AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಮುಸ್ಲಿಮರ ಮನೆಯಿಂದ ಹಿಂದೂ ಹುಡುಗಿಯರನ್ನು ರಕ್ಷಿಸುವ ಈ ವಿಡಿಯೋದ ನಿಜಾಂಶ ಏನು?

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಕಂಡುಬಂದಿದೆ. ಇದೊಂದು ನೈಜ್ಯ ಕಿಡ್ನಾಪ್ ಘಟನೆ ಎಂಬಂತೆ ಸ್ಕ್ರಿಪ್ಟ್ ಮಾಡಿರುವ ವಿಡಿಯೋ ಆಗಿದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತಿದೆ. 7.5 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಈ ಯೂಟ್ಯೂಬ್ ಚಾನೆಲ್​ನಲ್ಲಿ ವೈರಲ್ ಕ್ಲಿಪ್‌ನಂತಹ ಅನೇಕ ಸ್ಕ್ರಿಪ್ಟ್ ವಿಡಿಯೋಗಳನ್ನು ಕಾಣಬಹುದು.

Fact Check: ಮುಸ್ಲಿಮರ ಮನೆಯಿಂದ ಹಿಂದೂ ಹುಡುಗಿಯರನ್ನು ರಕ್ಷಿಸುವ ಈ ವಿಡಿಯೋದ ನಿಜಾಂಶ ಏನು?
ವೈರಲ್​ ವಿಡಿಯೋ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2024 | 11:00 AM

ಅಪಹರಣಕಾರರು ಹುಡುಗಿಯರನ್ನು ಮನೆಯೊಂದರಲ್ಲಿ ಬಚ್ಚಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಇಬ್ಬರು ವ್ಯಕ್ತಿಗಳು ಮನೆಯಿಂದ ಅನೇಕ ಹಿಂದೂ ಮಹಿಳೆಯರನ್ನು ರಕ್ಷಿಸವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಇದು ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಎಂಬ ಹೇಳಿಕೆಯೊಂದಿಗೆ ವೈರಲ್ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ವಿವಿಧ ಹೇಳಿಕೆಯೊಂದಿಗೆ ಅನೇಕರು ಫೇಸ್​ಬುಕ್, ಎಕ್ಸ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ನಿಜಕ್ಕೂ ಇಲ್ಲಿ ಮುಸ್ಲಿಂ ಪುರುಷರ ಮನೆಯಿಂದ ಹಿಂದೂ ಹುಡುಗಿಯರನ್ನು ರಕ್ಷಿಸಲಾಗಿದೆಯೇ?. ವೈರಲ್ ವಿಡಿಯೋದ ಸತ್ಯಾಂಶ ಇಲ್ಲಿದೆ ನೋಡಿ.

ಎಕ್ಸ್ ಬಳಕೆದಾರರೊಬ್ಬು ಈ ವೈರಲ್ ಕ್ಲಿಪ್ ಅನ್ನು ಹಂಚಿಕೊಂಡು, ‘‘ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಅಪಹರಿಸುತ್ತಾರೆ. ಲವ್ ಜಿಹಾದ್’’ ಎಂದು ಬರೆದುಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಮಾತನಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಮನೆಯಿಂದ ಶಬ್ಧಗಳು ಬರುತ್ತಿವೆ ಎಂದು ಮಹಿಳೆಯೊಬ್ಬರು ಯುವಕನಿಗೆ ಹೇಳುವುದರೊಂದಿಗೆ ವೈರಲ್ ವಿಡಿಯೋ ಪ್ರಾರಂಭವಾಗುತ್ತದೆ. ಒಬ್ಬ ವ್ಯಕ್ತಿ ಬಾಗಿಲು ತೆರೆದಾಗ, ಮಹಿಳೆಯೊಂದಿಗೆ ಯುವಕನೊಬ್ಬ ದಾಳಿ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ಯುವಕ ಮೊದಲು ಕ್ಯಾಮೆರಾಗಳನ್ನು ಆಫ್ ಮಾಡಲು ಹೇಳುತ್ತಾನೆ. ಹುಡುಗಿಯರು ಎಲ್ಲಿದ್ದಾರೆ, ಹುಡುಗಿಯರು ಎಲ್ಲಿ ಎಂದು ಕೇಳಿದಾಗ.. ಒಳಗಿರುವ ವ್ಯಕ್ತಿ ಮನೆಯಲ್ಲಿ ಹುಡುಗಿ ಇಲ್ಲ ಎಂದು ಹೇಳುತ್ತಾನೆ. ಆಗ ಹೊಡೆದಾಟ ನಡೆಯುತ್ತದೆ. ಮನೆಯ ಹಾಲ್ ನಿಂದ ಮೇಲಿನ ಮಹಡಿಗೆ ಹೋಗುತ್ತಾರೆ. ಮಲಗುವ ಕೋಣೆಯ ಮುಂದೆ ನಿಂತಾಗ ಹುಡುಗಿಯರ ಕಿರುಚಾಟದ ಸದ್ದು ಕೇಳಿಸುತ್ತದೆ. ತಕ್ಷಣ ಬಾಗಿಲು ತೆರೆದು ನೋಡಿದಾಗ ಅದರಲ್ಲಿ ಹುಡುಗಿಯರನ್ನು ಕಟ್ಟಿರುವುದು ಕಾಣಿಸುತ್ತದೆ. ಹೊರಗೆ ಬಂದ ಹುಡುಗಿಯರು ಅಳುತ್ತಿರುವುದು ಕಂಡು ಬಂತು. ಇನ್ನೊಂದು ಕೋಣೆಯಲ್ಲಿ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋದಲ್ಲಿ ಮೂವರು ಹುಡುಗಿಯರನ್ನು ಮನೆಯಿಂದ ರಕ್ಷಿಸಲಾಗಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಕಂಡುಬಂದಿದೆ. ಇದೊಂದು ನೈಜ್ಯ ಕಿಡ್ನಾಪ್ ಘಟನೆ ಎಂಬಂತೆ ಸ್ಕ್ರಿಪ್ಟ್ ಮಾಡಿರುವ ವಿಡಿಯೋ ಆಗಿದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಫೆಬ್ರವರಿ 12, 2023 ರಂದು “ನವೀನ್ ಜಂಗ್ರಾ” ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಇದೇ ವಿಡಿಯೋದ ದೀರ್ಘ ಆವೃತ್ತಿ ನಮಗೆ ಸಿಕ್ಕಿದೆ. ಈ ವಿಡಿಯೋದ 22-ಸೆಕೆಂಡ್‌ನಲ್ಲಿ ” ಈ ವಿಡಿಯೋವನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ” ಎಂದು ಬರೆಯಲಾಗಿದೆ.

7.5 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಈ ಯೂಟ್ಯೂಬ್ ಚಾನೆಲ್​ನಲ್ಲಿ ವೈರಲ್ ಕ್ಲಿಪ್‌ನಂತಹ ಅನೇಕ ಸ್ಕ್ರಿಪ್ಟ್ ವಿಡಿಯೋಗಳನ್ನು ಕಾಣಬಹುದು. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಿಸಿರುವ ವ್ಯಕ್ತಿಗಳು ಈ ಚಾನೆಲ್​ನಲ್ಲಿ ಅಪ್ಲೋಡ್ ಮಾಡಲಾದ ಹೆಚ್ಚಿನ ವಿಡಿಯೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಖಾಸಗಿ ವೆಬ್​ಸೈಟ್ ಒಂದು ಈ ಬಗ್ಗೆ ವರದಿ ಮಾಡುವಾಗ, ಈ ಸ್ಕ್ರಿಪ್ಟ್ ವಿಡಿಯೋದ ಸೂತ್ರದಾರ ನವೀನ್ ಜಾಂಗ್ರಾ ಅವರನ್ನು ಸಂಪರ್ಕಿಸಿದೆ. ಅವರು ಹೇಳಿದ್ದು ಹೀಗೆ: ‘‘ವಿಡಿಯೋವನ್ನು ಮನರಂಜನೆ ಮತ್ತು ಜಾಗೃತಿಗಾಗಿ ರಚಿಸಲಾಗಿದೆ. ಇಲ್ಲಿ ನೈಜ ಘಟನೆಯನ್ನು ತೋರಿಸಿಲ್ಲ. ಈ ವಿಡಿಯೋವನ್ನು ಕಳೆದ ವರ್ಷ ದೆಹಲಿಯಲ್ಲಿ ಚಿತ್ರೀಕರಿಸಲಾಗಿದೆ. ಐದು ವರ್ಷಗಳಿಂದ ನಾನು ಇಂತಹ ವಿಡಿಯೋಗಳನ್ನು ರಚಿಸುತ್ತಿದ್ದೇನೆ. ವಿಡಿಯೋದಲ್ಲಿರುವವರು ನಮ್ಮ ವಿಡಿಯೋಗಳಲ್ಲಿ ನಟಿಸಲು ಬಾಡಿಗೆಗೆ ಬಂದ ನಟರು’’ ಎಂದು ಹೇಳಿದ್ದಾರೆ.

ಹೀಗಾಗಿ ಈ ಘಟನೆಯಲ್ಲಿ ಯಾವುದೇ ಕೋಮುಕೋನವಿಲ್ಲ. ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ