತ್‌ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಶರತ್‌ಕುಮಾರ್ ಅವರು ಲೀಶಾಬಿಥೋಲ್‌ನಲ್ಲಿರುವ ತಮ್ಮ ಮಗನ ಜಮೀನಿನಿಂದ ಹಿಂತಿರುಗುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಶರತ್‌ಕುಮಾರ್ ಮನೆಗೆ ಹೋಗುತ್ತಿದ್ದಾಗ ಖಾಸಿಯಾ ಪುಂಜಿ ಬಳಿ ಅಪರಿಚಿತ ದುಷ್ಕರ್ಮಿಗಳು ಅವರನ್ನು ಕಟ್ಟಿಹಾಕಿದ್ದಾರೆ. ಅವರ ಕುಟುಂಬ ಸದಸ್ಯರು ಜಿರಿಬಾಮ್ ಜಿಲ್ಲಾ ಪೊಲೀಸರಿಗೆ ತಕ್ಷಣ ಘಟನೆ ಕುರಿತು ಮಾಹಿತಿ ನೀಡಿದ್ದಾರೆ, ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು.
ಜಿರಿಬಾಮ್ ಪೊಲೀಸ್ ಠಾಣೆಯಿಂದ ಉತ್ತರಕ್ಕೆ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಮುಲರ್ಗೋನ್ ಬಳಿ ಶರತ್‌ಕುಮಾರ್ ದೇಹವು ಪತ್ತೆಯಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ