Mann ki Baat: ಹಬ್ಬ, ಮಳೆಹನಿ, ಬೊಜ್ಜು, ಬೇಸಿಗೆ ರಜೆ: ಮೋದಿ ಮನ್​ ಕಿ ಬಾತ್​ನಲ್ಲಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಇಂದು ಮನ್​ ಕಿ ಬಾತ್​ನ 120ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಯೋಗ, ಮಳೆ ನೀರು, ಜಲ ಸಂರಕ್ಷಣೆ, ಬೇಸಿಗೆ ರಜೆ ಇವೆಲ್ಲದರ ಕುರಿತು ಮಾತನಾಡಿದರು. ಹೊಸ ವರ್ಷವನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ವಿಶಿಷ್ಟ ಹೆಸರುಗಳೊಂದಿಗೆ ಬರಮಾಡಿಕೊಳ್ಳುತ್ತಾರೆ. ಇದನ್ನೇ ವಿವಿಧತೆಯಲ್ಲಿ ಏಕತೆ ಎನ್ನುತ್ತೇವೆ ಎಂದರು.

Mann ki Baat: ಹಬ್ಬ, ಮಳೆಹನಿ, ಬೊಜ್ಜು, ಬೇಸಿಗೆ ರಜೆ: ಮೋದಿ ಮನ್​ ಕಿ ಬಾತ್​ನಲ್ಲಿ ಹೇಳಿದ್ದೇನು?
ನರೇಂದ್ರ ಮೋದಿ
Image Credit source: Mint

Updated on: Mar 30, 2025 | 11:44 AM

ನವದೆಹಲಿ, ಮಾರ್ಚ್​ 30: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಮನ್​ ಕಿ ಬಾತ್​(Mann Ki Baat)ನ 120 ನೇ ಸಂಚಿಕೆಯಲ್ಲಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕನ್ನಡ, ಮರಾಠಿ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹೊಸ ವರ್ಷವನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ವಿಶಿಷ್ಟ ಹೆಸರುಗಳೊಂದಿಗೆ ಬರಮಾಡಿಕೊಳ್ಳುತ್ತಾರೆ. ಇದನ್ನೇ ವಿವಿಧತೆಯಲ್ಲಿ ಏಕತೆ ಎನ್ನುತ್ತೇವೆ ಎಂದರು.

ಇಷ್ಟು ದಿನ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಸಲಹೆಗಳನ್ನು ಕೊಡಲಾಗುತ್ತಿತ್ತು, ಈಗ ಪರೀಕ್ಷೆಗಳು ಮುಗಿದಿವೆ ಬೇಸಿಗೆ ರಜೆ ಶುರುವಾಗುತ್ತಿದೆ. ಹೊಸ ಹವ್ಯಾಸವನ್ನು ಅಳವಡಿಸಿಕೊಳ್ಳುವ ಜೊತೆಗೆ ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಬೆಳೆಸಿಕೊಳ್ಳುವ ಸಮಯ ಇದು. ಇಂದು ಕಲಿಯಲು ಸಾಕಷ್ಟು ವೇದಿಕೆಗಳಿವೆ. ಕೇವಲ ಶಾಲೆಯಲ್ಲಿ ಮಾತ್ರ ಕಲಿಯಬೇಕು ಎಂದೇನಿಲ್ಲ.ಯಾವುದೇ ಸಂಸ್ಥೆ, ಶಾಲೆ, ಸಾಮಾಜಿಕ ಸಂಸ್ಥೆ ಅಥವಾ ಕೇಂದ್ರಗಳು ಬೇಸಿಗೆ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರೆ ಅದನ್ನು #MYHOLIDAYS ನೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ.

ಇದನ್ನೂ ಓದಿ
Mann Ki Baat: ಕರ್ನಾಟಕದ ಹುಲಿ ವೇಷ ಕುಣಿತ ಹಾಡಿ ಹೊಗಳಿದ ಪ್ರಧಾನಿ ಮೋದಿ
ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದ ಮೋದಿ
ಸಂವಿಧಾನವು ನಮ್ಮನ್ನು ಉತ್ತಮ ಮಾರ್ಗದೆಡೆ ಕೊಂಡೊಯ್ಯುವ ದೀಪವಿದ್ದಂತೆ: ಮೋದಿ
Mann Ki Baat: ಅಮ್ಮನ ಹೆಸರಲ್ಲಿ ಗಿಡ ನೆಡುವ ಅಭಿಯಾನಕ್ಕೆ ಪ್ರಧಾನಿ ಕರೆ

ಜಲಸಂರಕ್ಷಣೆ ಕುರಿತು ಮೋದಿ ಸಲಹೆ
ಮಳೆ ಹನಿಗಳನ್ನು ಸಂರಕ್ಷಿಸುವ ಮೂಲಕ ನಾವು ಬಹಳಷ್ಟು ನೀರನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ ಈ ಅಭಿಯಾನದ ಅಡಿಯಲ್ಲಿ , ದೇಶದ ಹಲವು ಭಾಗಗಳಲ್ಲಿ ನೀರಿನ ಸಂರಕ್ಷಣೆಗಾಗಿ ಅಭೂತಪೂರ್ವ ಕೆಲಸ ಮಾಡಲಾಗಿದೆ. ಕಳೆದ 7-8 ವರ್ಷಗಳಲ್ಲಿ 11 ಶತಕೋಟಿ ಘನ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನದನ್ನು ಹೊಸದಾಗಿ ನಿರ್ಮಿಸಲಾದ ಟ್ಯಾಂಕ್‌ಗಳು, ಕೊಳಗಳು ಮತ್ತು ಇತರ ನೀರಿನ ಪುನರ್ಭರ್ತಿ ರಚನೆಗಳ ಮೂಲಕ ನೀರನ್ನು ಸಂರಕ್ಷಿಸಲಾಗಿದೆ ಎಂದರು.

ಭಾರತದಾದ್ಯಂತ ವಿವಿಧ ಹಬ್ಬಗಳ ರೂಪದಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ ಭಾರತೀಯ ಹೊಸ ವರ್ಷಕ್ಕೆ ಪ್ರಧಾನಿ ಮೋದಿ ಶುಭಾಶಯ ಕೋರಿದರು. ಈ ಶುಭ ಸಂದರ್ಭವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಉತ್ಸಾಹವನ್ನು ತರಲಿ, ಇದು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದಲ್ಲಿ ಹೊಸ ಶಕ್ತಿಯನ್ನು ತುಂಬಲಿ ಎಂದಿದ್ದಾರೆ. ಯೋಗ ದಿನಕ್ಕೆ ಹೆಚ್ಚಿನ ದಿನಗಳು ಉಳಿದಿಲ್ಲ, ಹೀಗಾಗಿ ನೀವು ನಿಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡಿಲ್ಲವೆಂದರೆ ತಡಮಾಡಬೇಡಿ, ಆರೋಗ್ಯವಂತ ಜೀವನಶೈಲಿಯನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ಓದಿ: Modi Mann Ki Baat: ಭಾರತದ ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಮಹಾನ್ ನಾಯಕರ ಧ್ವನಿ ಕೇಳಿಸಿದ ಪ್ರಧಾನಿ ಮೋದಿ

ಸಾಂಪ್ರದಾಯಿಕ ಹೊಸ ವರ್ಷವನ್ನು ಗುರುತಿಸಲು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ವಿವಿಧ ಹಬ್ಬಗಳಾದ ಯುಗಾದಿ, ಚೇತಿ ಚಂದ್, ಸಾಜಿಬು ಚೈರೋಬಾ, ನವ್ರೆಹ್ ಮತ್ತು ಗುಡಿ ಪಾಡ್ವಾ ಸಂದರ್ಭದಲ್ಲಿ ಮೋದಿ ಶುಭಾಶಯಗಳನ್ನು ಕೋರಿದರು. ಅಕ್ಟೋಬರ್ 2014 ರಲ್ಲಿ ಪ್ರಾರಂಭವಾದ ಮನ್ ಕಿ ಬಾತ್, ಮಹಿಳೆಯರು, ವೃದ್ಧರು ಮತ್ತು ಯುವಕರನ್ನು ಒಳಗೊಂಡ ಭಾರತೀಯ ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ