Manish Sisodia: ಮನೀಶ್ ಸಿಸೋಡಿಯಾರ ಇಡಿ ಕಸ್ಟಡಿ 5 ದಿನಗಳವರೆಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ
ತನಿಖಾ ಸಂಸ್ಥೆ ಶುಕ್ರವಾರ ಅವರನ್ನು ತನಿಖೆ ಮಾಡಲು ಇನ್ನೂ ಏಳು ದಿನಗಳ ಕಸ್ಟಡಿಗೆ ಕೋರಿದಾಗ, ಇದುವರೆಗೆ ನೀವು ಮಾಡಿದ್ದು ಏನನ್ನು ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ. ಏಳು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ನಂತರ, ಅವರು ಹೆಚ್ಚಿನ ಕಸ್ಟಡಿಗೆ ಕೋರಿದರೆ ಅವರು ಇಲ್ಲಿವರೆಗೆ ಮಾಡಿದ್ದು ಏನು ಎಂಬುದನ್ನು ಅವರು ತೋರಿಸಬೇಕು"
ದೆಹಲಿ: ದೆಹಲಿ ಮದ್ಯ ಪ್ರಕರಣಕ್ಕೆ (Delhi liquor case) ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ (Manish Sisodia) ವಿರುದ್ಧದ ಆರೋಪಗಳ ತನಿಖೆಗೆ ಜಾರಿ ನಿರ್ದೇಶನಾಲಯವು (Enforcement Directorate) ಒಂದು ವಾರ ಕಾಲಾವಕಾಶ ಕೋರಿದ ನಂತರ ದೆಹಲಿ ನ್ಯಾಯಾಲಯ ಸಿಸೋಡಿಯಾ ಅವರ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಿದೆ. ಜಾರಿ ನಿರ್ದೇಶನಾಲಯವು ಪ್ರತಿದಿನ 30 ನಿಮಿಷದಿಂದ ಒಂದು ಗಂಟೆಯವರೆಗೆ ಮಾತ್ರ ನನ್ನನ್ನು ವಿಚಾರಣೆ ಮಾಡುತ್ತದೆ. ಇನ್ನು ಮುಂದೆ ನನ್ನನ್ನು ಜೈಲಿನಲ್ಲಿ ಇರಿಸುವ ಅಗತ್ಯವಿಲ್ಲ ಎಂದು ಎಎಪಿ ನಾಯಕ ಸಿಸೋಡಿಯಾ ವಾದಿಸಿದ್ದರು. ಒಂಬತ್ತು ತಿಂಗಳೊಳಗೆ ರದ್ದುಪಡಿಸಿದ ಹೊಸ ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐನಿಂದ ಬಂಧಿಸಲ್ಪಟ್ಟ ಮನೀಶ್ ಸಿಸೋಡಿಯಾ ಫೆಬ್ರವರಿ 26 ರಿಂದ ಜೈಲಿನಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ತನಿಖಾ ಸಂಸ್ಥೆ ಶುಕ್ರವಾರ ಅವರನ್ನು ತನಿಖೆ ಮಾಡಲು ಇನ್ನೂ ಏಳು ದಿನಗಳ ಕಸ್ಟಡಿಗೆ ಕೋರಿದಾಗ, ಇದುವರೆಗೆ ನೀವು ಮಾಡಿದ್ದು ಏನನ್ನು ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ. ಏಳು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ನಂತರ, ಅವರು ಹೆಚ್ಚಿನ ಕಸ್ಟಡಿಗೆ ಕೋರಿದರೆ ಅವರು ಇಲ್ಲಿವರೆಗೆ ಮಾಡಿದ್ದು ಏನು ಎಂಬುದನ್ನು ಅವರು ತೋರಿಸಬೇಕು” ಎಂದು ಸಿಸೋಡಿಯಾ ಅವರ ವಕೀಲರು ನ್ಯಾಯಾಲಯದಲ್ಲಿ ಕೇಳಿದ್ದಾರೆ. ನಾನು ಕಸ್ಟಡಿ ವಿಸ್ತರಣೆಯನ್ನು ವಿರೋಧಿಸುತ್ತಿದ್ದೇನೆ ಏಕೆಂದರೆ ಜಾರಿ ನಿರ್ದೇಶನಾಲಯವು ಸಿಬಿಐ ತನಿಖೆಯನ್ನು ನಡೆಸುತ್ತಿದೆ. ಇಡಿ ಅಪರಾಧದ ಆದಾಯವನ್ನು ಮಾತ್ರ ತನಿಖೆ ಮಾಡುತ್ತದೆ, ಅಪರಾಧವಲ್ಲ ಎಂದು ಸಿಸೋಡಿಯಾ ವಾದಿಸಿದ್ದು, ಇದು ಸಿಬಿಐನ ಕೆಲಸವಾಗಿದೆ ಎಂದಿದ್ದಾರೆ.
#WATCH | AAP leader and former Delhi Deputy CM Manish Sisodia being brought out of Rouse Avenue Court in Delhi.
Court has extended his ED remand by five more days in a money laundering case pic.twitter.com/4ZgSsdb5f6
— ANI (@ANI) March 17, 2023
ಮುಖಾಮುಖಿಗಾಗಿ ಇಡಿ ಕಸ್ಟಡಿಯನ್ನು ವಿಸ್ತರಿಸಲು ಬಯಸುತ್ತಿದೆ, ಆ ಪ್ರಕರಣದಲ್ಲೂ ಅವರಿಗೆ ಕಸ್ಟಡಿ ಅಗತ್ಯವಿಲ್ಲ. ಅವರು ನನ್ನನ್ನು ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಮಾತ್ರ ಪ್ರಶ್ನಿಸುತ್ತಾರೆ. ನಿನ್ನೆಯಷ್ಟೇ ವಿಚಾರಣೆ ರಾತ್ರಿವರೆಗೆ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಇಡಿ, ಸಿಬಿಐ ಪ್ರಕರಣದಿಂದಾಗಿ ಅವರು ಮಾನಸಿಕ ಕಿರುಕುಳ ಬಗ್ಗೆ ದೂರು ನೀಡಿದ್ದರು ಎಂದಿದೆ.
ಸಿಸೋಡಿಯಾ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಹಲವು ಬಾರಿ ಬದಲಾಯಿಸಿದ್ದಾರೆ, ಇದರಿಂದಾಗಿ ₹ 1.38 ಕೋಟಿ ನಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪವನ್ನು ಉಲ್ಲೇಖಿಸಿದೆ.
ಇಡಿ ಫೋನ್ ಬಗ್ಗೆ ಮತ್ತೆ ಮಾತೆತ್ತುತ್ತಿದೆ. ಇದನ್ನು ಸಿಬಿಐ ಮತ್ತು ಇಡಿ ತಮ್ಮ ಮೊದಲ ರಿಮಾಂಡ್ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ. ಅವರು ಅದಕ್ಕಾಗಿ ಹೆಚ್ಚಿನ ರಿಮಾಂಡ್ ಬಯಸುತ್ತಾರೆಯೇ? ಎಫ್‌ಐಆರ್ ದಾಖಲಾದಾಗಿನಿಂದ ಅವರು ಏನು ಮಾಡುತ್ತಿದ್ದಾರೆಂದು ಇಡಿ ಸಮರ್ಥಿಸಿಕೊಳ್ಳಬೇಕು. ಅವರು ತನಿಖೆ ಶುರು ಮಾಡಿದ್ದು ಇಂದಿನಿಂದವೇ? ಎಂದು ಸಿಸೋಡಿಯಾ ಪರ ವಕೀಲರು ಕೇಳಿದ್ದಾರೆ.
ಸಿಸೋಡಿಯಾ ಅವರ ವಿಚಾರಣೆಯ ಸಮಯದಲ್ಲಿ ಸಿಬಿಐಗೆ ದೋಷಾರೋಪಣೆ ಮಾಡುವ ಯಾವುದನ್ನೂ ಕಂಡುಹಿಡಿಯಲಾಗಲಿಲ್ಲ. ಜಾಮೀನು ನೀಡಲು ಅವರು ಸಿದ್ಧರಿದ್ದಾರೆ. ಆದ್ದರಿಂದ ಹೊಸ ಪ್ರಕರಣವನ್ನು ದಾಖಲಿಸಲು ಮತ್ತೊಂದು ಏಜೆನ್ಸಿಯನ್ನು ತರಲಾಯಿತು. ಮನೀಶ್ ಸಿಸೋಡಿಯಾ ಅವರನ್ನು ಎಲ್ಲಾ ರೀತಿಯಲ್ಲಿಯೂ ಜೈಲಿನಲ್ಲಿ ಇಡುವುದನ್ನು ಅವರು ಬಯಸುತ್ತಾರೆ ಎಂದು ಎಎಪಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Fri, 17 March 23