ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಳ್ಳಲು ಕಾರಣ ಇಲ್ಲಿದೆ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಕಲಹಗಳಿಗೆ ಮ್ಯಾನ್ಮಾರ್​ನಿಂದ ಬಂದ ಉಗ್ರಗಾಮಿ ಗುಂಪುಗಳೇ ಮೂಲ ಕಾರಣ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಮ್ಯಾನ್ಮಾರ್​ನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಯುದ್ಧಕ್ಕೆ ಪ್ರಚೋದನೆ ನೀಡಿದ್ದರು. ಈಗ ಮಣಿಪುರದಲ್ಲಿ ಕುಕಿ ಹಾಗೂ ಮೈತಿ ಸಮುದಾಯ ಹಾಗೂ ಕ್ರಿಶ್ಚಿಯನ್ ನಡುವೆ ಹಿಂಸಾಚಾರ ಹುಟ್ಟಿಗೂ ಕಾರಣರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಳ್ಳಲು ಕಾರಣ ಇಲ್ಲಿದೆ
ಮಣಿಪುರ ಹಿಂಸಾಚಾರ
Follow us
ನಯನಾ ರಾಜೀವ್
|

Updated on:Dec 20, 2024 | 12:06 PM

ಮ್ಯಾನ್ಮಾರ್​ನಲ್ಲಿ ಆಶ್ರಯ ಪಡೆದಿದ್ದ ಹಾಗೂ ಅದರ ಅಂತರ್ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತದ ಉಗ್ರಗಾಮಿ ಗುಂಪು ಈ ವರ್ಷ ಮಣಿಪುರಕ್ಕೆ ಒಂದೊಂದಾಗಿ ಹಿಂದಿರುಗುತ್ತಿವೆ. ಹೀಗಾಗಿ ಮಣಿಪುರದ ಪರಿಸ್ಥಿತಿ ಹದಗೆಡುತ್ತಿದೆ. ಮ್ಯಾನ್ಮಾರ್​ನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಯುದ್ಧಕ್ಕೆ ಪ್ರಚೋದನೆ ನೀಡಿದ್ದರು. ಈಗ ಮಣಿಪುರದಲ್ಲಿ ಕುಕಿ ಹಾಗೂ ಮೈತಿ ಸಮುದಾಯ ಹಾಗೂ ಕ್ರಿಶ್ಚಿಯನ್ ನಡುವೆ ಹಿಂಸಾಚಾರ ಹುಟ್ಟಿಗೂ ಕಾರಣರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 2023ರಿಂದ ಸುಮಾರು 260 ಮಂದಿ ಸಾವನ್ನಪ್ಪಿದ್ದಾರೆ, 60 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಭಾರತೀಯ ಮಿಲಿಟರಿ ಅಧಿಕಾರಿಗಳು ಹಾಗೂ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಉಗ್ರಗಾಮಿಗಳು ಗಡಿಯನ್ನು ದಾಟಿ ಮಣಿಪುರಕ್ಕೆ ಬರುತ್ತಿದ್ದಂತೆ ಹೊಸ ಸಂಘರ್ಷಗಳು ತೆರೆದುಕೊಳ್ಳುತ್ತಿವೆ.

ಫೈಟರ್‌ಗಳು ರಾಕೆಟ್ ಲಾಂಚರ್‌ಗಳು ಸೇರಿದಂತೆ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ನವೆಂಬರ್‌ನಲ್ಲಿ ಮಾತ್ರ 20 ಜನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಫೆಡರಲ್ ಸರ್ಕಾರವು ಮಣಿಪುರದಲ್ಲಿ 10,000 ಹೆಚ್ಚು ಸೈನಿಕರನ್ನು ನಿಯೋಜಿಸುವುದಾಗಿ ಘೋಷಿಸಿತು.

10 ವರ್ಷಗಳ ಹಿಂದೆ ನಾವು ನಿಯಂತ್ರಿಸಿದ್ದ ದಂಗೆಕೋರರು ಮತ್ತೆ ಮುನ್ನಲೆಗೆ ಬಂದಿದ್ದಾರೆ ಎಂದು ಮಣಿಪುರದ ಪೊಲೀಸ್ ಮಾಜಿ ಮುಖ್ಯಸ್ಥ ಯುಮ್ನಮ್ ಹೇಳಿದ್ದಾರೆ. ಕೆಲವರು ಮ್ಯಾನ್ಮಾರ್​ನಿಂದ ಹಿಂದಿರುಗುತ್ತಿದ್ದಾರೆ, ಕೆಲವರು ಈಗಾಗಲೇ ಬಂದಿದ್ದಾರೆ. ಮಣಿಪುರವು ಭಾರತದ ಈಶಾನ್ಯದಲ್ಲಿ 3.2 ಮಿಲಿಯನ್ ಜನರಿರುವ ಗುಡ್ಡಗಾಡು, ಅರಣ್ಯ ಪ್ರದೇಶವಾಗಿದ್ದು, ಮ್ಯಾನ್ಮಾರ್‌ನ ಗಡಿಯಲ್ಲಿದೆ.

ಮತ್ತಷ್ಟು ಓದಿ: ರಾಕೆಟ್ ದಾಳಿಯ ನಂತರ ಮಣಿಪುರದ ಜಿರಿಬಾಮ್​​ನಲ್ಲಿ ಹಿಂಸಾಚಾರ, 4 ಸಾವು

ರಾಜ್ಯದ ಸಮೃದ್ಧ ಇಂಫಾಲ್ ಕಣಿವೆ ಪ್ರದೇಶದಲ್ಲಿ ವಾಸಿಸುವ ಮೈತಿ, ಹೆಚ್ಚು ಬಡತನದ ಬೆಟ್ಟಗಳಲ್ಲಿ ವಾಸಿಸುವ ಐತಿಹಾಸಿಕವಾಗಿ ಹಿಂದುಳಿದ ಕುಕಿಗಳಿಗೆ ನೀಡಿದ ಸರ್ಕಾರಿ ಪ್ರಯೋಜನಗಳನ್ನು ನೀಡುವ ನ್ಯಾಯಾಲಯದ ಆದೇಶದಿಂದ ಕಳೆದ ವರ್ಷ ಅಲ್ಲಿ ಹೋರಾಟವು ಕಿಡಿ ಹೊತ್ತಿಸಿತ್ತು.

ಹಿಂಸಾಚಾರವನ್ನು ಕಡಿಮೆ ಮಾಡಲು ಭದ್ರತಾ ಪಡೆಗಳು ಎರಡು ಗುಂಪುಗಳ ನಡುವೆ ಬಫರ್ ವಲಯನ್ನು ನಿರ್ಮಿಸಲಾಗಿದೆ. ಕುಕಿಗಳು, ಕಚಿನ್ ಬಂಡುಕೋರರ ಬೆಂಬಲವನ್ನು ಹೊಂದಿದ್ದಾರೆ.ಮಣಿಪುರಕ್ಕೆ ಮರಳಿದ ಉಗ್ರರ ಸಂಖ್ಯೆ ಇಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ.

ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಅಧಿಕಾರಿಗಳು ತಡೆದ ಕೆಲವರು ಸೇರಿದಂತೆ 100 ಕ್ಕೂ ಹೆಚ್ಚು ಮೈಟಿ ಬಂಡುಕೋರರನ್ನು ಕಳೆದ ವರ್ಷ ಮಣಿಪುರದಲ್ಲಿ ಮತ್ತು 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅದೇ ಅವಧಿಯಲ್ಲಿ ಸುಮಾರು 50 ಕುಕಿ ದಂಗೆಕೋರರನ್ನು ಬಂಧಿಸಲಾಗಿದೆ ಎಂದು ಡೇಟಾ ತೋರಿಸುತ್ತದೆ.

ಮಣಿಪುರದಲ್ಲಿ ಬಳಸಲಾಗುತ್ತಿರುವ ಹಲವು ಶಸ್ತ್ರಾಸ್ತ್ರಗಳನ್ನು ಸಂಘರ್ಷದ ಆರಂಭಿಕ ತಿಂಗಳುಗಳಲ್ಲಿ ರಾಜ್ಯದ ಶಸ್ತ್ರಾಸ್ತ್ರಗಳಿಂದ ಲೂಟಿ ಮಾಡಲಾಗಿತ್ತು. ಈ ವರ್ಷ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮ್ಯಾನ್ಮಾರ್‌ನಿಂದ ತರಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:03 pm, Fri, 20 December 24

ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್