ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ದೇಶದಲ್ಲಿ ಮುಂದಿನ ಹಂತದ ವಿಶ್ವದ ಅತಿದೊಡ್ಡ ಇನಾಕ್ಯುಲೇಷನ್ ಡ್ರೈವ್ ಆರಂಭವಾಗಿದ್ದು 18 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಅಭಿಯಾನ ಶುರುವಾದ ಕೆಲವೇ ದಿನಗಳ ಬಳಿಕ ಇಂದು ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮ ಬಂದಿದ್ದು ಮೋದಿ ಮಾತನಾಡಲಿದ್ದಾರೆ.
ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ 78 ನೇ ಸಂಚಿಕೆಯಾಗಿದ್ದು, ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಪಿಎಂಒನಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಮತ್ತು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಎಐಆರ್ ನ್ಯೂಸ್ ವೆಬ್‌ಸೈಟ್ www.newsonair.com ಮತ್ತು ನ್ಯೂಸೊನೈರ್ ಮೊಬೈಲ್ ಆ್ಯಪ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
Tune in at 11 AM tomorrow. #MannKiBaat pic.twitter.com/8McIhiEeI0
— Narendra Modi (@narendramodi) June 26, 2021
ನಿನ್ನೆ, ಪ್ರಧಾನಿ ನರೇಂದ್ರ ಮೋದಿ ಹಳೆಯ ಮನ್ ಕಿ ಬಾತ್ ಎಪಿಸೋಡ್ ಅನ್ನು ಹಂಚಿಕೊಂಡಿದ್ದಾರೆ, ಇದು ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನದಂದು ಮಾದಕವಸ್ತು ಭೀತಿಯನ್ನು ನಿವಾರಿಸುವ ಹಲವು ಅಂಶಗಳನ್ನು ಒಳಗೊಂಡಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
Let us reiterate our commitment to #ShareFactsOnDrugs and realise our vision of a Drugs Free India. Remember- addiction is neither cool nor a style statement. Sharing an old #MannKiBaat episode which contained many aspects of overcoming the drugs menace. https://t.co/0XJpOApzbX
— Narendra Modi (@narendramodi) June 26, 2021
ಕೊರೊನಾ ವೈರಸ್ ಮೂರನೇ ಅಲೆಯನ್ನು ಎದುರಿಸಲು ಭಾರತ ಸಜ್ಜಾಗುತ್ತಿದೆ. ಈ ಕಾರಣ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಹಾಗೂ ಈ ಹಿಂದೆ ನಡೆದ ಕಾರ್ಯಕ್ರಮಗಳ ಸಮಯದಲ್ಲಿ ಭಾರತ ಕೊರೊನಾದ ಎರಡನೇ ಅಲೆಯನ್ನು ಎದುರಿಸುತ್ತಿತ್ತು. ಆಗ ಕೊರೊನಾದಿಂದಾಗಿ ಭಾರತದಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿದ್ದವು. ಮತ್ತು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಬೆಡ್ಗಳ ಕೊರತೆ ಉಂಟಾಗಿತ್ತು. ಇನ್ನು ಕಳೆದ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದ ದಿನದಂದೇ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಳು ವರ್ಷದ ಆಳ್ವಿಕೆಯನ್ನು ಪೂರೈಸಿದ ದಿನವಾಗಿತ್ತು.
Published On - 9:01 am, Sun, 27 June 21