ಮಣಿಪುರ ಗಲಭೆ: ಕೇಂದ್ರ ಸಚಿವ ಆರ್​ಕೆ ರಂಜನ್ ಸಿಂಗ್​ ನಿವಾಸಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

|

Updated on: Jun 16, 2023 | 7:49 AM

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ, ಇತ್ತೀಚಿನ ಹಿಂಸಾಚಾರದ ಘಟನೆಯಲ್ಲಿ ಮಣಿಪುರ(Manipur)ದಲ್ಲಿ ಕೇಂದ್ರ ಸಚಿವರೊಬ್ಬರ ಮನೆ ಮೇಲೆ ಗುಂಪೊಂದು ನಿನ್ನೆ ರಾತ್ರಿ ದಾಳಿ ಮಾಡಿದೆ

ಮಣಿಪುರ ಗಲಭೆ: ಕೇಂದ್ರ ಸಚಿವ ಆರ್​ಕೆ ರಂಜನ್ ಸಿಂಗ್​ ನಿವಾಸಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮಣಿಪುರ ಹಿಂಸಾಚಾರ
Image Credit source: NDTV
Follow us on

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ, ಇತ್ತೀಚಿನ ಹಿಂಸಾಚಾರದ ಘಟನೆಯಲ್ಲಿ ಮಣಿಪುರ(Manipur)ದಲ್ಲಿ ಕೇಂದ್ರ ಸಚಿವರೊಬ್ಬರ ಮನೆ ಮೇಲೆ ಗುಂಪೊಂದು ನಿನ್ನೆ ರಾತ್ರಿ ದಾಳಿ ಮಾಡಿದೆ. ಘಟನೆಯ ವೇಳೆ ಕೇಂದ್ರ ಸಚಿವ ಆರ್​ಕೆ ರಂಜನ್​ ಸಿಂಗ್​ ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ನಿನ್ನೆಯಷ್ಟೇಮಣಿಪುರದ ಏಕೈಕ ಮಹಿಳಾ ಸಚಿವೆ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆ ವೇಳೆ ಮನೆಯೊಳಗೆ ಯಾರೂ ಇರಲಿಲ್ಲವಾದರೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಬೆಂಕಿಯ ಹೊಣೆಯನ್ನು ಇನ್ನೂ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದರು.

ಮತ್ತಷ್ಟು ಓದಿ: Manipur Violence: ಇಂಫಾಲ್‌ನಲ್ಲಿ ಮನೆಗಳಿಗೆ ಬೆಂಕಿ, ಸೇನೆ ಜತೆಗೆ ಘರ್ಷಣೆ, ಹಲವರಿಗೆ ಗಾಯ

ನೆಮ್ಚಾ ಕಿಪ್‌ಗೆನ್ ಕುಕಿಗೆ ಪ್ರತ್ಯೇಕ ಆಡಳಿತವನ್ನು ಒತ್ತಾಯಿಸಿದ 10 ಕುಕಿ ಶಾಸಕರಲ್ಲಿ ಒಬ್ಬರು. ರಾಜ್ಯದಲ್ಲಿ ಇತ್ತೀಚಿನ ಹಿಂಸಾಚಾರದಲ್ಲಿ, ಕಳೆದ 24 ಗಂಟೆಗಳಲ್ಲಿ ಮಹಿಳೆ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಖಾಮೆನ್ಲೋಕ್ ಪ್ರದೇಶದಲ್ಲಿ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:48 am, Fri, 16 June 23